ಕಿಚ್ಚ ಸುದೀಪ್ ಬಿಜಿಪಿ ಗೆ ಬೆಂಬಲಿಸಲಿದ್ದಾರೆ ಎಂದು ಬಸವರಾಜ್ ಬೊಮ್ಮಾಯಿ ಆಯೋಜಿಸಿದ ಸುದ್ದಿಘೋಷ್ಠಿಯಲ್ಲಿ ಹೇಳಿದ ಬಳಿಕ ಪ್ರಕಾಶ್ ರಾಜ್ ದಿನದಿಂದ ದಿನಕ್ಕೆ ಸುದೀಪ್ ಅವರ ಕಾಲೆಳೆಯಲು ಒಂದಲ್ಲ ಒಂದು ಟ್ವೀಟ್ ಮಾಡುತ್ತಿದ್ದಾರೆ. ಇದು ಇಷ್ಟಕ್ಕೆ ಸುಮ್ಮನಾಗಲ್ಲ ಎಂದು ಜನರಿಗೆ ತಿಳಿದಿದೆ. ಆದರೆ ಇದೀಗ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತಹ ಕೆಲಸ ಚೇತನ್ ಅಹಿಂಸಾ ಮಾಡಿದ್ದಾರೆ.
ಚೇತನ್ ಅಹಿಂಸಾ ಒಂದಲ್ಲ ಒಂದು ವಿಷಯದಲ್ಲಿ ಅವರು ಯಾವಾಗಲು ಸುದ್ದಿಯಾಗುತ್ತಿರುತ್ತಾರೆ. ಇದೀಗ ಸುದೀಪ್ ಮತ್ತು ಪ್ರಕಾಶ್ ರಾಜ್ ವಿರುದ್ಧ ಮಾತನಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇಷ್ಟೇ ಅಲ್ಲದೆ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ.
‘ಬಿಜೆಪಿಗೆ ಸುದೀಪ್ ರವರು ನೀಡಿದ ಬೆಂಬಲದಿಂದ ಪ್ರಕಾಶ್ ರಾಜ್ ರವರು ‘ಆಶ್ಚರ್ಯ & ಆಘಾತಕ್ಕೊಳಗಾಗಿದ್ದಾರೆ . ಇದು ಕುತೂಹಲಕಾರಿ ವಿಷಯವಾಗಿದೆ’ ಎಂದು ಚೇತನ್ ಹೇಳಿದ್ದಾರೆ.
‘ಇಬ್ಬರು ಪ್ರತಿಭಾವಂತ ನಟರು. ಒಬ್ಬರು ಬಿಜೆಪಿ ಪರ & ಮತ್ತೊಬ್ಬರು ಬಿಜೆಪಿ ವಿರೋಧಿ – ಜೂಜಿನ ಜಾಹೀರಾತುಗಳ ಮೂಲಕ ಇಬ್ಬರು ಸಹ ಹೆಚ್ಚು ಹಣವನ್ನು ಗಳಿಸಿದ್ದಾರೆ.
ನಾನು ಇಬ್ಬರ ನಿಲವುಗಳು/ಸಿದ್ಧಾಂತಗಳು ಒಪ್ಪದಿದ್ದರೂ, ಅಂತಹ ಪ್ರಶ್ನಾರ್ಹ ಸಂಪಾದನೆಯನ್ನು ಮೊದಲು ಯಾರು ಸದ್ಬಳಕೆಗೆ ಹಿಂದುರುಗಿಸುತ್ತಾರೋ ಆ ವ್ಯಕ್ತಿ ಮೇಲುಗೈಯಾಗುತ್ತಾರೆ’ ಎಂದು ಬರೆದುಕೊಂಡಿದ್ದಾರೆ.
ಇದೀಗ ಚೇತನ್ ಅಹಿಂಸಾ ಮಾಡಿರುವ ಪೋಸ್ಟ್ ಎಲ್ಲ ಕಡೆ ಸಕತ್ ವೈರಲ್ ಆಗುತ್ತಿದೆ. ಇದೀಗ ಚೇತನ್ ಮಾಡಿರುವ ಪೋಸ್ಟ್ ಗೆ ಪ್ರಕಾಶ್ ರಾಜ್ ಮತ್ತು ಸುದೀಪ್ ಸುಮ್ಮನಿರುತ್ತಾರಾ? ಅಥವಾ ಪ್ರತಿಕ್ರಯಿಸುತ್ತಾರಾ ಎಂದು ಕಾದು ನೋಡಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
