RCB ಎಂದರೆ ಒಂದು ಕ್ರೇಜ್. RCB ಪ್ರತಿ ಪಂದ್ಯವನ್ನು ಸಹ ಅಭಿಮಾನಿಗಳು ಬಹಳ ಜೋಶ್ ಇಂದ ನೋಡುತ್ತಾರೆ. ಅದರಲ್ಲೂ ಪ್ರತಿಯೊಬ್ಬ RCB ಅಭಿಮಾನಿಯ ನೆಚ್ಚಿನ ಕ್ರಿಕೆಟಿಗ ಎಂದರೆ ಅದು ವಿರಾಟ್ ಕೊಹ್ಲಿ. ಇದೀಗ ನೆನ್ನೆ ನಡೆದ ಪಂದ್ಯದಲ್ಲಿ ವಿರಾಟ್ ವಿಕೆಟ್ ಪಡೆದ ಬಳಿಕ ಪತ್ನಿ ಅನುಷ್ಕಾ ಶರ್ಮ ಅವರಿಗೆ ಪ್ರೀತಿಯ ಫ್ಲೈಯಿಂಗ್ ಕಿಸ್ ನೀಡಿದ್ದಾರೆ.
ನೆನ್ನೆ ರಾಜಸ್ಥಾನ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹತ್ವದ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ RCB ತಂಡ ರಾಜಸ್ಥಾನ್ ತಂಡವನ್ನು ಮಣಿಸುವ ಮೂಲಕ ತವರು ಅಂಗಳದಲ್ಲಿ ಮತ್ತೆ ಗೆದ್ದು ಬೀಗಿತು. ಈ ಪಂದ್ಯದಲ್ಲಿ ವಿರಾಟ್ ಬ್ಯಾಟ್ ಮೂಲಕ ಸದ್ದು ಮಾಡದೇ ಇದ್ದರು, ಫೀಲ್ಡಿಂಗ್ ನಲ್ಲಿ ಅಭಿಮಾನಿಗಳನ್ನು ರಂಜಿಸಿದರು.
ನೆನ್ನೆ ನಡೆದ ಪಂದ್ಯದಲ್ಲಿ ವಿರಾಟ್ ಆಡಿದ ಮೊದಲ ಎಸೆತದಲ್ಲಿ ಔಟ್ ಆಗುವ ಮೂಲಕ ಗೋಲ್ಡನ್ ಡಕ್ ಗೆ ಗುರಿಯಾದರು. ಇದಾದ ಬಳಿಕ ಡುಪ್ಲೆಸ್ಸಿ ಮತ್ತು ಮ್ಯಾಕ್ಸ್ವೆಲ್ ಅವರ ಅಬ್ಬರದ ಬ್ಯಾಟಿಂಗ್ ಸಹಾಯದಿಂದ RCB 189 ರನ್ ಗಳಿಸಿತು. 190 ರನ್ ಟಾರ್ಗೆಟ್ ಬೆನ್ನಟ್ಟಿದ್ದ ರಾಜಸ್ಥಾನ್ ತಂಡಕ್ಕೆ ಮತ್ತೊಮ್ಮೆ RCB ನೆಚ್ಚಿನ ಬೌಲರ್ ಸಿರಾಜ್ ಬಟ್ಲರ್ ಅವರನ್ನು ಔಟ್ ಮಾಡುವ ಮೂಲಕ ಉತ್ತಮ ಆರಂಭ ಕೊಟ್ಟರು.
ಈ ಪಂದ್ಯದಲ್ಲಿ ವಿರಾಟ್ ಎರಡು ಕ್ಯಾಚ್ ಪಡೆದರು. ಈ ವೇಳೆ ಅವರು ಒಂದು ಕ್ಯಾಚ್ ಪಡೆದು ನಂತರ ತನ್ನ ಪತ್ನಿಯ ಕಡೆ ತಿರುಗಿ ಫ್ಲೈಯಿಂಗ್ ಕಿಸ್ ನೀಡಿದರು. ಈ ವಿಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
