‘ನಾನು ಎಲ್ಲೇ ಹೋದರು ಜನರು ನನ್ನ ಮದುವೆ ಯಾವಾಗ ಮದುವೆ ಯಾವಾಗ ಎಂದು ಕೇಳುತ್ತಲೇ ಇರುತ್ತಾರೆ. ಮದುವೆ ಮಾಡಿಕೊಳ್ಳುವುದಕ್ಕೆ ತುಂಬಾ ಸಮಯವಿದೆ. ನಾನು ಮೊದಲು ಕೆಲಸ ಮಾಡಬೇಕು. ಮದುವೆ ಅನ್ನೋದು ಒಂದು ಸುಂದರ ಅನುಭವ ಸುಮ್ಮನೆ ಯಾರ್ಯಾರನ್ನೋ ಮದುವೆ ಮಾಡಿಕೊಳ್ಳಲು ಆಗುವುದಿಲ್ಲ. ದಯವಿಟ್ಟು ನನ್ನ ಮದುವೆ ಬಗ್ಗೆ ಮಾತ್ರ ಕೇಳಬೇಡಿ. ಎಷ್ಟು ಸಲ ಹೇಳಿದ್ದರೂ ಅಭಿಮಾನಿಗಳು ಅದೇ ಹೇಳುತ್ತಾರೆ’
‘ಜೀವನದಲ್ಲಿ ನನಗೆ ಇರುವುದು ಒಂದೇ ಭಯ ನನ್ನನ್ನು ಯಾರಾದ್ರೂ ಬಿಟ್ಟು ಹೋಗುತ್ತಾರೆ ಅಂತ. ನನಗೆ ಆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಖಂಡಿತ ಇಲ್ಲ. ದಯವಿಟ್ಟು ಇಂತಹ ವಿಚಾರಗಳನ್ನು ಕೇಳಬೇಡಿ’ ಎನ್ನುತ್ತಲೇ ಅನು ಭಾವುಕರಾಗಿದ್ದಾರೆ.
‘ಮದುವೆ ಆಗಬೇಕು ಎಂದು ಮದುವೆ ಬಗ್ಗೆ ನನ್ನ ತಾಯಿ ಪದೇ ಪದೇ ಹೇಳುತ್ತಲೇ ಇರುತ್ತಾರೆ. ಮನೆಯಲ್ಲಿ ಏನೇ ನಡೆದರೂ ಮೊದಲು ನೀನು ಮದುವೆ ಆಗು ಎನ್ನುತ್ತಾರೆ. ನೀನು ಮದುವೆ ಮಾಡಿಕೋ ಎಲ್ಲಾ ಸರಿ ಹೋಗುತ್ತೆ ಎನ್ನುತ್ತಾರೆ. ಹೀಗೆಲ್ಲಾ ಹೇಳ್ತಾರೆ ಅಂತ ಮದುವೆ ಮಾಡಿಕೊಳ್ಳಲು ಆಗಲ್ಲ. ಇಲ್ಲಿ ಜನರು ನೀವು ಅರೇಂಜ್ಡ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಆಗ್ತೀರಾ ಎಂದು ಕೇಳುತ್ತಾರೆ….ಈ ವಿಚಾರದ ಬಗ್ಗೆ ನಾನು ಯೋಚನೆ ಮಾಡಿಲ್ಲ ಮೊದಲು ಲವ್ ಆಗಬೇಕು ಅಲ್ವಾ ನಮ್ಮನ್ನು ಯಾರು ಲವ್ ಮಾಡ್ತಾರೆ ಬಿಡಿ’ ಎಂದಿದ್ದಾರೆ ಅನುಶ್ರೀ.
ಈ ಮದುವೆ ಅನ್ನೋದು ಒಂದು ಬ್ಯೂಟಿಫುಲ್ ಅನುಭವ ನಾವು ಜೀವನ ಪೂರ್ತಿ ಕಾಪಾಡಿಕೊಳ್ಳಬೇಕಾದ ಸಂಬಂಧ, ಈ ಸಂಬಂಧದ ಒಳಗೆ ಇಬ್ಬರು ಹೇಗ್ಬೇಕು ಇದಕ್ಕೆಲ್ಲಾ ಸ್ವಲ್ಪ ಟೈಮ್ ಬೇಕಾಗುತ್ತದೆ. ನಿಮಗೆ ಏಜ್ ಆಯ್ತು ನಿಮ್ಮ ವಯಸ್ಸುಎ ಷ್ಟು ಅಂತಾ ಕೇಳುತ್ತಾರೆ ಹೀಗೆ ಹೇಳಿದರು ಎಂದು ನಾನು ಮದುವೆ ಆಗಲು ಆಗಲ್ಲ. ಈ ವಿಚಾರವನ್ನು ನಮ್ಮ ದೇವರು ನಮ್ಮ ಕೊರಗಜ್ಜನ ಮೇಲೆ ಬಿಡ್ತೀನಿ ದೇವರೇ ಎಲ್ಲಾ ನೋಡಿಕೊಳ್ಳುತ್ತಾನೆ’ ಎಂದು ಅನುಶ್ರೀ ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
