ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವಂತಹ ವಿವಿಧ ಇಲಾಖೆಗಳ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡ ಸೇರಿದಂತೆ ಇತರ ಪ್ರಾದೇಶಿಕ ಭಾಷೆಗಳನ್ನ ಮಾತನಾಡುವಂತಃ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.. IBPS ಮೋಸ, SSC ಮೋಸ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಪ್ರಾದೇಶಿಕ ಭಾಷಿಕರಿಗೆ ಆಗುತ್ತಿರುವ ಅನ್ಯಾಯ ತೆರೆದಿಟ್ಟುಕೊಳ್ಳುತ್ತದೆ. ಇದೀಗ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಎಆರ್‌ಪಿಎಫ್) ನೇಮಕಾತಿ ಪರೀಕ್ಷೆಯಲ್ಲಿ ಕೂಡ ಕೇವಲ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು ಪ್ರಾದೇಶಿಕ ಭಾಷಿಗರಿಗೆ ಅನ್ಯಾಯವಾಗಿದೆ.
ರಾಜ್ಯದಲ್ಲಿ ಖಾಲಿ ಇರುವ 466 ಹುದ್ದೆ ಸೇರಿದಂತೆ ಸಿಆರ್‌ಪಿಎಫ್(CRPF Jobs )ನ 9212 ಹುದ್ದೆಗಳಿಗೆ ಹೊರಡಿಸಿರುವ ನೇಮಕಾತಿ ಅಧಿಸೂಚನೆಯಲ್ಲಿ ಕೇವಲ ಇಂಗ್ಲಿಷ್, ಹಿಂದಿ ಭಾಷೆಗೆ ಮಾತ್ರ ಅವಕಾಶ ನೀಡಲಾಗಿದೆ. ಎಷ್ಟೇ ಹೋರಾಟ ನಡೆಸಿದರೂ, ಎಷ್ಟೇ ಪ್ರತಿರೋದ ಒಡ್ಡಿದರೂ ಕ್ಯಾರೇ ಎನ್ನದ ಕೆಂದ್ರ ಸರ್ಕಾರ ಈಗ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಎಆರ್‌ಪಿಎಫ್) ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡದೆ ಕೇವಲ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಪರೀಕ್ಷೆ ನಡೆಸುವ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಕನ್ನಡ ಪರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕೇಂದ್ರವು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಸಲು ಮುಂದಾಗುವ ಮೂಲಕ ಹಿಂದಿಯೇತರರನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣುತ್ತಿದೆ. ಭಾರತದಲ್ಲಿ ಹಿಂದಿಯೇತರರು ಸಮಾನತೆಯ ಹಕ್ಕು ಇಲ್ಲದಂತೆ ಬದುಕುವಂತಾಗಿದೆ. ಹಿಂದಿಯೂ ಕನ್ನಡದ ಹಾಗೆಯೇ ಒಂದು ಭಾರತೀಯ ಭಾಷೆ. ಹಿಂದಿ ಭಾಷಿಕರಿಗೆ ಇರುವ ಅವಕಾಶಗಳು ಕನ್ನಡ, ಸೇರಿದಂತೆ ಇತರೆ ಭಾಷಿಕರಿಗೆ ನೀಡಲಾಗುತ್ತಿಲ್ಲ,. ತಕ್ಷಣವೇ ಈ ಅಧಿಸೂಚನೆಯನ್ನು ಹಿಂದಕ್ಕೆ ಪಡೆದು ಕನ್ನಡ ಸೇರಿದಂತೆ ಇತರ ಪ್ರಾದೇಶಿಕ ಭಾಷೆಗಳಲ್ಲಿ ಕೂಡ ಬರೆಯಲು ಅವಕಾಶ ನೀಡಬೇಕು” ಎಂದು ಕನ್ನಡಪರರು ಅಗ್ರಹಿಸಿದ್ದಾರೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
