ಸ್ಕೂಬಾ ಡೈವಿಂಗ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಸಮುದ್ರದಾಳಕ್ಕೆ ಹೋಗಿ ಅಲ್ಲಿರುವ ಜಲಚರಗಳನ್ನು ನೋಡುವುದು ಎಂದರೆ ಒಂದು ಆನಂದ. ಆದರೆ ಸ್ಕೂಬಾ ಡೈವಿಂಗ್ ಮಾಡುವ ಮುನ್ನ ಎಚ್ಚರ. ಇದಕ್ಕೆ ಸಣ್ಣ ಉದಾಹರಣೆ ಎಂದರೆ ಈ ವಿಡಿಯೋ.
ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಲು ತಯಾರಾಗಿ ನಿಂತಿದ್ದ ಮಹಿಳೆ ಇನ್ನೇನು ಸಮುದ್ರಕ್ಕೆ ಜಂಪ್ ಮಾಡಬೇಕು ಎನ್ನುವಷ್ಟರಲ್ಲಿ ಆಕೆಗೆ ಜೀವ ಬಾಯಿಗೆ ಬಂದಂತೆ ಆಗಿದೆ. ಏಕೆಂದರೆ ಇನ್ನು ಈ ಮಹಿಳೆ ಸಮುದ್ರಕ್ಕೆ ಜಂಪ್ ಮಾಡಬೇಕು ಎನ್ನುವಷ್ಟರಲ್ಲಿ ಶಾರ್ಕ್ ಒಂದು ಬಾಯಿ ತೆಗೆದುಕೊಂಡು ಆಕೆಯನ್ನು ನುಂಗಲು ಬಂದಿದೆ.
Jump in.. pic.twitter.com/cDjayUX3AS
— Wow Terrifying (@WowTerrifying) March 16, 2023
ಕೊನೆಕ್ಷಣದಲ್ಲಿ ಎಚೆತ್ತುಕೊಂಡ ಮಹಿಳೆ ಹಿಂದೆ ಸರಿದಿದ್ದಾರೆ. ಇಲ್ಲವಾದರೆ ಭಯಂಕರ ಶಾರ್ಕಿಗೆ ಆಹಾರವಾಗಬೇಕಿತ್ತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿ ನೆಟ್ಟಿಗರು ಹಲವು ರೀತಿಯ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
