ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ತನ್ನ ಅಧೀನಕ್ಕೆ ತೆಗೆದುಕೊಂಡ ಬಳಿಕ ಹಲವಾರು ಬದಲಾವಣೆಗಳನ್ನು ಮಾಡುತ್ತಾ ಬಂದಿದ್ದಾರೆ. ಮೊದಲಿಗೆ ಟ್ವಿಟ್ಟರ್ ನಲ್ಲಿ ಬ್ಲೂ ಟಿಕ್ ತೆಗೆಯಲಾಗಿತ್ತು. ಇದಾದ ನಂತರ ಬ್ಲೂ ಟಿಕ್ ಬೇಕು ಎಂದರು ಇಂತಿಷ್ಟು ಹಣ ಪಾವತಿಸಬೇಕು ಎಂದು ಹೇಳಿದರು. ಇದೀಗ ಮತ್ತೊಂದು ಹೊಸ ಅಪ್ಡೇಟ್ ನೀಡಿದ್ದಾರೆ.
ಇದೀಗ ನೀಲಿ ಬಣ್ಣದ ಪಕ್ಷಿ ಲೋಗೋವನ್ನು ಬದಲಾಯಿಸಿದ್ದು, ಇದರ ಬದಲು ಕ್ರಿಕ್ಟಾಕರೆನ್ಸಿ ಡಾಗ್ ಕಾಯಿನ್ ನ ಮೀಮ್ಸ್ ಹಾಕಿದ್ದಾರೆ. ಟ್ವಿಟರ್ ಬಳಕೆದಾರರು ಸೋಮವಾರ ಟ್ವಿಟರ್‌ನ ವೆಬ್ ಸೈಟ್‌ನಲ್ಲಿ ಬ್ಲೂ ಬರ್ಡ್ ಬದಲಿಗೆ ಆ ಜಾಗಕ್ಕೆ ಕ್ರಿಪ್ಟೋಕರೆನ್ಸಿ ಡಾಗ್‌ಕಾಯಿನ್‌ನ ನಾಯಿಯ ಮೀಮ್ಸ್ ಫೋಟೋವನ್ನು ಹಾಕಿರುವುದನ್ನು ಗಮನಿಸಿದ್ದಾರೆ.
— Elon Musk (@elonmusk) April 3, 2023
2013 ರಲ್ಲಿ ಜೋಕ್‌ಗಾಗಿ ರಚಿಸಲಾದ ಡಾಗ್‌ಕಾಯಿನ್ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಕರೆನ್ಸಿಯ ಲೋಗೋದ ಭಾಗವಾಗಿರುವ ‘ಡಾಗ್’ ಮೀಮ್ಸ್ ಕಂಡುಬಂದಿದೆ. ಮಸ್ಕ್ ಅವರು ತಮ್ಮ ಖಾತೆಯಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಟ್ವಿಟರ್ ಲೋಗೋ ಬದಲಾವಣೆಯು ಕೇವಲ ವೆಬ್ ಆವೃತ್ತಿಗೆ ಮಾತ್ರ ಸೀಮಿತವಾಗಿದೆ. ಮೊಬೈಲ್ ಟ್ವಿಟರ್ ಆ್ಯಪ್‌ನಲ್ಲಿ ಪಕ್ಷಿಯ ಲೋಗೋ ಮುಂದುವರೆದಿದೆ.
As promised pic.twitter.com/Jc1TnAqxAV
— Elon Musk (@elonmusk) April 3, 2023
ಬಿಟ್‌ಕಾಯಿನ್‌ನಂತಹ ಇತರ ಕ್ರಿಪ್ಟೋಕರೆನ್ಸಿಗಳನ್ನು ಅಪಹಾಸ್ಯ ಮಾಡುಲು ಹತ್ತು ವರ್ಷಗಳ ಜಿಂದೆ ಜೋಕ್ಸ್‌ಗಾಗಿ ಈ ಗಾಡ್ ಚಿತ್ರ ರಚಿಸಲಾಯಿತು. ಇದು ಡಾಗ್‌ಕಾಯಿನ್ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಕರೆನ್ಸಿಯ ಲೋಗೋ ಎಂದು ಪ್ರಸಿದ್ಧವಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
