IPL ಎಂದರೆ ಒಂದು ಕ್ರೇಜ್. ಅದರಲ್ಲೂ RCB ಮತ್ತು CSK ಪಂದ್ಯ ಎಂದರೆ ಜನ ಹುಚ್ಚೆದ್ದು ಕಾಯುತ್ತಾರೆ. ಇದೀಗ ನೆನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ಮತ್ತು CSK ಪಂದ್ಯ ನಡೆದ ಬಳಿಕ ವಿರಾಟ್ ಕೊಹ್ಲಿ ಮತ್ತು ಎಂ.ಎಸ್ ಧೋನಿ ಅವರ ಸ್ನೇಹ ಕಂಡು ಪ್ರೇಕ್ಷಕರು ಸಂತಸಪಟ್ಟಿದ್ದಾರೆ.
RCB ಮತ್ತು CSK ಪಂದ್ಯ ಎಂದರೆ ಅದು ಭಾರತ ಪಾಕಿಸ್ತಾನ ಪಂದ್ಯ ರೀತಿ ಜನ ನೋಡುತ್ತಾರೆ. ನೆನ್ನೆ ಕೂಡ ಎರಡು ತಂಡಗಳು ಗೆಲುವಿಗಾಗಿ ಬಹಳಷ್ಟು ಹೋರಾಡಿದರು. ಆದರೆ ನಮ್ಮ ನೆಚ್ಚಿನ RCB ತಂಡ 8 ರನ್ ಗಳಿಂದ ಸೋತು ಅಭಿಮಾನಿಗಳಿಗೆ ಬೇಸರು ಉಂಟು ಮಾಡಿದರು. ಆದರೆ ಈ ಬೇಸರವನ್ನು ಒಂದೇ ಕ್ಷಣ ಹೋಗಲಾಡಿಸಿದ್ದು, ವಿರಾಟ್ ಕೊಹ್ಲಿ ಮತ್ತು ಎಂ.ಎಸ್ ಧೋನಿ ನಗುತ್ತಾ ಮಾತನಾಡಿದ್ದ ಒಂದು ವಿಡಿಯೋ.
A legendary duo 🙌@imVkohli 🤝 @msdhoni
❤️ 💛#TATAIPL | #RCBvCSK pic.twitter.com/5sOQDkdBLb
— IndianPremierLeague (@IPL) April 17, 2023
ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಸಕತ್ ವೈರಲ್ ಆಗುತ್ತಿದೆ. ಅದೇನೆಂದರೆ ಪಂದ್ಯ ಮುಗಿದ ಬಳಿಕ ಕೊಹ್ಲಿ ಮತ್ತು ಧೋನಿ ಇಬ್ಬರು ಪರಸ್ಪರ ಮಾತನಾಡುತ್ತಿದ್ದರು. ಈ ವೇಳೆ ಮಾತನಾಡುತ್ತ ಧೋನಿ ನಗು ತರುವಂತಹ ವಿಷಯ ಏನು ಹೇಳಿದರು ಗೊತ್ತಿಲ್ಲ, ಈ ವೇಳೆ ವಿರಾಟ್ ಧೋನಿ ಮೇಲೆ ಕೈ ಹಾಕಿ ನಕ್ಕಿದ್ದಾರೆ. ಇವರಿಬ್ಬರ ಸ್ನೇಹ ಕಂಡ ಫ್ಯಾನ್ಸ್ ಬಹಳಷ್ಟು ಖುಷಿ ಪಟ್ಟಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
