ಇತ್ತೀಚಿನ ದಿನಗಳಲ್ಲಿ ನಾವು ಹೆಚ್ಚಾಗಿ ತಂತ್ರಜ್ಞಾನ ಯುಗದಲ್ಲಿ ಬದುಕುತ್ತಿದ್ದೇವೆ. ಹೆಚ್ಚಾಗಿ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದೇವೆ. ಇದೀಗ ಬೆಂಗಳೂರಿಗರು ಹೆಮ್ಮೆಪಡುವಂತಹ ಒಂದು ಕಾರ್ಯ ನಡೆಯುತ್ತಿದೆ.
India’s first 3D printed post office coming up in Bengaluru… the building is expected to cost 30-40% less than normal buildings .. #Bengaluru #india #DEVELOPING @narendramodi @BSBommai pic.twitter.com/V3nn1urZWJ
— himanshu raj (@Himansh95224243) April 9, 2023
ಭಾರತದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ ಬೆಂಗಳೂರಿನಲ್ಲಿ ಬರುತ್ತಿದ್ದು, ಹಲಸೂರಿನ ಕೇಂಬ್ರಿಡ್ಜ್ ಲೇಔಟ್ ನಿವಾಸಿಗಳು ಈ ವಿಷಯ ಕೇಳಿ ಸಂತೋಷಪಟ್ಟಿದ್ದಾರೆ. ಈ ಅಂಚೆ ಕಚೇರಿಯ ನಿರ್ಮಾಣ ವೆಚ್ಚವು ಸಾಂಪ್ರದಾಯಿಕ ಕಟ್ಟಡವನ್ನು ನಿರ್ಮಿಸುವುದಕ್ಕಿಂತ ಸುಮಾರು 30 ರಿಂದ 40 ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು 30 ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 3ಡಿ ಮುದ್ರಿತ ಅಂಚೆ ಕಛೇರಿಯು ಸುಮಾರು 1100 ಚದರ ಅಡಿ ವಿಸ್ತೀರ್ಣ ಮತ್ತು ನಿರ್ಮಾಣದ ವೆಚ್ಚ 23 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ.
Country’s first 3D-printed post office coming up in Bengaluru – hope this is the shape of things to come!! https://t.co/IpmhbDXYER
— Kiran Mazumdar-Shaw (@kiranshaw) April 10, 2023
ಈ ವಿಷಯದ ಕುರಿತು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದು, “ದೇಶದ ಮೊದಲ 3D-ಮುದ್ರಿತ ಅಂಚೆ ಕಚೇರಿ ಬೆಂಗಳೂರಿನಲ್ಲಿ ಬರುತ್ತಿದೆ – ಇದು ಮುಂಬರುವ ಭವಿಷ್ಯದ ವಸ್ತುಗಳ ಆಕಾರವಾಗಿದೆ ಎಂದು ಭಾವಿಸುತ್ತೇನೆ!” ಎಂದು ಬರೆದುಕೊಂಡಿದ್ದಾರೆ. ಇದೀಗ ಬೆಂಗಳೂರು ನಗರವು ತಂತ್ರಜ್ಞಾನ ಯುಗದಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ಮುಂದಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
