ಉದ್ಘಾಟನೆಯಾದ ಮರುದಿನವೇ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಿತ್ತುಕೊಂಡು ಬಂದಿದೆ. ರಸ್ತೆ ಕಿತ್ತು ಬಂದ ಹಿನ್ನೆಲೆ ಈ ಜಾಗದಲ್ಲಿ ದುರಸ್ತಿ ಕಾರ್ಯ ಆರಂಭಗೊಂಡಿದ್ದು, ಅದರ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ ಸಿಂಹ, ‘ರಸ್ತೆ ಕಿತ್ತು ಬಂದಿಲ್ಲ, Expansion joint ಬಳಿ ಇದ್ದ ಸಣ್ಣ ನ್ಯೂನ್ಯತೆಯನ್ನು ಸರಿಪಡಿಸಲಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಫೋಟೊ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಸಂಶಯ ವ್ಯಕ್ತಪಡಿಸಿದ್ದಾರೆ.
ಪ್ರತಾಪ್ ಸಿಂಹ ಯಾಕ್ ಹಿಂಗ್ ಆದ್ರು?
ಅಲ್ಲಿ ಕಿತ್ತೊಗಿರೋ ರಸ್ತೇನೆ ಬೇರೆ, ಇಲ್ಲಿ ಆ ವಯ್ಯ ಹಾಕಿರೋ ಪಟನೇ ಬೇರೆ?
ಸುಳ್ಳು ಸುದ್ದಿ ಹಾಕಿ ದಾರಿ ತಪ್ಪಿಸಬೇಡಿ ಅದರ ಬದಲು ಸರಿ ಪಡಿಸುವ ಅಂತೇಳಿ , ಮರ್ಯಾದೆ ಉಳಿಸಿಕೊಳ್ಳಿ#Bengaluru_Mysuru_Expressway https://t.co/PKpGUSri9u pic.twitter.com/9WRI0pihhG
— ರವಿ-Ravi ಆಲದಮರ (@AaladaMara) March 15, 2023
‘ಪ್ರತಾಪ್ ಸಿಂಹ ಅವರು ಕಿತ್ತೋಗಿರೊ ಮೈಸೂರು- ಬೆಂಗಳೂರು ಹೆದ್ದಾರಿಯನ್ನು ಸಮರ್ಥನೆ ಮಾಡೋದಿಕ್ಕೆ ಅದೆಲ್ಲಿದ್ದೋ ರಸ್ತೆಯ ಫೋಟೋವನ್ನು ಹಂಚಿದ್ದಾರೆ. ಕಿತ್ತೋಗಿರೊ ರಸ್ತೆಯ ಎರಡು ಬದಿಯಲ್ಲಿ ಕಪ್ಪು-ಬಿಳಿ ಬಣ್ಣವಿದ್ರೆ ಪ್ರತಾಪ ಸಮರ್ಥನೆ ಮಾಡಿ ಹಾಕಿರುವ ಚಿತ್ರದಲ್ಲಿ ಹಳದಿ- ಕಪ್ಪು ಬಣ್ಣವಿದೆ. ಹಾಗಾಗಿ ಜನ ದಿಕ್ಕು ತಪ್ಪಿಸುವುದಕ್ಕೂ ಮಿತಿ ಬೇಡವೇ?” ಎ೦ದು ಆಕ್ರೇಶ ವ್ಯಕ್ತಪಡಿಸುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
