fbpx
ಸಮಾಚಾರ

3 ಬಾಲ್ ಗೆ 2 ಸಿಕ್ಸ್! IPL ನಲ್ಲಿ ನೂತನ ಧಾಖಲೆ ಸೃಷ್ಟಿಸಿದ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ

IPL 2023 ಎಲ್ಲ ಕಡೆ ಸಕತ್ ಕ್ರೇಜ್ ಹುಟ್ಟಿಸುತ್ತಿದೆ. ನೆನ್ನೆ ನಡೆದ CSK ಮತ್ತು ಲಕ್ನೋ ತಂಡಗಳ ನಡುವೆ ನಡೆದ ಪಂದ್ಯ ಬಹಳ ರೋಮಾಂಚನವಾಗಿತ್ತು. ಈ ವೇಳೆ ನೆನ್ನೆ ಕೊನೆಯಲ್ಲಿ ಮೈದಾನಕ್ಕೆ ಇಳಿದ ಧೋನಿ ಎರಡು ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಹೊಸ ಧಾಖಲೆ ಸೃಷ್ಟಿಸಿದ್ದಾರೆ.

 

 

ಎಂ.ಎಸ್ ಧೋನಿ ಮೈದಾನಕ್ಕೆ ಎಂಟ್ರಿ ಕೊಟ್ಟರು ಎಂದರೆ ಅಲ್ಲಿ ಶಿಳ್ಳೆಗಳ ಸದ್ದು ಹೆಚ್ಚಾಗಿರುತ್ತದೆ. ಈ ಶಿಳ್ಳೆಗಳ ಸದ್ದಿನ ಜೊತೆ ಧೋನಿ ಬ್ಯಾಟಿನ ಸದ್ದು ಕೂಡ ನೆನ್ನೆ ಹೆಚ್ಚಾಗಿ ಕೇಳಿಸಿತು. ಏಕೆಂದರೆ ನೆನ್ನೆ ಧೋನಿ ಕೇವಲ 3 ಬಾಲ್ ಗಳನ್ನು ಮಾತ್ರ ಆಡಿದರು. ಆದರೆ ಆಡಿದ 3 ಬಾಲ್ ಗಳಲ್ಲಿ ಎರಡು ಬಾಲ್ ಅನ್ನು ಸಿಕ್ಸರ್ ಸಿಡಿಸುವ ಮೂಲಕ ಮಹತ್ವದ ಧಾಖಲೆಯನ್ನು ಬರೆದಿದ್ದಾರೆ.

 

 

ನೆನ್ನೆಯ ಪಂದ್ಯದಲ್ಲಿ ಎರಡು ಸಿಕ್ಸರ್ ಸಿಡಿಸುವ ಮೂಲಕ ಧೋನಿ ಐಪಿಎಲ್ ನಲ್ಲಿ 5000 ರನ್ ಪೂರೈಸಿದ 7 ನೇ ಆಟಗಾರರಾಗಿದ್ದಾರೆ. ಇವರಿಗಿಂತ ಮುಂಚೆ ಕ್ರಮವಾಗಿ
1 ವಿರಾಟ್ ಕೊಹ್ಲಿ- 6706 ರನ್
2 ಶಿಕರ್ ಧವನ್ – 6284 ರನ್
3 ಡೇವಿಡ್ ವಾರ್ನರ್- 5937 ರನ್
4 ರೋಹಿತ್ ಶರ್ಮ- 5880 ರನ್
5 ಸುರೇಶ್ ರೈನಾ- 5528 ರನ್
6 ಎ.ಬಿ.ಡಿ- 5162 ರನ್
7 ಎಂ.ಎಸ್ ಧೋನಿ- 5000 ರನ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top