fbpx
ಸಮಾಚಾರ

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಎಂಟ್ರಿ ಕೊಟ್ಟ ಆರ್ಯವರ್ಧನ್ ಗುರೂಜಿ! ಅರ್ಧ ನಿಜ, ಅರ್ಧ ಸುಳ್ಳಾಯ್ತು ಗುರೂಜಿ ನುಡಿದ ಭವಿಷ್ಯ

ಕ್ರಿಕೆಟ್ ಪ್ರೇಮಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಅತ್ಯಂತ ರೋಚಕತೆಯ ಪಂದ್ಯ ಎಂದರೆ ಅದು ನೆನ್ನೆ ನಡೆದ RCB ಮತ್ತು CSK ನಡುವೆ ನಡೆದ ಹೈ ವೋಲ್ಟೇಜ್ ಪಂದ್ಯ. ನೆನ್ನೆ ಪಂದ್ಯದಲ್ಲಿ RCB ಕೊನೆವರೆಗೂ ಹೋರಾಟ ನಡೆಸಿದರು ಗೆಲ್ಲುವುದರಲ್ಲಿ ವಿಫಲರಾದರು. ನೆನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಕ್ಕೆ ಆರ್ಯವರ್ಧನ್ ಗುರೂಜಿ ಕೂಡ ಬಂದಿದ್ದರು.

‘ನಾನು ಎಂದರೆ ನಂಬರ್ ನಂಬರ್ ಎಂದರೆ ನಾನು’ ಎಂದು ಹೇಳುವ ಆರ್ಯವರ್ಧನ್ ಗುರೂಜಿ ನೆನ್ನೆ ನಡೆದ ಪಂದ್ಯದ ಕುರಿತು ಕೂಡ ಭವಿಷ್ಯ ನುಡಿದಿದ್ದರು. ಇವರು ನುಡಿಯುವ ಭವಿಷ್ಯ ಕೆಲವೊಂದು ಸಾರಿ ಮಾತ್ರ ನಿಜವಾಗುತ್ತದೆ. ಆದರೆ ಇವರ ಭವಿಷ್ಯ ಹಲವು ಬಾರಿ ಸುಳ್ಳಾಗಿದೆ. ಆದರೆ ನೆನ್ನೆ ಆರ್ಯವರ್ಧನ್ ಗುರೂಜಿ ನುಡಿದ ಭವಿಷ್ಯದಲ್ಲಿ ಕೆಲವು ನಿಜವಾಗಿದೆ ಮತ್ತು ಕೆಲವು ಸುಳ್ಳಾಗಿದೆ. ಹಾಗಿದ್ದರೆ ಗುರೂಜಿ ನುಡಿದ ಭವಿಷ್ಯದಲ್ಲಿ ನಿಜವಾದದ್ದು ಮತ್ತು ಸುಳ್ಳಾದದ್ದು ಯಾವುದು ಎಂಬುದನ್ನು ತಿಳಿಯೋಣ.

ಇನ್ನು ಪಂದ್ಯ ಆರಂಭಕ್ಕೂ ಮುನ್ನ ಆರ್ಯವರ್ಧನ್ ಗುರೂಜಿ, “ಇವತ್ತು ನನ್ನ ಬೆಂಬಲ RCB ಗೆ. ನನ್ನ ಪ್ರಕಾರ, ಇವತ್ತಿನ ಪಂದ್ಯದಲ್ಲಿ ವೆಯ್ನ ಪಾರ್ನೆಲ್ ಮೇಲೆ ತುಂಬಾ ಭರವಸೆ ಇಟ್ಟಿದ್ದಿನಿ. ಮ್ಯಾಕ್ಸವೇಲ್ ಸಹ ಇಂದಿನ ಪಂದ್ಯದಲ್ಲಿ ತುಂಬಾ ಒಳ್ಳೆಯ ಆಟ ಆಡಬಹುದು. ಇಂದಿನ ಪಂದ್ಯ ಬಹಳ ಕುತೂಹಲ ಪಂದ್ಯ, ಕೊನೆಯ ಓವರ್‌ವರೆಗೂ ಪಂದ್ಯ ಕುತೂಹಲವಾಗಿರಲಿದೆ” ಎಂದು ಭವಿಷ್ಯ ನುಡಿದಿದ್ದರು.

ಇದನ್ನು ಗಮನಿಸಿದರೆ ನೆನ್ನೆಯ ಪಂದ್ಯದಲ್ಲಿ ಪಾರ್ನೆಲ್‌ 4 ಓವರ್‌ ಬೌಲಿಂಗ್ ಮಾಡಿ 12ರ ಎಕಾನಮಿಯಲ್ಲಿ 48 ರನ್‌ ನೀಡಿ ಒಂದು ವಿಕೆಟ್ ಕಬಳಿಸುವ ಮೂಲಕ ಆರ್‌ಸಿಬಿ ಪರ ದುಬಾರಿ ಬೌಲರ್ ಎನಿಸಿಕೊಂಡಿದ್ದರು. ಇನ್ನು ಇವರ ಬ್ಯಾಟಿಂಗ್ ವಿಚಾರಕ್ಕೆ ಬಂದರೆ ಪಾರ್ನೆಲ್‌ 5 ಎಸೆತದಲ್ಲಿ 2 ರನ್ ಗಳಿಸಿ ಪೆವಿಲಿಯನ್ ಕಡೆ ನಡೆದರು. ಇದು ಗುರೂಜಿ ನುಡಿದ ಭವಿಷ್ಯದಲ್ಲಿ ಸುಳ್ಳಾದ ಅಂಶ.

 

 

ಇನ್ನು ಆರ್‌ಸಿಬಿ ಆಲ್ರೌಂಡರ್ ಮ್ಯಾಕ್ಸ್‌ವೆಲ್‌ ಉತ್ತಮವಾಗಿ ಆಡಬಹುದು ಎನ್ನುವ ಆರ್ಯವರ್ಧನ್ ಗುರೂಜಿ ಭವಿಷ್ಯ ನಿಜವಾಗಿದೆ. ಬೌಲಿಂಗ್‌ನಲ್ಲಿ ಮ್ಯಾಕ್ಸ್‌ವೆಲ್ 2.4 ಓವರ್‌ ಬೌಲಿಂಗ್ ಮಾಡಿ 28 ರನ್ ನೀಡಿ ಒಂದು ವಿಕೆಟ್ ಪಡೆದರು. ಇನ್ನು ಬ್ಯಾಟಿಂಗ್‌ನಲ್ಲಿ ಆರ್‌ಸಿಬಿ ತಂಡವು ಕೇವಲ 15 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಸಂದರ್ಭದಲ್ಲಿ ಕ್ರೀಸ್‌ಗಿಳಿದ ಮ್ಯಾಕ್ಸ್‌ವೆಲ್‌ ಕೇವಲ 36 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 8 ಮುಗಿಲೆತ್ತರದ ಸಿಕ್ಸರ್ ಸಿಡಿಸುವ ಮೂಲಕ 76 ರನ್ ಬಾರಿಸಿ ಅಭಿಮಾನಿಗಳನ್ನು ರಂಜಿಸಿದರು. ಇದಲ್ಲದೆ ಕೊನೆಯ ಹಂತದವರೆಗೂ ಸಹ ಮ್ಯಾಚ್ ರೋಚಕತೆಯಿಂದ ಕೂಡಿತ್ತು. ಹೀಗಾಗಿ ಇದು ಗುರೂಜಿ ನುಡಿದ ಭವಿಷ್ಯದಲ್ಲಿ ನಿಜವಾದ ಅಂಶವಾಗಿತ್ತು.

ಗುರೂಜಿ ಭವಿಷ್ಯ ನುಡಿದಾಗ ಪ್ರತಿಬಾರಿ ಕೂಡ ಪರ ವಿರೋಧ ಚರ್ಚೆಗಳು ನಡೆಯುತ್ತಿರುತ್ತದೆ. ಮತ್ತು ನೆನ್ನೆ ನುಡಿದ ಭವಿಷ್ಯದಲ್ಲೂ ಕೂಡ ಇದೆ ರೀತಿಯ ಚರ್ಚೆ ನಡೆಯುತ್ತಿತ್ತು, ಮತ್ತು ಈ ರೀತಿಯ ಭವಿಷ್ಯವನ್ನು ಯಾರು ಬೇಕಾದರೂ ಹೇಳಬಹುದು ಎಂಬ ವಾದ ವಿವಾದಗಳು ಕೂಡ ಕೇಳಿಬರುತ್ತಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top