fbpx
ಸಮಾಚಾರ

WTCಗೆ ಟೀಂ ಇಂಡಿಯಾ ಆಯ್ಕೆ ಪ್ರಕಟ! ಸ್ಟಾರ್ ಆಟಗಾರ ತಂಡದಿಂದ ಹೊರಗೆ

ಜೂನ್‌ 7 ರಿಂದ 11ರ ವರೆಗೆ ಲಂಡನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಬಿಸಿಸಿಐ ಟೀಂ ಇಂಡಿಯಾ ಆಟಗಾರರನ್ನ ಆಯ್ಕೆ ಮಾಡಿದೆ. ಈ ಆಟಗಾರರ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಇದ್ದು, ಇದನ್ನು ಕಂಡು ಅಭಿಮಾನಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ.

BCCI 15 ಜನರ ಬಲಿಷ್ಠ ಆಟಗಾರರ ತಂಡವನ್ನ ಕಟ್ಟಿದ್ದು, ಪ್ರಸ್ತುತ IPL ನಲ್ಲಿ ಚೆನ್ನೈ ಪರ ಆಡುತ್ತಿರುವ ಅಜಿಂಕ್ಯಾ ರಹಾನೆಗೆ ಸ್ಥಾನ ನೀಡಲಾಗಿದೆ. 2022ರ ಜನವರಿಯಲ್ಲಿ ರಹಾನೆ ಆಡಿದ ಕೊನೆಯ ಟೆಸ್ಟ್ ಪಂದ್ಯವಾಗಿತ್ತು. ಇದಾದ ಬಳಿಕ ಇವರ ಕಳಪೆ ಫಾರಂ ನಿಂದ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದರು. ಇದಾದ ಬಳಿಕ ಪ್ರಸ್ತುತ IPL ನಲ್ಲಿ ಇವರ ಪ್ರದರ್ಶನ ಕಂಡು ಇದೀಗ ಮತ್ತೊಮ್ಮೆ ಇವರನ್ನು ತಂಡಕ್ಕೆ ಆಯ್ಕೆಮಾಡಿಕೊಳ್ಳಲಾಗಿದೆ.

ಇದೀಗ ಅಚ್ಚರಿಯ ಸಂಗತಿ ಎಂದರೆ ಟೀಮ್ ಇಂಡಿಯಾದ Mr. 360 ಎಂದು ಪ್ರಖ್ಯಾತಿಗಳಿಸಿರುವ ಸೂರ್ಯಕುಮಾರ್‌ ಯಾದವ್‌ ಅವರನ್ನು ತಂಡದಿಂದ ಹೊರಗುಳಿಸಲಾಗಿದೆ. ಇದಲ್ಲದೆ ಕುಲ್‌ದೀಪ್ ಯಾದವ್, ಇಶಾನ್ ಕಿಶನ್ ಕೂಡ ತಂಡದಿಂದ ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಶ್ರೇಯಸ್‌ ಅಯ್ಯರ್‌ ಕೂಡ ತಂಡದಿಂದ ಹೊರಗುಳಿದಿದ್ದಾರೆ.

WTC ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಲ್ ರಾಹುಲ್, ಕೆ.ಎಸ್ ಭರತ್ (ವಿಕೆಟ್‌ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್‌ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕಟ್‌.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top