ಚುನಾವಣೆ ಸಮಯ ಹತ್ತಿರವಾಗುತ್ತಿದೆ. ದಿನಾಂಕ ಕೂಡ ಫಿಕ್ಸ್ ಆಗಿದೆ. ಈ ವೇಳೆ ಮತದಾರರಿಗೆ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದೆಯಾ? ಇಲ್ಲವಾ? ಎಂಬ ಗೊಂದಲವಿರುತ್ತದೆ. ಹೀಗಾಗಿ ನೀವು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದಿಯಾ ಇಲ್ಲವಾ ಎಂಬುದನ್ನು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ತಿಳಿದುಕೊಳ್ಳಬಹುದು. ಇದಕ್ಕೆ ನೀವು ಮಾಡಬೇಕಾಗಿರುವ ಕೆಲಸ ಬಹಳ ಸುಲಭ.
ನಿಮ್ಮ ಹೆಸರು ಮತಗಟ್ಟೆಯಲ್ಲಿ ಸೇರ್ಪಡೆ ಆಗಿದೆಯಾ? ಇಲ್ಲವಾ ಅನ್ನೋದನ್ನು ಮನೆಯಲ್ಲಿಯೇ ಕುಳಿತು ಚೆಕ್ ಮಾಡಬಹುದು. ಮೊಬೈಲ್ ಅಥವಾ ಲ್ಯಾಪ್ಟಾಪ್ನಲ್ಲಿ ಮತದಾರರ ಪಟ್ಟಿ ಸಿಗುತ್ತದೆ. ಹೇಗೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.
ಮೊದಲಿಗೆ ಕರ್ನಾಟಕ ಚುನಾವಣಾ ಆಯೋಗಕ್ಕೆ ಭೇಟಿ https://ceo.karnataka.gov.in/
ನೀಡಬೇಕು.
ಇದಾದ ನಂತರ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ’ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಿಮಗೆ ಅಂತಿಮ ಮತದಾರರ ಪಟ್ಟಿ-2023 ಆಯ್ಕೆ ಕಾಣಿಸುತ್ತದೆ.
ಅಂತಿಮ ಮತದಾರರ ಪಟ್ಟಿ-2023 ಆಯ್ಕೆ ಮೇಲೆ ಕ್ಲಿಕ್ ಮಾಡುತ್ತಿದ್ದಂತೆ ಜಿಲ್ಲೆಗಳ ಹೆಸರು ಕಾಣಿಸುತ್ತದೆ.
ಈಗ ನಿಮ್ಮ ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ.
ಜಿಲ್ಲೆ ಹೆಸರು ಕ್ಲಿಕ್ ಮಾಡಿದ ನಂತರ ವಿಧಾನಸಭಾ ಕ್ಷೇತ್ರಗಳ ಹೆಸರುಗಳು ಕಾಣಿಸುತ್ತವೆ. ಈಗ ನೀವು ನಿಮ್ಮ ವಿಧಾನಸಭಾ ಕ್ಷೇತ್ರದ ಮೇಲೆ ಕ್ಲಿಕ್ ಮಾಡಿ.
ವಿಧಾನಸಭಾ ಕ್ಷೇತ್ರದ ಮೇಲೆ ಕ್ಲಿಕ್ ಮಾಡಿದ ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನಿಮಗೆ ನಿಮ್ಮ ಕ್ಷೇತ್ರದ ಮತಗಟ್ಟೆಗಳ ಹೆಸರು ಕಾಣಿಸುತ್ತದೆ.
ನಿಮ್ಮ ಮತಗಟ್ಟೆಯ ಮೇಲೆ ಕ್ಲಿಕ್ ಮಾಡಿದ್ರೆ ಹೊಸ ಪೇಜ್ ಓಪನ್ ಆಗುತ್ತದೆ. ಇಲ್ಲಿ Captcha Image ಕಾಣಿಸುತ್ತದೆ. ಅದನ್ನ ಎಂಟ್ರಿ ಮಾಡಿದ್ರೆ PDF ಫೈಲ್ ಓಪನ್ ಆಗುತ್ತದೆ.
ಈ ಮತಗಟ್ಟೆಯಲ್ಲಿರುವ ಎಲ್ಲಾ ಮತದಾರರ ಮಾಹಿತಿ ಫೋಟೋ ಸಹ ಸಿಗುತ್ತದೆ. ಇಲ್ಲಿ ನೀವು ನಿಮ್ಮ ಹೆಸರು ಹುಡುಕುಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
