ಇಂದು ಬಹಳದಿನಗಳಿಂದ ಅಭಿಮಾನಿಗಳು ಕಾಯುತ್ತಿದ್ದ CSK ಮತ್ತು RCB ತಂಡಗಳ ನಡುವೆ ಮೊದಲ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಇಂದಿನ ಪಂದ್ಯದಲ್ಲಿ RCB ತಂಡಕ್ಕೆ ದೊಡ್ಡ ತಲೆನೋವಾಗಿರುವುದು ಇಂಪ್ಯಾಕ್ಟ್ ಪ್ಲೇಯರ್ ಎಂಬ ಹೊಸ ನಿಯಮ.
ಇದೀಗ RCB ತಂಡಕ್ಕೆ ಅಲ್ಲದೆ ಫ್ಯಾನ್ಸ್ ಗಳಿಗೆ ದೊಡ್ಡ ತಲೆನೋವಾಗಿರುವುದು ಈ ಇಂಪ್ಯಾಕ್ಟ್ ಪ್ಲೇಯರ್ ಎಂಬ ಪದ. ಏಕೆಂದರೆ ಕಳೆದ 3 ಪಂದ್ಯಗಳಲ್ಲಿ RCB ತಂಡಕ್ಕೆ ಇಂಪ್ಯಾಕ್ಟ್ ಪ್ಲೇಯರ್ ಇಂದ ಯಾವುದೇ ರೀತಿಯ ಲಾಭವಾಗಿಲ್ಲ. ಇದಕ್ಕೆ ಹಲವಾರು ಉದಾಹರಣೆಗಳಿವೆ.
ಮೊದಲಿಗೆ KKR ತಂಡದ ವಿರುದ್ಧ ಅನುಜ್ ರಾವತ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಲಾಗಿತ್ತು. ಆದರೆ ಅನೂಜ್ ಕಲೆಹಾಕಿದ್ದು 5 ಎಸೆತಗಳಲ್ಲಿ ಕೇವಲ 1 ರನ್. ಇದಲ್ಲದೆ ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲೂ ಸಹ ಅನುಜ್ ರಾವತ್ ಬ್ಯಾಟ್ ಸದ್ದು ಮಾಡಲಿಲ್ಲ. ಏಕೆಂದರೆ ರಾವತ್ ಬರೋಬ್ಬರಿ 22 ಎಸೆತಗಳನ್ನು ಎದುರಿಸಿ 15 ರನ್ ಕಲೆಹಾಕಿದರು. ಇದು RCB ತಂಡಕ್ಕೆ ದೊಡ್ಡ ಹಿನ್ನಡೆಯಾಗಿತ್ತು.
ಇದನ್ನು ಬಿಟ್ಟರೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಸ್ಪಿನ್ನರ್ ಕರಣ್ ಶರ್ಮಾರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಿತ್ತು. ಈ ಪಂದ್ಯದಲ್ಲಿ ಕರಣ್ ಶರ್ಮಾ 3 ಓವರ್ಗಳಲ್ಲಿ 38 ರನ್ ನೀಡಿ RCB ತಂಡದ ಸೋಲಿಗೆ ಕಾರಣರಾದರು. ಹೀಗಾಗಿ ಇಂದಿನ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಯಾರನ್ನು ಆಡಿಸಬೇಕು ಎಂಬುದು RCB ಮ್ಯಾನೇಜ್ಮೆಂಟ್ ಮತ್ತು ನಾಯಕನಿಗೆ ದೊಡ್ಡ ತಲೆನೋವಾದರೆ, ಇನ್ನು ಯಾರನ್ನು ಆಡಿಸಬಹುದು ಎಂದು ಅಭಿಮಾನಿಗಳು ತೋಚಿಸುತ್ತ ತಲೆ ನೋವು ಪಡುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
