ಕನ್ನಡ ಸಿನಿಮಾ ರಂಗದ ಹೆಸರಾಂತ ನಟರಲ್ಲಿ ರಮೇಶ್ ಅರವಿಂದ್ ಕೂಡ ಒಬ್ಬರು. ಕನ್ನಡ ಮಾತ್ರವಲ್ಲದೆ ಹಲವಾರು ಸಿನಿಮಾಗಳಲ್ಲಿ ಇವರು ನಟಿಸಿ ಮನೆಮಾತಾಗಿದ್ದಾರೆ. ಇದೀಗ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೂಲಕ ಮತ್ತೆ ಬೆಳ್ಳಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಇದೀಗ ಇವರು ಒಂದು ಖಾಸಗಿ ಕಾರ್ಯಕ್ರಮದಲ್ಲಿ ಒಂದು ಶಾಕಿಂಗ್ ಸತ್ಯ ಹೇಳಿದ್ದಾರೆ.
‘ಯಾರೋ ಹೇಳಿರುವುದನ್ನು ಕೇಳಿ ನಾನು ಮಾಡುವುದಿಲ್ಲ ನನಗೆ ಏನು ಸರಿ ಅನಿಸುತ್ತದೆ ಅದನ್ನು ಮಾಡುವೆ. ನನಗೆ ಏನು ಸರಿ ಅನಿಸುತ್ತದೆ ಅದನ್ನೇ ಮಾಡಿಕೊಂಡು ಬಂದಿದ್ದೀನಿ ನಮ್ಮ ಅಪ್ಪ ಹಾಗೆ ಇದ್ರು ನಾನು ಹಾಗೇ ಇದ್ದೀನಿ. ಎಲ್ಲರಿಗೂ ಗೌರವ ಕೊಡ್ತೀನಿ. ಆ ಸಮಯದಲ್ಲಿ ತಮಿಳು ನಾಡಿನಲ್ಲಿ ಎಲ್ಲವೂ ಸೂಪರ್ ಹಿಟ್ ಸಿನಿಮಾಗಳು ಸತ್ಯ ಲೀಲಾವತಿ ಮತ್ತು Do it. ಆಗ ನಾನು ಬಿಟ್ಟು ಬಂದೆ. ನಾನು ಬೆಳೆದಿದ್ದು ಬೆಂಗಳೂರಿನಲ್ಲಿ ಇದು ನಮ್ಮ ಮನೆ ಎನ್ನುವ ಭಾವನೆ ನಮ್ಮ ಮನೆಗೆ ವಾಪಸ್ ಬರುತ್ತಿದ್ದೀನಿ ಅನ್ನೋ ಖುಷಿ. ಇಲ್ಲಿ ಬಂದಿದಕ್ಕೆ ಮೋಸ ಇಲ್ಲ..ಇಲ್ಲಿ ಕೂಡ ನನಗೆ ಸೂಪರ್ ಹಿಟ್ ಸಿನಿಮಾಗಳು ಸಿಕ್ಕಿದೆ. 9 ಸಿನಿಮಾಗಳು ಸೂಪರ್ ಹಿಟ್ ಆಯ್ತು.
ಖಂಡಿತ ಬೇರೆ ಭಾಷೆಯಲ್ಲಿ ಸಿನಿಮಾ ಈಗ ಮಾಡುತ್ತಿದ್ದರೆ ಸಿಕ್ಕಾಪಟ್ಟೆ ಜಾಸ್ತಿ ಇರುತ್ತಿತ್ತು ಬ್ಯಾಂಕ್ ಬ್ಯಾಲೆನ್ಸ್ ಎಲ್ಲೋ ಇರುತ್ತಿತ್ತು. ಇಲ್ಲಿ ಸಿಕ್ಕಂತ ಪ್ರೀತಿ ಮತ್ತು ಕನೆಕ್ಷನ್ ತುಂಬಾ ಸ್ವೀಟ್ ಆಯ್ತು. ಎಲ್ಲಾದಕ್ಕಿಂತ ಇಲ್ಲಿ ಇಷ್ಟ ಆಯ್ತು ನನ್ನ ಮನೆಗೆ ಬಂದಿದ್ದೀನಿ ಅಷ್ಟೆ. ವಾಪಸ್ ಹೋಗಲು ಅವಕಾಶ ಸಿಗಲಿಲ್ಲ ಆದರೆ ಆಗಾಗ ಕಮಲ್ ಜೊತೆ ಸಿನಿಮಾಗಳು ಮಾಡುತ್ತಿದ್ದೆ. ಕಳೆದ 6 ವರ್ಷದಲ್ಲಿ ಆ ಕಡೆ ಮುಖನೂ ಮಾಡಿಲ್ಲ ಹೋಗಿಲ್ಲ’ ಎಂದು ಕನ್ನಡ ಖಾಸಗಿ ಚಾನೆಲ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
