ಆರ್.ಸಿ.ಬಿ ತಂಡ IPL 2023 ರಲ್ಲಿ ಶುಭಾರಂಭ ಕಂಡಿದೆ. ಚೊಚ್ಚಲ ಪಂದ್ಯದಲ್ಲಿ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆಲುವು ಸಾದಿಸುವ ಮೂಲಕ ಶುಭಾರಂಭ ಪಡೆದಿದೆ. ಆದರೆ ಇದೀಗ ಆರ್.ಸಿ.ಬಿ ತಂಡಕ್ಕೆ ಒಂದು ದೊಡ್ಡ ಶಾಕ್ ಎದುರಾಗಿದೆ.
ಆರ್.ಸಿ.ಬಿ ತಂಡಕ್ಕೆ ಗಾಯದ ಸಮಸ್ಯೆ ಬಿಟ್ಟು ಬಿಡದೆ ಕಾಡುತ್ತಿದೆ. ವಿಲ್ ಜ್ಯಾಕ್ಸ್ ಟೂರ್ನಿಯಿಂದಲೇ ಹೊರಬಿದ್ದಿದ್ದರೇ, ಜೋಸ್ ಹೇಜಲ್‌ವುಡ್, ಆರ್‌ಸಿಬಿ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಆದರೆ ಇದಕ್ಕಿಂತ ದೊಡ್ಡ ಶಾಕಿಂಗ್ ವಿಚಾರ ಎಂದರೆ ಕಳೆದ ಆವೃತಿಯ ಸ್ಟಾರ್ ಆಟಗಾರ ರಜತ್ ಪಟಿದಾರ್ ಇದೀಗ ಆರ್.ಸಿ.ಬಿ ತಂಡದಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ.
Unfortunately, Rajat Patidar has been ruled out of #IPL2023 due to an Achilles Heel injury. 💔
We wish Rajat a speedy recovery and will continue to support him during the process. 💪
The coaches and management have decided not to name a replacement player for Rajat just yet. 🗒️ pic.twitter.com/c76d2u70SY
— Royal Challengers Bangalore (@RCBTweets) April 4, 2023
ಹಿಮ್ಮಡಿ ನೋವಿನಿಂದ ಬಳಲುತ್ತಿದ್ದ ರಜತ್ ಪಾಟೀದಾರ್, ಈ ಮೊದಲು 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಇಡೀ ಟೂರ್ನಿಯಿಂದಲೇ ಪಾಟೀದಾರ್ ಹೊರಬಿದ್ದಿರುವ ವಿಚಾರವನ್ನು ಆರ್‌ಸಿಬಿ ಫ್ರಾಂಚೈಸಿಯು ಟ್ವೀಟ್ ಮಾಡಿ ಖಚಿತಪಡಿಸಿದೆ.
ಹೀಗಾಗಿ ಇದು ಆರ್.ಸಿ.ಬಿ ತಂಡಕ್ಕೆ ದೊಡ್ಡ ಹಿನ್ನೆಡೆ ಎಂದು ಹೇಳಿದರೆ ತಪ್ಪಾಗಲಾರದು. ಇದಲ್ಲದೆ ಆರ್.ಸಿ.ಬಿ ತಂಡದ ಬೌಲರ್ ಟೊಪ್ ಲೆ ಕೂಡ ಕಳೆದ ಪಂದ್ಯದಲ್ಲಿ ಗಾಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಇವರು ಆಡುತ್ತಾರೋ ಇಲ್ಲವೋ ಎಂಬುದು ಇನ್ನು ಖಚಿತವಾಗಿಲ್ಲ. ತಂಡದ ಕೋಚ್ ಹಾಗೂ ಮ್ಯಾನೇಜ್‌ಮೆಂಟ್, ಪಾಟೀದಾರ್‌ಗೆ ಬದಲಿ ಆಟಗಾರರನ್ನು ಇನ್ನಷ್ಟೇ ಹೆಸರಿಸಲಿದೆ ಎಂದು ಟ್ವೀಟ್ ಮಾಡಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
