ಅಂದು 2011 ರ ವಿಶ್ವಕಪ್ ಫೈನಲ್ ಪಂದ್ಯ. ಭಾರತ ಮತ್ತು ಶ್ರೀಲಂಕಾ ತಂಡಗಳು ಕಪ್ ಗೆಲ್ಲಲು ಸೆಣಸಾಡುತ್ತಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಮಹೇಲಾ ಜಯವರ್ಧನೆ ಅಬ್ಬರದ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 274 ರನ್ ಕಲೆಹಾಕಿ ಟೀಮ್ ಇಂಡಿಯಾಗೆ ಗೆಲ್ಲಲು 275 ರನ್‌ಗಳ ಗುರಿಯನ್ನು ನೀಡಿತು.
275 ರನ್ ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ತಂಡಕ್ಕೆ ಆರಂಭಿಕ ಆಘಾತ ಶುರುವಾಗಿತ್ತು. ಆರಂಭಿಕರಾಗಿ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಕಣಕ್ಕಿಳಿದರು. ವಿರೇಂದ್ರ ಸೆಹ್ವಾಗ್ ಡಕ್‌ಔಟ್ ಆದರೆ ಸಚಿನ್ ತೆಂಡೂಲ್ಕರ್ 14 ಎಸೆತಗಳಲ್ಲಿ 18 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು.
ಸಚಿನ್ ಔಟ್ ಆದ ಬಳಿಕ ವಿರಾಟ್ ಕೊಹ್ಲಿ ಬ್ಯಾಟ್ ಮಾಡಲು ಬಂದರು. ಈ ವೇಳೆ ಸಚಿನ್ ವಿರಾಟ್ ಬಳಿ ಏನೋ ಮಾತನಾಡಿದರು. ಆದರೆ ಏನು ಮಾತನಾಡಿದರು ಎಂಬುದು ಎಲ್ಲರಿಗು ಸಂಶಯವಾಗಿತ್ತು. ಏಕೆಂದರೆ 31 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಮ್ ಇಂಡಿಯಾ ಗಂಭೀರ್ ಹಾಗೂ ಕೊಹ್ಲಿ 83 ರನ್‌ಗಳ ಜೊತೆಯಾಟದಿಂದ ಗೆಲುವಿನ ದಡ ಸೇರಿದರು. ಹೀಗಾಗಿ ವಿರಾಟ್ ಅವರಿಗೆ ಸಚಿನ್ ಏನು ಹೇಳಿದರು ಎಂಬ ಪ್ರಶ್ನೆ ಎಲ್ಲರಿಗು ತಲೆ ಕೆಡಿಸುತಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಹೌದು, ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಿನ್ನೆ ತಮ್ಮ ಅನುಯಾಯಿಗಳ ಜತೆ ಟ್ವೀಟ್ ಮೂಲಕ ಮಾತನಾಡಿದ್ದಾರೆ. ಅಭಿಮಾನಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಸಚಿನ್ ತೆಂಡೂಲ್ಕರ್ ಉತ್ತರ ನೀಡಿದ್ದಾರೆ. ಈ ವೇಳೆ ಕ್ರಿಕೆಟ್ ಪ್ರೇಮಿಯೋರ್ವ ನೀವು 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಔಟ್ ಆಗಿ ಬರುತ್ತಿದ್ದಾಗ ಸಿಕ್ಕ ವಿರಾಟ್ ಕೊಹ್ಲಿಗೆ ಏನು ಹೇಳಿದ್ರಿ ಎಂಬ ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಉತ್ತರ ನೀಡಿರುವ ಸಚಿನ್ “ಇನ್ನೂ ಸಹ ಬಾಲ್ ಸ್ವಿಂಗ್ ಆಗುತ್ತಿದೆ” ಎಂದು ಹೇಳಿದ್ದೆ ಎಂದರು. ಈ ಮೂಲಕ ಬಾಲ್ ಸ್ವಿಂಗ್ ಆಗುತ್ತಿದೆ, ನೋಡಿಕೊಂಡು ಆಡು ಎಂಬ ಸಂದೇಶವನ್ನು ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿಗೆ ನೀಡಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
