fbpx
ಸಮಾಚಾರ

ಮೇ 10 ರಂದು ಜೋಗ್ ಜಲಪಾತ ವೀಕ್ಷಣೆಗೆ ನಿರ್ಬಂಧ! ಇಲ್ಲಿದೆ ಸೂಕ್ತ ಕಾರಣ

ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಸ್ಥಳಗಳಲ್ಲಿ ಜೋಗ್ ಜಲಪಾತ ಕೂಡ ಒಂದು. ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಸಿದ್ಧ ಜಲಪಾತವಿದು. ಆದರೆ ಮೇ 10 ರಂದು ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿರುವ ಜೋಗ ಜಲಪಾತ ವಿಶ್ವ ಪ್ರಸಿದ್ದಿ ಗಳಿಸಿದ ತಾಣವಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗಳು ಆಗಮಿಸುತ್ತಿರುತ್ತಾರೆ. ಇದಲ್ಲದೆ ಮೇ 10 ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಈ ದಿನ ಸರ್ಕಾರಿ ರಜೆ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ವೋಟ್ ಹಾಕುವ ಬದಲು ಮಜಾ ಮಾಡಲು ಹೊರಗಡೆ ಹೋಗುವ ಸಾಧ್ಯತೆ ಹೆಚ್ಚು.

ಹೀಗಾಗಿ ಮೇ 10 ರಂದು ಜನರು ಜೋಗ್ ಜಲಪಾತ ವೀಕ್ಷಿಸಲು ಬರುವ ಕಾರಣ ಕೂಡ ಹೆಚ್ಚಾಗಿರುವುದರಿಂದ ಜಲಪಾತದ ಹೊರ ಭಾಗದಲ್ಲಿ ಜೋಗ ನಿರ್ವಾಹಣಾ ಪ್ರಾಧಿಕಾರವು ಫ್ಲೆಕ್ಸ್‌ವೊಂದನ್ನು ಹಾಕಿದ್ದು, ಮೇ 10 ರಂದು ಚುನಾವಣೆ ಇರುವ ಕಾರಣ ಜನರಿಗೆ ಜೋಗ್ ಜಲಪಾತ ವೀಕ್ಷಣೆಗೆ ಅವಕಾಶವಿಲ್ಲ ಎಂದು ಹಾಕಿದ್ದಾರೆ. ಈ ಮೂಲಕ ಮತದಾನಕ್ಕೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top