ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಇದಕ್ಕೆ ಹಲವಾರು ಉದಾಹರಣೆಗಳು ಸಹ ದೊರಕಿದ್ದವು. ಇದೀಗ ವಿಶ್ವಸಂಸ್ಥೆ ಜನಗಣತಿಯನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ಎಲ್ಲ ದೇಶವನ್ನು ಹಿಂದಿಕ್ಕಿ ಭಾರತ ಮೊದಲನೆಯ ಸ್ಥಾನದಲ್ಲಿದೆ.
ವಿಶ್ವಸಂಸ್ಥೆಯ ಡ್ಯಾಶ್ಬೋರ್ಡ್ ನ ನೂತನ ವರದಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆ 142.86 ಕೋಟಿ. ಚೀನಾದ ಜನಸಂಖ್ಯೆ 142.57 ಕೋಟಿ. ಹೀಗಾಗಿ ಭಾರತ ಚೀನಾ ತಂಡವನ್ನು ಹಿಂದಿಕ್ಕಿ ಜನಸಂಖ್ಯೆಯಲ್ಲಿ ಮೊದಲನೆಯ ಸ್ಥಾನದಲ್ಲಿದೆ.
ಶೇಕಡಾ 25% ಮಂದಿ 0-14 ವಯಸ್ಸಿನವರು
ಶೇಕಡಾ 18% ಮಂದಿ 10-19 ವಯಸ್ಸಿನವರು
ಶೇಕಡಾ 26% ಮಂದಿ 10-24 ವಯಸ್ಸಿನವರು
ಶೇಕಡಾ 68% ಮಂದಿ 15-64 ವಯಸ್ಸಿನವರು
ಶೇಕಡಾ 07% ಮಂದಿ 65 ವರ್ಷ ಮೇಲ್ಪಟ್ಟವರು ಏನು ಹೇಳಲಾಗುತ್ತಿದೆ.
ಇದಲ್ಲದೆ ಮತ್ತೊಂದು ಶಾಕಿಂಗ್ ವಿಚಾರ ಎಂದರೆ ಇದು ಹೀಗೆ ಮುಂದುವರೆದರೆ ಇನ್ನು 3 ವರ್ಷದಲ್ಲಿ ಭಾರತದ ಜನಸಂಖ್ಯೆ 165 ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗುತ್ತಿದೆ. ಇದು ಭಾರತದ ಆರ್ಥಿಕ ಪರಿಸ್ಥಿತಿಗೆ ದೊಡ್ಡ ತಲೆನೋವಾಗುವುದು ಪಕ್ಕ ಎಂದು ಹೇಳಬಹುದು. ಇದಲ್ಲದೆ ಪುರುಷರ ಸರಾಸರಿ ವಯಸ್ಸು 71 ಆಗಿದ್ದರೆ, ಮಹಿಳೆಯರದ್ದು 74 ಎಂದು ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
