ಇತ್ತೀಚಿನ ದಿನಗಳಲ್ಲಿ ನಾವು ರೈಲ್ವೆ ಅಪಘಾತಗಳ ಬಗ್ಗೆ ಕೇಳ್ತಾಇರುತ್ತೇವೆ. ಹಳಿ ತಲುಪಿ ಬಹಳಷ್ಟು ರೈಲುಗಳು ಅಪಘಾತವಾಗಿರುವುದನ್ನು ನಾವು ನೋಡಿದ್ದೇವೆ. ಇಂತದ್ದೇ ಒಂದು ಅಪಘಾತ ನಡೆಯುವ ಮುಂಚೆ ಅಜ್ಜಿ ಒಬ್ಬರು ಸಮಯಪ್ರಜ್ಞೆಯಿಂದ ಒಂದು ದೊಡ್ಡ ಅಪಘಾತವನ್ನು ತಡೆದಿದ್ದಾರೆ.
ಮಂಗಳೂರು ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಬಳಿ ರೈಲ್ವೆ ಹಳಿಗೆ ಮರ ಬಿದ್ದಿರುವುದನ್ನು 70 ವರ್ಷ ವಯಸ್ಸಿನ ಚಂದ್ರಾವತಿ ಗಮನಿಸಿದ್ದರು. ಇದೆ ವೇಳೆ ಮಂಗಳೂರು-ಮುಂಬೈ ಮತ್ಸ್ಯಗಂಧ ರೈಲು ಸಂಚರಿಸುತ್ತಿರುವುದನ್ನು ಈ ಮಹಿಳೆ ಗಮನಿಸಿದ್ದಾರೆ. ತಕ್ಷಣ ಮನೆಗೆ ಓಡಿ ಕೆಂಪು ವಸ್ತ್ರವನ್ನು ತಂದು ರೈಲು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮಹಿಳೆ ಕೆಂಪು ಬಟ್ಟೆಯನ್ನು ತೋರಿಸುತ್ತಿರುವುದನ್ನು ಗಮನಿಸಿದ ಲೋಕೋಪೈಲೆಟ್ ಅಪಾಯ ಅರಿತು ತಕ್ಷಣ ರೈಲು ನಿಲ್ಲಿಸಿದ್ದಾರೆ. ರೈಲ್ವೆ ಸಿಬ್ಬಂದಿ ಮತ್ತು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸುಮಾರು ಅರ್ಧಘಂಟೆಗಳ ಕಾರ್ಯಾಚರಣೆ ನಡೆಸಿ ಮರವನ್ನು ತೆರವು ಗೊಳಿಸಿದರು. ಗಂದ್ರಾವತಿ ಅವರ ಸಮಯಪ್ರಜ್ಞೆಯಿಂದ ಒಂದು ದೊಡ್ಡ ಅವಘಡ ಸಂಭವಿಸುವುದನ್ನು ತಡೆಯಲಾಯಿತು. ಇದೀಗ ಇವರ ಕಾರ್ಯಕ್ಕೆ ಎಲ್ಲ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
