ಚಿಕ್ಕ ವಯಸ್ಸಿನಿಂದ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ಹೆಸರಾಂತ ನಟಿಯರಲ್ಲಿ ಮಾಳವಿಕಾ ಕೂಡ ಒಬ್ಬರು. ನಾಯಕಿಯಾಗಿ ಮಲಯಾಳಂ ಸಿನಿಮಾದಲ್ಲಿ ಅಭಿನಯಿಸಿ ಆನಂತರ ಕನ್ನಡದಲ್ಲಿ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ತಮ್ಮದೇ ಚಾಪು ಮೂಡಿಸಿದ್ದರು. ಇದಲ್ಲದೆ ಕೆಜಿಎಫ್ ಸಿನಿಮಾದ ಮೂಲಕ ಇವರ ಹೆಸರು ಮತ್ತಷ್ಟು ಫೇಮಸ್ ಆಯಿತು. ಆದರೆ ಇದೀಗ ಇಷ್ಟೊಂದು ಹೆಸರು ಮಾಡಿದ ನಟಿ ಆಸ್ಪತ್ರೆ ಸೇರಿದ್ದಾರೆ.
ನಟಿ ಮತ್ತು ರಾಜಕಾರಣಿ ಮಾಳವಿಕಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮಗೆ ಮೈಗ್ರೇನ್ ಆಗಿರುವ ಕಾರಣ ಇವರು ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ.
ಏಕೆಂದರೆ ಮಾಳವಿಕಾ ಹಂಚಿಕೊಂಡಿರುವ ಫೋಟೋದಲ್ಲಿ ಇವರ ಮುಖ ಸಂಪೂರ್ಣವಾಗಿ ಗುರುತು ಸಿಗದಿರುವಷ್ಟು ಬದಲಾಗಿದೆ. ‘ಮೈಗ್ರೇನ್‌ನ ಯಾರೂ ಲಘುವಾಗಿ ತೆಗೆದುಕೊಳ್ಳಬೇಡಿ. ಎಲ್ಲಾ ಮತ್ತು ವಿವಿಧ ಪಾನಡೋಲ್‌ಗಳು, ನೆಪ್ರೊಸಿಮ್, ಸಾಂಪ್ರದಾಯಿಕ ಔಷಧ ಇತ್ಯಾದಿಗಳನ್ನು ಪಾಪಿಂಗ್ ಮಾಡುತ್ತಿರಿ. ಕೇವಲ ತಲೆನೋವು ಮಾತ್ರವಲ್ಲ. ಅಥವಾ ನೀವು ನನ್ನಂತೆಯೇ ಆಸ್ಪತ್ರೆಯಲ್ಲಿ ಕೊನೆಗೊಳ್ಳುತ್ತೀರಿ’ ಎಂದು ಮಾಳವಿಕಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಮಾಳವಿಕಾ ಬೇಗ ಚೇತರಿಸಿಕೊಂಡು ಮನೆಗೆ ಬರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಾಕಷ್ಟು ಧಾರಾವಾಹಿ ಸಿನಿಮಾ ಮೂಲಕ ಹೆಸರು ಮಾಡಿದ್ದ ಇವರು ಇತ್ತೀಚಿಗೆ ಬಿಜೆಪಿ ಪಕ್ಷದೊಂದಿಗೆ ಹೆಚ್ಚಾಗಿ ಗುರುತಿಸಿಕೊಂಡಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
