ಕುಡಿತ ಚಟ ಕೆಟ್ಟುದು ಎಂದು ಜನರಿಗೆ ತಿಳಿದರು ಸಹ ಆ ಚಟವನ್ನು ಬಿಡದೆ ಹೆಚ್ಚಾಗಿ ಜನರು ಕುಡಿಯುವುದನ್ನು ರೂಡಿಮಾಡಿಕೊಂಡಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತಾನು ಕುಡಿಯುವುದಲ್ಲದೆ ತನ್ನ ಮನೆಯ ನಾಯಿಗೂ ಸಹ ಕುಡಿಯುವ ಚಟವನ್ನು ಅಭ್ಯಾಸಮಾಡಿಸಿದ್ದು, ಮಾಲೀಕನ ಸಾವಿನ ನಂತರ ನಾಯಿಯ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ.
ಮಾಲಿಕ ತಾನೂ ಕುಡಿಯುವ ವೇಳೆ ಕೊಕೊ ಎಂಬ ನಾಯಿಗೆ ನಿರಂತರವಾಗಿ ವೈನ್ ಕುಡಿಸುತ್ತಿದ್ದ. ಬಹಳ ದಿನಗಳಿಂದ ಈ ಚಟ ಮುಂದುವರಿದಿದ್ದರಿಂದ ನಾಯಿ ಕುಡಿತದ ಚಟಕ್ಕೆ ದಾಸನಾಗಿತ್ತು. ಆದರೆ ಮಾಲಿಕ ಸಾವನ್ನಪ್ಪಿದ ನಂತರ ಎರಡು ವರ್ಷದ ಲ್ಯಾಬ್ರಡಾರ್ ತಳಿಯ ಕೋಕೊ ತೀವ್ರವಾಗಿ ಅಸ್ವಸ್ಥಗೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ನಾಯಿಯನ್ನು ಇದರ ಜೊತೆಗಾರ ನಾಯಿಯೊಂದಿಗೆ ಪ್ರಾಣಿಧಾಮಕ್ಕೆ ಒಪ್ಪಿಸಿದ್ದರು.
ಆದರೆ ದುರದೃಷ್ಟವಶಾತ್ ಕೊಕೊ ಜೊತೆ ಬಂದಿದ್ದ ಮತ್ತೊಂದು ನಾಯಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿತು. ಆದರೆ ಇದೀಗ ಕೊಕೊ ಚಿಕಿತ್ಸೆಗೆ ಸಹಕರಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದೆ ಎಂದು ಹೇಳಲಾಗುತ್ತಿದೆ. ಆದರು ಸಹ ಕೋಕೋವನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟಿದ್ದು, ಮತ್ತಷ್ಟು ಸೋಂಕುಗಳ ಅಪಾಯವನ್ನು ಕಡಿಮೆ ಮಾಡಲು ನಾಲ್ಕು ವಾರಗಳ ಕಾಲ ನಿದ್ರೆ ಮಾತ್ರೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನು ಗಮನಿಸಿದರೆ ಜಗತ್ತಿನಲ್ಲಿ ಎಂತಹ ಚಿತ್ರವಿಚಿತ್ರವಾದ ಘಟನೆಗಳು ನಡೆಯುತ್ತದೆ ಅಲ್ಲವೇ ಎಂಬುದು ನಮಗೆ ತಿಳಿಯುತ್ತದೆ. ಈ ಮೂಲಕ ಜಗತ್ತಿನಲ್ಲಿ ಕುಡಿತದ ಚಟಕ್ಕೆ ಒಳಗಾಗಿ ಸಮಸ್ಯೆಯಿಂದ ಪಾರಾದ ಮೊದಲ ನಾಯಿ ಎಂದು ಹೇಳಲಾಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
