ಪ್ರತಿಯೊಬ್ಬರು ಸಹ ಆಧಾರ್ ಕಾರ್ಡ್ ಅನ್ನು ಬಳಸುತ್ತಾರೆ. ದೇಶದಲ್ಲಿ ಆಧಾರ್ ಕಾರ್ಡ್ ಅನ್ನು ಪ್ರಮುಖ ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯಲು, ಪಾಸ್ ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ಸಂಪರ್ಕಕ್ಕೆ, ಸರ್ಕಾರದ ಸಬ್ಸಿಡಿಗಳನ್ನು ಪಡೆಯಲು ಹಾಗೂ ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಯಾಗಲು ಆಧಾರ್ ಕಾರ್ಡ್ ಅತ್ಯಗತ್ಯ. ಆದರೆ ಪ್ರತಿಯೊಬ್ಬರೂ ಸಹ ತಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋ ನೋಡಿ, ಇನ್ನು ಚೆನ್ನಾಗಿ ಇರುವ ಫೋಟೋ ಹಾಕಿದರೆ ಚೆನ್ನಾಗಿ ಇರುವುದು ಎಂದು ಯೋಚಿಸುತ್ತಾರೆ. ಇದೀಗ ಅಂತವರಿಗೆ ಒಂದು ಶುಭ ಸುದ್ದಿ.
ಆಧಾರ್ ಕಾರ್ಡ್ ನಲ್ಲಿ ಪ್ರತಿಯೊಬ್ಬರ ಫೋಟೋ ಕೂಡ ಚೆನ್ನಾಗಿ ಬಂದಿರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಫೋಟೋವನ್ನು ಬದಲಿಸುವ ಅವಕಾಶವಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಂದುಕೊಳ್ಳುತ್ತಿದ್ದರು. ಏಕೆಂದರೆ ಈ ಹಿಂದೆ ಆಧಾರ್ ಕಾರ್ಡ್ ನಲ್ಲಿ ಹೆಸರು, ವಿಳಾಸ, ಜನ್ಮದಿನಾಂಕ, ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ, ಸಂಬಂಧದ ಸ್ಟೇಟಸ್ ಅನ್ನು ಅಪ್ಡೇಟ್ ಮಾಡಬಹುದು. ಹಾಗೆಯೇ ಕಣ್ರೆಪ್ಪೆ, ಬೆರಳಚ್ಚು ಅಪ್ಡೇಟ್ ಮಾಡಬಹುದಿತ್ತು. ಇದೀಗ ಫೋಟೋ ಕೂಡ ಅಪ್ಡೇಟ್ ಮಾಡಬಹುದು. ಅದನ್ನು ಮಾಡಲು ಈ ಸುಲಭ ವಿಧಾನವನ್ನು ಅನುಸರಿಸಬೇಕು.
ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾಯಿಸಲು ನೀವು ಸಮೀಪದ ಆಧಾರ್ ಸೇವಾ ಅಥವಾ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು. ಈ ಮೇಲೆ ವಿವರಿಸಿದಂತೆ https://appointments.uidai.gov.in ವೆಬ್ ಸೈಟ್ ನಲ್ಲಿ ನೀವು ಸಮೀಪದ ಆಧಾರ್ ನೋಂದಣಿ ಕೇಂದ್ರದ ಮಾಹಿತಿ ಪಡೆಯಬಹುದು.
ಹಂತ 1: ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾವಣೆಗೆ ಸಂಬಂಧಿಸಿದ ಅರ್ಜಿ ಭರ್ತಿ ಮಾಡಿ. ನೋಂದಣಿ ಕೇಂದ್ರಕ್ಕೆ ಸಲ್ಲಿಕೆ ಮಾಡಿ.
ಹಂತ 2: ಈ ಕೇಂದ್ರದಲ್ಲಿರುವ ನಿರ್ವಾಹಕರು ನೀವು ನೀಡಿರುವ ಅರ್ಜಿಯಲ್ಲಿರುವ ಮಾಹಿತಿ ಅನ್ವಯ ಬಯೋಮೆಟ್ರಿಕ್ ಮಾಹಿತಿಗಳನ್ನು ಕಲೆ ಹಾಕುತ್ತಾರೆ.
ಹಂತ 3: ನೀವು ಈ ಅರ್ಜಿಯಲ್ಲಿ ಫೋಟೋ ಬದಲಾವಣೆ ಬಗ್ಗೆ ಉಲ್ಲೇಖಿಸಿದ್ದರೆ ನಿರ್ವಾಹಕರು ನಿಮ್ಮ ಫೋಟೋ ತೆಗೆಯುತ್ತಾರೆ.
ಹಂತ 4: ಅಪ್ಡೇಟ್ ಮನವಿ ಸಂಖ್ಯೆ (URN) ಹೊಂದಿರುವ ಸ್ವೀಕೃತಿ ಸ್ಲಿಪ್ ಅನ್ನು ರೆಫರೆನ್ಸ್ ಗಾಗಿ ಸೃಷ್ಟಿಸಲಾಗುತ್ತದೆ.
ಫೋಟೋ ಅಪ್ಡೇಟ್ ಮಾಡಿದ ಬಳಿಕ ನೀವು ಆಧಾರ್ ಕಾರ್ಡ್ ಡಿಜಿಟಲ್ (ಇ-ಆಧಾರ್) ಪ್ರತಿಯನ್ನು UIDAI ಅಧಿಕೃತ ವೆಬ್ ಸೈಟ್ uidai.gov.in ಇಲ್ಲಿಂದ ಡೌನ್ಲೋಡ್ ಮಾಡಬಹುದು.
ಆಧಾರ್ ಕಾರ್ಡ್ ನಲ್ಲಿ ಕೆಲವು ಮಾಹಿತಿಗಳನ್ನು ಆನ್ ಲೈನ್ ನಲ್ಲಿ ಬದಲಾವಣೆ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಫೋಟೋ ಬದಲಾವಣೆ ಮಾಡಲು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವುದು ಅಗತ್ಯ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
