fbpx
ಸಮಾಚಾರ

ಜೋಶ್ ಹ್ಯಾಝಲ್​ವುಡ್ ಫಿಟ್ ಆಗಿದ್ದರು RCB ಪರ ಆಡದೆ ಇರಲು ಮುಖ್ಯ ಕಾರಣವೇನು ಗೊತ್ತಾ?

RCB ತಂಡ ಇದೀಗ ಪ್ಲೇಆಫ್ ಹಂತ ತಲುಪಲು ಕಠಿಣ ಪರಿಶ್ರಮ ಪಡಬೇಕು. ಮುಂದಿನ ಎಲ್ಲ ಪಂದ್ಯವನ್ನು ಗೆದ್ದರೆ ಮಾತ್ರ ಪ್ಲೇಆಫ್ ಅನ್ನು ಸಲೀಸಾಗಿ ತಲುಪಬಹುದು. ಆದರೆ RCB ಅಭಿಮಾನಿಗಳಿಗೆ ಕಾಡುತ್ತಿರುವ ಒಂದು ಪ್ರಶ್ನೆ ಏನೆಂದರೆ ಜೋಶ್ ಹ್ಯಾಝಲ್​ವುಡ್ ತಂಡವನ್ನು ಸೇರಿಕೊಂಡರು ಸಹ ಏನಿಕೆ ಇವರು ಪ್ಲೇಯಿಂಗ್ 11 ರಲ್ಲಿ ಕಾಣಿಸಿಕೊಳ್ಳುತ್ತಿಲ್ಲವೆಂದು. ಇದಕ್ಕೆ ಒಂದು ಕಾರಣವಿದೆ.

RCB ತಂಡದ ಬೌಲಿಂಗ್ ವಿಭಾಗದಲ್ಲಿ ಹೆಚ್ಚು ಶಕ್ತಿ ತುಂಬುತ್ತಿದ್ದ ಬೌಲರ್ ಎಂದರೆ ಅದು ಜೋಶ್ ಹ್ಯಾಝಲ್​ವುಡ್. ಕಳೆದ ಬಾರಿಯ IPL ನಲ್ಲಿ ಇವರ ಪ್ರದರ್ಶನವನ್ನು ನಾವು ನೋಡಿದ್ದೇವೆ. ಆದರೆ ಈ ಬಾರಿಯ IPL ನಲ್ಲಿ ಗಾಯದ ಸಮಸ್ಯೆಯಿಂದ ಇವರು ತಂಡದಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ ಇದೀಗ ಇವರು ತಂಡಕ್ಕೆ ಮರಳಿದ್ದಾರೆ. ಆದರು ಕೂಡ ಇವರು ಪ್ಲೇಯಿಂಗ್ 11 ರಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಇದಕ್ಕೆ ಮುಖ್ಯ ಕಾರಣ ಕ್ರಿಕೆಟ್ ಆಸ್ಟ್ರೇಲಿಯಾ ಕಡೆಯಿಂದ ಸಿಗದ ಅನುಮತಿ. ಅಂದರೆ ಆಸೀಸ್ ಆಟಗಾರರು ಯಾವುದೇ ಲೀಗ್​ನಲ್ಲೂ ಭಾಗವಹಿಸುವ ಮುನ್ನ ಫಿಟ್​ನೆಸ್ ಅನ್ನು ಸಾಬೀತುಪಡಿಸಬೇಕಾಗುತ್ತದೆ. ಇಲ್ಲಿ ಫ್ರಾಂಚೈಸಿಯ ಆಕಾಂಕ್ಷೆಗಿಂತ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತನ್ನ ಆಟಗಾರರ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತದೆ. ಹೀಗಾಗಿ ಹ್ಯಾಝಲ್​ವುಡ್ ಫಿಟ್ ಆಗಿದ್ದರು ಅದನ್ನು ಒಪ್ಪಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಒಪ್ಪುತ್ತಿಲ್ಲ. ಹೀಗಾಗಿ ಫಿಟ್​ನೆಸ್ ಕ್ಲಿಯರೆನ್ಸ್​ಗಾಗಿ ಸಹಿ ಹಾಕಲು ಹಿಂದೇಟು ಹಾಕುತ್ತಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಹ್ಯಾಝಲ್​ವುಡ್ ಫಿಟ್ನೆಸ್ ಟೆಸ್ಟ್ ಪಾಸ್ ಆಗಿ ತಂಡದ ಪರ ಆಡುತ್ತಾರಾ ಎಂಬುದನ್ನು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top