ಭಾರತದಲ್ಲಿ ಪ್ರತಿಯೊಬ್ಬರೂ ಸಹ ದ್ವಿಚಕ್ರವಾಹನದಲ್ಲಿ ಚಲಾಯಿಸಬೇಕಾದರೆ ಹೆಲ್ಮೆಟ್ ಧರಿಸುವುದು ಕಡ್ಡಾಯ. ಈ ನಿಯಮ ಪ್ರತಿಯೊಬ್ಬರಿಗೂ ಸಹ ಅನ್ವಯವಾಗುತ್ತದೆ. ಆದರೆ ಈ ನಿಯಮವನ್ನು ಸ್ವತಃ ಪೊಲೀಸರು ಪಾಲಿಸದಿದ್ದರೆ ಅವರಿಗೂ ಸಹ ದಂಡ ವಿದಿಸಬೇಕಲ್ಲವೇ. ಈ ರೀತಿಯ ಚರ್ಚೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಇದಕ್ಕೆ ಒಂದು ಕಾರಣವಿದೆ.
ನಾವು ಏನಾದರು ದ್ವಿಚಕ್ರವಾಹನದಲ್ಲಿ ಹೆಲ್ಮೆಟ್ ಧರಿಸದೇ ಚಲಾಯಿಸಿದರೆ ಪೊಲೀಸರು ನಮ್ಮನ್ನು ತಡೆದು ದಂಡ ಕಟ್ಟುವವರೆಗೂ ನಮ್ಮನ್ನು ಸತಾಯಿಸಿ ನಂತರ ನಮ್ಮ ಗಾಡಿಯನ್ನು ಹಿಂದಿರುಗಿಸುತ್ತಾರೆ. ಕೆಲವೊಂದು ಸರಿ ಗಾಡಿಯನ್ನು ಹಿಂದಿರುಗಿಸದೆ ಇಲ್ಲಸಲ್ಲದ ಕೇಸ್ ಗಳನ್ನೂ ಹಾಕಿ ಹೆಚ್ಚು ದಂಡ ವಸೂಲಿ ಮಾಡುತ್ತಾರೆ. ಆದರೆ ಇದೀಗ ಇದೆ ತಪ್ಪು ಪೊಲೀಸರು ಮಾಡಿದರೆ ಅವರಿಗೂ ಸಹ ದಂಡ ವಿದಿಸಬೇಕಲ್ಲವೇ?
ಮಹಿಳಾ ಪೊಲೀಸರಿಬ್ಬರೂ ಹೆಲ್ಮೆಟ್ ಇಲ್ಲದೇ ಸ್ಕೂಟಿಯಲ್ಲಿ ಓಡಾಡುತ್ತಿರುವ ಫೋಟೋವನ್ನು Rahul Barman ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. MH01ED0659 ಎಂದು ಸ್ಕೂಟಿ ಸಂಖ್ಯೆಯನ್ನು ಬರೆದ ಅವರು, ನಾವು ಹೀಗೆ ಪ್ರಯಾಣಿಸಿದರೆ ಹೇಗಿರುತ್ತದೆ? ಇದು ಸಂಚಾರ ನಿಯಮ ಉಲ್ಲಂಘನೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಮುಂಬೈ ಪೊಲೀಸರು, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ದೇವೇಂದ್ರ ಫಡ್ನವಿಸ್ ಅವರಿಗೆ ಈ ಟ್ವಿಟ್‌ನ್ನು ಟ್ಯಾಗ್ ಮಾಡಿದ್ದಾರೆ.
MH01ED0659
What if we travel like this ?? Isn't this a traffic rule violation ?@MumbaiPolice @mieknathshinde @Dev_Fadnavis pic.twitter.com/DcNaCHo7E7— Rahul Barman (@RahulB__007) April 8, 2023
ಈ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಈ ಟ್ವೀಟ್ ಹಾಕಿ ಸುಮಾರು ಒಂದು ಘಂಟೆಯ ಬಳಿಕ ಮುಂಬೈ ಟ್ರಾಫಿಕ್ ಪೊಲೀಸರು ಈ ಫೋಟೋ ಸೆರೆ ಹಿಡಿಯಲ್ಪಟ್ಟ ಖಚಿತ ಸ್ಥಳ ಯಾವುದು ಎಂದು ಪ್ರಶ್ನಿಸಿದ್ದಾರೆ. ದಯವಿಟ್ಟು ಈ ಫೋಟೋ ತೆಗೆದ ಸ್ಥಳ ಯಾವುದು ಎಂಬುದನ್ನು ತಿಳಿಸಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಫೋಟೋ ಶೇರ್ ಮಾಡಿದ ರಾಹುಲ್ ಪ್ರತಿಕ್ರಿಯಿಸಿದ್ದು, ದಾದಾರ್ ಈಸ್ಟರ್ನ್ ಎಕ್ಸ್‌ಪ್ರೆಸ್ ಹೈವೇ ಎಂದು ಉತ್ತರಿಸಿದ್ದಾರೆ. ನಂತರ ಮುಂಬೈ ಪೊಲೀಸರು ಈ ಪೋಸ್ಟ್‌ಗೆ ಸಂಬಂಧಿಸಿದಂತೆ ಮತ್ತೆ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಅಗತ್ಯ ಕ್ರಮಕ್ಕಾಗಿ ನಾವು ಮಾಟುಂಗಾ ಟ್ರಾಫಿಕ್ ವಿಭಾಗಕ್ಕೆ ನಿಮ್ಮ ವಿನಂತಿಯನ್ನು ಹಸ್ತಾಂತರಿಸಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
