ಕನ್ನಡ ಸಿನಿಮಾ ರಂಗದಲ್ಲಿ ಆಗಿನಕಾಲದಿಂದಲೂ ಬಹಳ ಹೆಸರು ಮಾಡಿಕೊಂಡು ಬಂದಿರುವ ನಟಿಯರಲ್ಲಿ ಲಕ್ಷಿ ಕೂಡ ಒಬ್ಬರು. ಇವರ ನಟನೆಗೆ ಅಭಿಮಾನಿಗಳ ಬಳಗ ಇಂದಿಗೂ ಸಹ ಇದೆ. ಆದರೆ ಅಚ್ಚರಿಯ ವಿಷಯ ಎಂದರೆ ಲಕ್ಷ್ಮಿ ಅವರ ಪುತ್ರಿ ಐಶ್ವರ್ಯಾ ಭಾಸ್ಕರನ್ ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದರು ಎಂಬ ಆಘಾತಕಾರಿ ಮಾಹಿತಿಯನ್ನು ಲಕ್ಷ್ಮಿ ಅವರು ತಿಳಿಸಿದ್ದಾರೆ.
ಲಕ್ಷ್ಮಿ ಅವರ ಪುತ್ರಿ ಐಶ್ವರ್ಯಾ ಭಾಸ್ಕರನ್ ಕನ್ನಡಿಗರಿಗೆ ಅಷ್ಟೊಂದು ಚಿರಪರಿಚಿತರೇನಲ್ಲ. ಈ ಹಿಂದೆ ನಡೆದ ಒಂದು ಸಂದರ್ಶನದಲ್ಲಿ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದೇನೆ ಎಂದು ಹೇಳಿದ ಮಾತು ಸಕತ್ ವೈರಲ್ ಆಗಿತ್ತು. ಇದೀಗ ಕೆಲವು ದಿನಗಳಿಂದ ಕೆಲವು ದಿನಗಳಿಂದ ಆನ್‌ಲೈನ್ ಲೈಂಗಿಕ ಕಿರುಕುಳ ಎದುರಿಸುತ್ತಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದೆ ಆದರೆ ತನ್ನ ಮಗಳ ಸಲಹೆ ಮೇರೆಗೆ ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಮಲಯಾಳಂ ನಲ್ಲಿ ಅತಿ ಹೆಚ್ಚು ಧಾರಾವಾಹಿಯಲ್ಲಿ ಐಶ್ವರ್ಯ ಅಭಿನಯಿಸುತ್ತಿದ್ದರು. ಜೀವನಕ್ಕಾಗಿ ಸೋಪು ಮಾರಾಟ ಕೂಡ ಮಾಡುತ್ತಿದ್ದರು. ತಮ್ಮ ಬಿಸಿನೆಸ್ ಅನ್ನು ಹೆಚ್ಚಿಸುವ ಉದ್ದೇಶದಿಂದ ಇವರು ಸಂದರ್ಶನದಲ್ಲಿ ತಮ್ಮ ಮೊಬೈಲ್ ನಂಬರ್ ಅನ್ನು ಸಹ ಶೇರ್ ಮಾಡಿದ್ದರು. ಇದು ಇವರಿಗೆ ದೊಡ್ಡ ಮುಳ್ಳಾಗಿದೆ.
ಯೂಟ್ಯೂಬ್ ವಾಹಿನಿಯಲ್ಲಿ ಮಾತನಾಡಿರುವ ಐಶ್ವರ್ಯಾ, ‘ಮೊಬೈಲ್ ನಂಬರ್ಗೆ ಅನೇಕರು ಕಟ್ಟ-ಕೆಟ್ಟದಾಗಿ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಕೆಲವು ಪುರುಷರು ತಮ್ಮ ಖಾಸಗಿ ಭಾಗದ ಚಿತ್ರಗಳನ್ನು ಕಳಿಸಿದ್ದಾರೆ. ಇನ್ನು ಕೆಲವರು ತಮ್ಮ ಚಿತ್ರವನ್ನು ಎಡಿಟ್ ಮಾಡಿ ಅಸಭ್ಯವಾಗಿ ಮಾಡಿ ಮಾಡಿ ನನಗೇ ಕಳಿಸಿದ್ದಾರೆ. ಅಸಹ್ಯವಾದ ಕಮೆಂಟ್ಗಳನ್ನು ಮಾಡಿದ್ದಾರೆ ಇದರಿಂದ ನನ್ನ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ತೀವ್ರ ಕಿರುಕುಳ ನೀಡುತ್ತಿದ್ದಾರೆ, ಕರೆ ಮಾಡಿ ಕೆಟ್ಟದಾಗಿ ಮಾತನಾಡಿದ್ದಾರೆ’
‘ನಾನು ಅನುಭವಿಸುತ್ತಿರುವ ಕಿರುಕುಳದ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಬೇಡ ಎಂದುಕೊಂಡು ಸುಮ್ಮನಿದ್ದೆ ಆದರೆ ನನ್ನ ಮಗಳೇ ಇದರ ವಿರುದ್ಧ ಏನಾದರೂ ಕ್ರಮ ಜರುಗಿಸಲೇ ಬೇಕು ಎಂದು ಹೇಳಿದಳು, ಹಾಗಾಗಿ ಈ ಬಗ್ಗೆ ಮಾತನಾಡುತ್ತಿದ್ದೇನೆ, ಪೊಲೀಸರಿಗೆ ದೂರು ನೀಡುವ ಉದ್ದೇಶವೂ ಇರಲಿಲ್ಲ ಆದರೆ ದಿನೇ-ದಿನೇ ಕಿರುಕುಳ ಹೆಚ್ಚಾದ ಕಾರಣ ಅದರ ಬಗ್ಗೆಯೂ ಯೋಚಿಸುತ್ತದ್ದೇನೆ. ನನಗೆ ಕೆಟ್ಟದಾಗಿ ಸಂದೇಶ ಕಳಿಸುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ‘ ಎಂದಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
