fbpx
ಸಮಾಚಾರ

RRR ತಂಡ 60 ಲಕ್ಷ ರೂ. ಕೊಟ್ಟು ಆಸ್ಕರ್​ ಸಮಾರಂಭದ ಟಿಕೆಟ್​ ಪಡೆಯಿತಾ? ಸ್ಪಷ್ಟನೆ ನೀಡಿದ ರಾಜಮೌಳಿ ಪುತ್ರ

ಇತ್ತೀಚಿಗೆ ರಾಜ್ ಮೌಳಿ ನಿರ್ದೇಶನದ RRR ಸಿನಿಮಾದ “ನಾಟು ನಾಟು” ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಇದು ನಮ್ಮ ಭಾರತಕ್ಕೆ ಒಂದು ಹೆಮ್ಮೆ ಎಂದು ಹೇಳಿದರೆ ತಪ್ಪಾಗಲಾರದು. ಆದರೆ RRR ಸಿನಿಮಾದ ಕುರಿತು ಇತ್ತೀಚಿಗೆ ಹಲವು ವಿವಾದಗಳು ಕೇಳಿ ಬರುತ್ತಿತ್ತು. ಇದೀಗ ಈ ವಿವಾದಗಳಿಗೆ ರಾಜಮೌಳಿ ಅವರ ಪುತ್ರ ಎಸ್​ಎಸ್​ ಕಾರ್ತಿಕೇಯ ಮೌನ ಮುರಿದಿದ್ದಾರೆ.

80 ಕೋಟಿ ರೂಪಾಯಿ ಸುರಿದು ಪ್ರಚಾರ ಮಾಡುವ ಮೂಲಕ ಆಸ್ಕರ್​ ಪಡೆಯಲು ರಾಜಮೌಳಿ ಪ್ರಯತ್ನಿಸಿದ್ದಾರೆ ಎಂದು ತೆಲುಗಿನ ನಿರ್ಮಾಪಕ ತಮ್ಮಾರೆಡ್ಡಿ ಭಾರದ್ವಜ ಅವರು ಈ ಹಿಂದೆ ಆರೋಪಿಸಿದ್ದರು. ಇದು ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ ಇದೀಗ ರಾಜಮೌಳಿ ಅವರ ಪುತ್ರ ಎಸ್​ಎಸ್​ ಕಾರ್ತಿಕೇಯ ಇದರ ಕುರಿತು ಮಾತನಾಡುವ ಮೂಲಕ ಗಾಸಿಪ್ ಗಳಿಗೆ ಬ್ರೆಕ್ ಹಾಕಿದ್ದಾರೆ.

ಆಸ್ಕರ್​ನ ಹಲವು ವಿಭಾಗಗಳಲ್ಲಿ ನಾಮಿನೇಟ್​ ಆಗಬೇಕು ಎಂಬುದು ‘ಆರ್​ಆರ್​ಆರ್​’ ತಂಡದ ಉದ್ದೇಶ ಆಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ‘ನಾಟು ನಾಟು..’ ಹಾಡು ಮಾತ್ರ ನಾಮಿನೇಟ್​ ಆಯಿತು. ಹಾಗಾಗಿ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಮತ್ತು ಗೀತರಚನಕಾರ ಚಂದ್ರಬೋಸ್​ ಹಾಗೂ ಅವರ ಪತ್ನಿಯರಿಗೆ ಮಾತ್ರ ಉಚಿತ ಪಾಸ್​ ನೀಡಲಾಯಿತು. ಇನ್ನುಳಿದವರು ಸ್ವಂತ ಹಣ ಖರ್ಚು ಮಾಡಿ ಪಾಸ್​ ಪಡೆದಿದ್ದು ನಿಜ ಎಂದು ಕಾರ್ತಿಕೇಯ ಹೇಳಿದ್ದಾರೆ. ಆದರೆ 60 ಲಕ್ಷ ಖರ್ಚು ಮಾಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top