fbpx
ಸಮಾಚಾರ

ತಮ್ಮ ಜೀವನದ ಕೆಟ್ಟ ಕ್ಷಣದ ಬಗ್ಗೆ ನೆನೆದು ಕಣ್ಣೀರಿಟ್ಟ ಸಚಿವೆ ಸ್ಮೃತಿ ಇರಾನಿ!

ಕೇಂದ್ರ ಸರ್ಕಾರದ ಜವಳಿ ಖಾತೆ ಸಚಿವೆಯಾಗಿರುವ ಸ್ಮೃತಿ ಇರಾನಿ ರಾಜಕೀಯಕ್ಕೆ ಬರುವ ಮುಂಚೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದರು. ಕಳೆದ ವಾರವಷ್ಟೇ 47ನೇ ಹುಟ್ಟುಹಬ್ಬವನ್ನು ಇವರು ಆಚರಿಸಿಕೊಂಡಿದ್ದರು. ಈ ನಡುವೆ ಇವರು ಒಂದು ಸಂಧರ್ಶನದಲ್ಲಿ ತಮ್ಮ ಜೀವನದಲ್ಲಿ ಆದ ಅವಮಾನದ ಕುರಿತು ಮಾತನಾಡಿದರು.

ಕ್ಯೂಂ ಕಿ ಸಾಸ್​ ಭೀ ಕಭೀ ಬಹೂ ಥಿ ಧಾರಾವಾಹಿ (Serial) ಸಂದರ್ಭದಲ್ಲಿ ತಮಗೆ ಗರ್ಭಪಾತವಾಗಿ ರಕ್ತಸ್ರಾವವಾಗುತ್ತಿದ್ದರೂ, ಶೂಟಿಂಗ್​ಗೆ ಬರಲು ಸಾಧ್ಯವಿಲ್ಲ ಎಂದಾಗ ಅಲ್ಲಿದ್ದ ಕೆಲ ಕಲಾವಿದರ ತಮ್ಮನ್ನು ಎಷ್ಟು ಕೆಟ್ಟಿದ್ದಾಗಿ ನಡೆಸಿಕೊಂಡರು, ನಾನು ಸುಳ್ಳು ಹೇಳುತ್ತಿದ್ದೇನೆ ಎಂದಿರುವ ವಿಷಯವನ್ನು ಅವರು ತಿಳಿಸಿದ್ದರು. ‘ನನ್ನ ಮನೆಗೆ EMI ಗಳನ್ನು ಪಾವತಿಸಲು ನನಗೆ ಹಣದ ಅಗತ್ಯವಿದ್ದುದರಿಂದ ನಾನು ಮತ್ತೆ ಕೆಲಸಕ್ಕೆ ಹೋಗಿದ್ದೆ ಎಂದು ಅವರಿಗೆ ತಿಳಿದಿರಲಿಲ್ಲ. ಮರುದಿನ, ಇದು ಸುಳ್ಳು ಅಲ್ಲ ಎಂದು ಹೇಳಲು ನಾನು ಏಕ್ತಾಗೆ ನನ್ನ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ತೆಗೆದುಕೊಂಡು ಹೋಬೇಕಾಗಿ ಬಂದಿತು ಎಂದು ಹೇಳಿದರು.

ಧಾರಾವಾಹಿಯ ಶೂಟಿಂಗ್​ ಸಮಯದಲ್ಲಿ ಮೇಕಪ್‌ ಮ್ಯಾನ್ ಒಬ್ಬರು ತಮ್ಮನ್ನು ಅವಮಾನಿಸಿದ್ದ ವಿಷಯವನ್ನು ಸ್ಮೃತಿ ಇರಾನಿ ನೆನಪಿಸಿಕೊಂಡಿದ್ದಾರೆ. ‘ಅದು ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ’ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ ಮೊದ ಮೊದಲು ಆಗಿತ್ತು. ಆರಂಭದ ವರ್ಷದಲ್ಲಿ ದಿನವೊಂದಕ್ಕೆ 1,800 ರೂಪಾಯಿ ಕೊಡುತ್ತಿದ್ದರು. ನನ್ನ ಬಳಿ ಕಾರು ಇರಲಿಲ್ಲ, ನಾನು ಆಟೋ ರಿಕ್ಷಾದಲ್ಲೇ ಧಾರಾವಾಹಿ ಶೂಟಿಂಗ್ ಸೆಟ್‌ಗೆ ಓಡಾಡುತ್ತಿದ್ದೆ. ಆ ಸಮಯದಲ್ಲಿ ನನ್ನ ಮೇಕಪ್​ ಮ್ಯಾನ್​ (Make Up man) ಮಾಡಿದ ಅವಮಾನ ನನ್ನ ಜೀವನದಲ್ಲಿಯೇ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ ಸ್ಮೃತಿ.

ನಾನು ಆಟೋದಲ್ಲಿ ಬರುವುದನ್ನು ನೋಡಿದ ಮೇಕಪ್​ ಮ್ಯಾನ್​, ನಿಮಗೆ ನಾಚಿಗೆ ಆಗಲ್ವಾ? ನಾನು ಪ್ರತಿದಿನ ಕಾರಿನಲ್ಲಿ ಬರ್ತಿದ್ದೀನಿ, ನೀವೂ ನೋಡಿದರೆ ಆಟೋದಲ್ಲಿ ಬರ್ತೀರಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದರು. ಸ್ವಂತವಾಗಿ ಯಾವುದಾದರೂ ಗಾಡಿ ತಗೋಬಾರದಾ ಎಂದು ಕೇಳಿದರು. ಆಗ ನನಗೆ ತುಂಬಾ ಅವಮಾನ ಆಯಿತು. ಆದರೆ ಏನೂ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸೀರಿಯಲ್​ ಸೆಟ್​ಗೆ ಹೋದಾಗಲೆಲ್ಲವೂ ಅನುಮಾನವಾಗುತ್ತಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಸ್ಮೃತಿ ಇರಾನಿ ಕ್ಯೂಂ ಕಿ ಸಾಸ್​ ಭೀ ಕಭೀ ಬಹೂ ಥಿ ಧಾರಾವಾಹಿಯಲ್ಲಿ ತುಳಸಿ ಪಾತ್ರದಲ್ಲಿ ಸುಮಾರು ಎಂಟು ವರ್ಷಗಳವರೆಗೆ ಅಭಿನಯಿಸಿದ್ದರು. ಜೀ ಟಿವಿಯ ‘ರಾಮಾಯಣ’ ಧಾರಾವಾಹಿಯಲ್ಲಿ ಸ್ಮೃತಿ ಇರಾನಿ ಸೀತೆ ಪಾತ್ರದಲ್ಲಿ ನಟಿಸಿದ್ದರು. ಇನ್ನು ರಾಜಕೀಯ ಕ್ಷೇತ್ರದಲ್ಲಿ ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2014 ರಿಂದ 2016ರ ಅವಧಿಯಲ್ಲಿ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top