ಇತ್ತೀಚಿಗೆ ನಟ ಜಗ್ಗೇಶ್ ತಮ್ಮ 60 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. 60 ನೇ ವಸಂತಕ್ಕೆ ಕಾಲಿಟ್ಟ ಜಗ್ಗೇಶ್ ಅವರಿಗೆ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಶುಭಾಶಯವನ್ನು ತಿಳಿಸಿದ್ದರು. ಇದೀಗ ಜಗ್ಗೇಶ್ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಹಲವಾರು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಸಿನಿ ರಸಿಕರನ್ನು ಜಗ್ಗೇಶ್ ನಗಿಸಿದ್ದಾರೆ. ಇದೀಗ ಜಗ್ಗೇಶ್ ತಮ್ಮ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅದೇನೆಂದರೆ ತಮ್ಮ ಜೀವನಕಥನ ಪುಸ್ತಕ ರೂಪದಲ್ಲಿ ಬರಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಪತ್ರಿಕೆಯಲ್ಲಿ ಬಂದ ಹಳೆಯ ಲೇಖಕನವೊಂದನ್ನು ಹಂಚಿಕೊಂಡಿರುವ ಅವರು, ಸಹೋದರಿ ತುಂಗರೇಣುಕಾ ಅವರು ನನ್ನ ಕುರಿತಾಗಿ ಪುಸ್ತಕ ಬರೆಯುತ್ತಿದ್ದಾರೆ. ಶೀಘ್ರದಲ್ಲೇ ನಿಮ್ಮ ಮುಂದೆ ಎಂದು ಬರೆದುಕೊಂಡಿದ್ದಾರೆ.
ಹಿರಿಯ ಪತ್ರಕರ್ತೆ ತುಂಗರೇಣುಕಾ ಅವರು ಜಗ್ಗೇಶ್ ಕುರಿತಾಗಿ ಪುಸ್ತಕವೊಂದನ್ನು ಬರೆಯುತ್ತಿದ್ದು, ಈ ವಿಷಯವನ್ನು ಜಗ್ಗೇಶ್ ಹಂಚಿಕೊಂಡಿದ್ದಾರೆ. ತಮ್ಮ ಬದುಕಿನ ನಾನಾ ಘಟನೆಗಳನ್ನು ಈ ಪುಸ್ತಕದಲ್ಲಿ ತುಂಗರೇಣುಕಾ ಜಗ್ಗೇಶ್ ಅವರ ಜೀವನಕಥೆಯನ್ನು ಎಳೆಎಳೆಯಾಗಿ ಬರೆಯುತ್ತಿದ್ದಾರೆ. ಹೀಗಾಗಿ ಈ ಪುಸ್ತಕ ಯಾವಾಗ ಬಿಡುಗಡೆಯಾಗುತ್ತದೆ ಎಂದು ಅವರು ತಿಳಿಸಿಲ್ಲ. ಹೀಗಾಗಿ ಜಗ್ಗೇಶ್ ಅಭಿಮಾನಿಗಳ ಈ ಪುಸ್ತಕವನ್ನು ಓದಲು ಕಾತುರದಿಂದ ಕಾಯುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
