fbpx
ಸಮಾಚಾರ

ಮತ್ತೊಂದು ಟ್ವೀಟ್ ಮೂಲಕ ಸುದೀಪ್ ಕಾಳೆದ ಪ್ರಕಾಶ್ ರಾಜ್! ಆದರು ಮೌನವಾಗಿದ್ದಾರೆ ಕಿಚ್ಚ

ಪ್ರಕಾಶ್ ರಾಜ್ ಮತ್ತು ಕಿಚ್ಚ ಸುದೀಪ್ ಇಬ್ಬರು ಆತ್ಮೀಯ ಸ್ನೇಹಿತರು. ಆದರೆ ಇತ್ತೀಚಿಗೆ ಸುದೀಪ್ ಬಿಜಿಪಿ ಸೇರಿದ ಬಳಿಕ ಪ್ರಕಾಶ್ ರಾಜ್ ದಿನದಿಂದ ದಿನಕ್ಕೆ ಒಂದಲ್ಲ ಒಂದು ಟ್ವೀಟ್ ಮಾಡುವ ಮೂಲಕ ಸುದೀಪ್ ಅವರನ್ನು ಕೆರಳಿಸುತ್ತಿದ್ದಾರೆ.

ಈ ಮೊದಲು ಸುದೀಪ್ ಬಿಜಿಪಿ ಸೇರುವ ವಿಷಯ ಬಂದಾಗ ಸುದೀಪ್ ತಮ್ಮನ್ನು ಯಾರಿಗೂ ಮಾರಿಕೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿದರು. ಇದಾದ ಬಳಿಕ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡಲು ಒಪ್ಪಿಕೊಂಡಾಗ ಇದು ನಂಬಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದರು. ಇದೀಗ ಇವರು ಮತ್ತೊಂದು ಟ್ವೀಟ್ ಮಾಡಿ ಸುದೀಪ್ ಅವರ ಕಾಲು ಎಳೆಯಲು ಪ್ರಯತ್ನಿಸುತ್ತಿದ್ದಾರೆ.

ನಿನ್ನೆ ಮತ್ತೊಂದು ಟ್ವೀಟ್ ಮಾಡಿರುವ ಪ್ರಕಾಶ್ ರೈ, ‘ನೋಡ್ರಪ್ಪ, ನಿಮ್ ಮಾಮನೋ.. ನಿಮ್ ಅತ್ತೇನೊ.. ನಿಮ್ ಕಷ್ಟ ಕಾದಲ್ಲಿ ಸಹಾಯ ಮಾಡಿದ್ದರೆ, ನೀವು ದುಡಿದಿದ್ರಲ್ಲಿ 10%.. 20%.. ಇಲ್ಲ 30% ಕೊಡಿ. ಅದು ನಿಮ್ಮಿಷ್ಟ. ಆದರೆ, ಪ್ರಜೆಗಳ 30% ಕೊಲ್ಲೆ ಹೊಡೆಯೋಕೆ ಬಿಡ್ಬೇಡಿ.. ಅಷ್ಟೇ.. ಅಷ್ಟೇ..’ ಎಂದು ಬರೆದುಕೊಂಡಿದ್ದಾರೆ.

ಆದರೆ ಸಾಲು ಸಾಲು ಟ್ವೀಟ್ ಮಾಡುತ್ತಿರುವ ಪ್ರಕಾಶ್ ರಾಜ್ ಕುರಿತು ಸುದೀಪ್ ಇಲ್ಲಿಯವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಮಾತ್ರ ಪ್ರಕಾಶ್ ರೈ ಒಬ್ಬ ಮೇರು ನಟ. ಅವರೊಂದಿಗೆ ಒಂದು ಸಿನಿಮಾ ಮಾಡಿರುವೆ. ಮತ್ತಷ್ಟು ಸಿನಿಮಾಗಳನ್ನು ಮಾಡಲು ಕಾಯುತ್ತಿರುವೆ ಎಂದಷ್ಟೇ ಉತ್ತರಿಸಿ ಸುಮ್ಮನಾಗಿದ್ದರು. ಆದರೆ ಇದೀಗ ಪ್ರಕಾಶ್ ರಾಜ್ ಈ ರೀತಿ ಸಾಲು ಸಾಲು ಟ್ವೀಟ್ ಮಾಡುತ್ತಿರುವುದು ಮುಂದೆ ಸುದೀಪ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top