IPL ಶುರುವಾಗಲು ಕ್ಷಣಗಣನೆ ಆರಂಭವಾಗಿದೆ. ಕ್ರಿಕೆಟ್ ಅಭಿಮಾನಿಗಳು IPL ಗಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ IPL ನಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಮಾಡಲು ಬಿಸಿಸಿಐ ತೀರ್ಮಾನಿಸಿದೆ.
ಇತ್ತೀಚಿಗೆ ಕ್ರಿಕೆಟ್ ನಲ್ಲಿ DRS ನಿಯಮವನ್ನು ಅಳವಡಿಸಲಾಗಿತ್ತು. ಇದಾದ ನಂತರ ವೈಡ್ ಮತ್ತು ನೋಬಾಲ್ ಗಳಿಗೂ ಸಹ DRS ತೆಗೆದುಕೊಳ್ಳಬಹುದು ಎಂದು BCCI ತಿಳಿಸಿತ್ತು. ಇದೀಗ ಟಾಸ್ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮತ್ತೊಂದು ನಿಯಮವನ್ನು ಜಾರಿಗೊಳಿಸುತ್ತಿದೆ.
ಈ ಹಿಂದೆ ಟಾಸ್ ನಂತರ ತಂಡಗಳು ಪ್ಲೇಯಿಂಗ್ 11 ಅನ್ನು ಘೋಷಿಸಬೇಕಿತ್ತು. ಆದರೆ ಇದೀಗ ಈ ವರ್ಷದ IPL ನಲ್ಲಿ ತಂಡಗಳಿಗೆ ಒಂದು ದೊಡ್ಡ ಬೋನಸ್ BCCI ಕೊಟ್ಟಿದೆ. ಅದೇನೆಂದರೆ ಟಾಸ್ ಮುಗಿದ ಬಳಿಕ ಕೂಡ ತಂಡದ ಪ್ಲೇಯಿಂಗ್ 11 ಅಲ್ಲಿ ಬದಲಾವಣೆಯನ್ನು ಮಾಡಬಹುದು.
ಈ ನಿಯಮವನ್ನು ಮೊದಲು SAT20 ಲೀಗ್‌ನಲ್ಲಿ ಪರಿಚಯಿಸಲಾಯಿತು. ಐಪಿಎಲ್ ಈ ನಿಯಮವನ್ನು ಸೇರಿಸಿದ ಎರಡನೇ ಟಿ20 ಲೀಗ್ ಆಗಲಿದೆ. ಇಲ್ಲಿಯವರೆಗೆ ಬಳಸಲಾಗುತ್ತಿರುವ ನಿಯಮದ ಪ್ರಕಾರ, ಟಾಸ್ ವೇಳೆ ನಾಯಕನು ತನ್ನ ಪ್ಲೇಯಿಂಗ್ ಇಲೆವೆನ್ ಹೇಳಬೇಕು. ಆದರೆ ಇದೀಗ ಟಾಸ್ ಮುಗಿದ ನಂತರ ಕೂಡ ಆಡುವ ಸ್ಥಿತಿಗೆ ಅನುಗುಣವಾಗಿ ತಂಡದ ಸದಸ್ಯರ ಬದಲಾವಣೆಯನ್ನು ಮಾಡಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
