fbpx
ಸಮಾಚಾರ

ಇಂದು ಬಸವರಾಜ್ ಬೊಮ್ಮಾಯಿ ಪರ ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರಚಾರ ಮಾಡಲಿರುವ ಕಿಚ್ಚ ಸುದೀಪ್! ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯದಲ್ಲಿ ಚುನಾವಣೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಭ್ಯರ್ಥಿಗಳು ಪ್ರಚಾರಕ್ಕಾಗಿ ಹಗಲು ರಾತ್ರಿ ಎಂದು ನೋಡದೆ ಬಿರುಸಾಗಿ ಪ್ರಚಾರ ಮಾಡುತ್ತಿದ್ದಾರೆ. ಇಂದು ಬಸವರಾಜ್ ಬೊಮ್ಮಾಯಿ ಅವರ ಪರ ಕಿಚ್ಚ ಸುದೀಪ್ ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಶಿಗ್ಗಾಂವಿ ಪಟ್ಟಣದ ನಗರದ ಪ್ರಮುಖ ಬೀದಿಗಳಲ್ಲಿ ಕಿಚ್ಚ ಸುದೀಪ್ 1 ಗಂಟೆ 15 ನಿಮಿಷಗಳ ಕಾಲ ರೋಡ್ ಶೋ ನಡೆಸಲಿದ್ದು, ಬೆಳಗ್ಗೆ 10:45ಕ್ಕೆ ಹುಬ್ಬಳ್ಳಿಯಿಂದ ಶಿಗ್ಗಾಂವಿ ಹೆಲಿಪ್ಯಾಡ್‌ಗೆ ಆಗಮಿಸಿ, 11 ಗಂಟೆಗೆ ಬೊಮ್ಮಾಯಿ ಪರ ಬೃಹತ್ ರೋಡ್ ಶೋದಲ್ಲಿ ಕಿಚ್ಚ ಸುದೀಪ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗವಹಿಸಲಿದ್ದಾರೆ.

ರೋಡ್ ಶೋ ಕಾರ್ಯಕ್ರಮದ ವಿವರ:
ಶಿಗ್ಗಾಂವಿ ಪಟ್ಟಣದ ಸಂತೆಮೈದಾನದಿಂದ ಬೃಹತ್ ರೋಡ್ ಶೋ ಪ್ರಾರಂಭ ವಾಗಲಿದೆ. ಚೆನ್ನಮ್ಮ ವೃತ್ತ, ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ತಾಲೂಕು ಕ್ರೀಡಾಂಗಣವರೆಗೆ ಸುಮಾರು 2 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ. 12:15ಕ್ಕೆ ಶಿಗ್ಗಾಂವಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಯಲಿದೆ.

ಇದೀಗ ಕಿಚ್ಚ ಸುದೀಪ್ ಮೂಲಕ ಪ್ರಚಾರ ಮಾಡಿಸುತ್ತಿರುವ ಬಿಜೆಪಿ ಹಲವು ಲಾಭಗಳನ್ನು ಇಟ್ಟುಕೊಂಡಿದೆ. ಏಕೆಂದರೆ ಕಿಚ್ಚ ಸುದೀಪ್ ಒಬ್ಬ ಹೆಸರಾಂತ ನಟ. ಹೀಗಾಗಿ ಕಿಚ್ಚನ ಅಭಿಮಾನಿಗಳು ಬಿಜೆಪಿ ಗೆ ವೋಟ್ ಹಾಕುತ್ತಾರೆ ಎಂಬುದು ಒಂದು ನಂಬಿಕೆ. ವಾಲ್ಮೀಕಿ ಸಮುದಾಯದವರು ಸಹ ಬೊಮ್ಮಾಯಿ ಅವರಿಗೆ ವೋಟು ಹಾಕುತ್ತಾರೆ ಎಂಬುದು ಕೂಡ ಒಂದು ನಂಬಿಕೆ. ಹೀಗಾಗಿ ಕಿಚ್ಚನ ಪ್ರಚಾರದಿಂದ ಬಿಜೆಪಿ ಅವರಿಗೆ ಯಾವ ರೀತಿ ಲಾಭವಾಗುತ್ತದೆ ಎಂಬುದನ್ನು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top