ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸಾಧನೆ ಮಾಡಿರುವ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಸಚಿನ್ ತೆಂಡೂಲ್ಕರ್ ಬಿಟ್ಟರೆ ಭಾರತೀಯ ಕ್ರಿಕೆಟ್ ನಲ್ಲಿ ಹೆಚ್ಚು ಸಾಧನೆ ಮಾಡಿರುವುದು ಎಂದರೆ ಅದು ವಿರಾಟ್ ಕೊಹ್ಲಿ ಮಾತ್ರ. ಇದೀಗ ವಿರಾಟ್ ಕೊಹ್ಲಿ ಕುರಿತು 9 ನೇ ತರಗತಿಯ ಇಂಗ್ಲಿಷ್ ಪ್ರಶ್ನೆಪತ್ರಿಕೆಯಲ್ಲಿ ಪ್ರಶ್ನೆ ಕೇಳಲಾಗಿದೆ.
ಕಳೆದ ಹಲವು ವರ್ಷಗಳಿಂದ ಕೊಹ್ಲಿ ಬಗ್ಗೆ ಹಲವಾರು ಟೀಕೆಗಳು ಕೇಳಿಬರುತ್ತಿತ್ತು. ಏಕೆಂದರೆ ಯಾವಾಗಲು ಅಬ್ಬರಿಸುತ್ತಿದ್ದ ವಿರಾಟ್ ಬ್ಯಾಟ್ ಕಳೆದ ಕೆಲವು ವರ್ಷಗಳಿಂದ ಬಹಳ ಸೈಲೆಂಟ್ ಆಗಿತ್ತು. ಇದಾದ ಬಳಿಕ ತೀಕೆ ಮಾಡುತ್ತಿದ್ದವರಿಗೆ ಶತಕ ಸಿಡಿಸುವ ಮೂಲಕ ಸೈಲೆಂಟ್ ಮಾಡಿದ್ದರು. ಗೆಲುವಿಗೆ ಒಂದಲ್ಲ ಒಂದು ದಿನ ಗೌರವ ಸಿಗುತ್ತದೆ ಎಂಬುದು ಬಹಳ ಸತ್ಯ. ಇದಕ್ಕೆ ಒಂದು ಮುಖ್ಯ ಉದಾಹರಣೆ ಎಂದರೆ ವಿರಾಟ್ ಕೊಹ್ಲಿ ಕುರಿತು 9 ನೇ ತರಗತಿಯ ಇಂಗ್ಲಿಷ್ ಪ್ರಶ್ನೆಪತ್ರಿಕೆಯಲ್ಲಿ ಕೇಳಿರುವ ಪ್ರಶ್ನೆ.
A question for the English exam of 9th Standard.
Showing the picture from the hundred of Virat Kohli against Afghanistan in the Asia Cup. pic.twitter.com/j2bhv6p1pu
— Johns. (@CricCrazyJohns) March 25, 2023
ವಿರಾಟ್ ತನ್ನ ಬ್ಯಾಟ್ ಎತ್ತಿ ನಗುತ್ತಿರುವ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಕ್ರಿಕ್ ಕ್ರೇಜಿಜಾನ್ಸ್ ಎಂಬ ಟ್ವಿಟ್ಟರ್ ಬಳಕೆದಾರ ಈ ಫೋಟೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು,ಇದರಲ್ಲಿ 9 ನೇ ತರಗತಿಯ ಇಂಗ್ಲಿಷ್ ಪ್ರಶ್ನೆಪತ್ರಿಕೆಯಲ್ಲಿ ಕೇಳಲಾದ ಪ್ರಶ್ನೆ ಎಂದು ಬರೆದುಕೊಂಡಿದ್ದಾರೆ. ಇದೀಗ ವಿರಾಟ್ ಅಭಿಮಾನಿಗಳು ಈ ಫೋಟೋವನ್ನು ಎಲ್ಲಾ ಕಡೆ ಶೇರ್ ಮಾಡುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
