ನೆನ್ನೆ ಲಕ್ನೋ ಮತ್ತು ಪಂಜಾಬ್ ತಂಡಗಳ ನಡುವೆ ನಡೆದ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು. ಈ ಪಂದ್ಯದಲ್ಲಿ ಉಭಯ ತಂಡಗಳಿಗಿಂದ ಹೆಚ್ಚು ರೋಚಕತೆ ಇದ್ದಿದ್ದು ನಮ್ಮ RCB ತಂಡದ ಅಭಿಮಾನಿಗಳಿಗೆ. ಏಕೆಂದರೆ ಅದುಕು ಕೂಡ ಒಂದು ಕಾರಣವಿದೆ.
IPL ಇತಿಹಾಸದಲ್ಲಿ ಅತ್ಯಂತ ಗರಿಷ್ಟ ರನ್ ಎಂದರೆ ಅದು ನಮ್ಮ ಹೆಮ್ಮೆಯ RCB ಮಾತ್ರ. 10 ವರ್ಷಗಳ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪುಣೆ ವಾರಿಯರ್ಸ್ ಬೌಲರ್‌ಗಳನ್ನು ಚೆಂಡಾಡಿದ್ದ ಕ್ರಿಸ್ ಗೇಲ್ 175 ರನ್ ಸಿಡಿಸಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ ಬಾರಿಸಿದ್ದ 5 ವಿಕೆಟ್‌ಗೆ 263 ರನ್ ಐಪಿಎಲ್‌ನ ಈವರೆಗಿನ ಗರಿಷ್ಠ ಮೊತ್ತ.
ನೆನ್ನೆ ನಡೆದ ಪಂದ್ಯದಲ್ಲಿ ಲಕ್ನೋ ತಂಡ ಬ್ಯಾಟಿಂಗ್ ಆಡುತ್ತಿದ್ದನ್ನು ನೋಡಿ RCB ಅಭಿಮಾನಿಗಳಿಗೆ ಎಲ್ಲಿ ಈ ರೆಕಾರ್ಡ್ ಮುರಿದುಹೋಗುತ್ತದೆ ಎಂಬ ಭಯ ಕಾಡುತ್ತಿತ್ತು. ಆದರೆ ಅಂತಿಮವಾಗಿ 5 ವಿಕೆಟ್‌ಗೆ 257 ರನ್ ಗಳಿಸಲು ಮಾತ್ರ ಸಾಧ್ಯವಾಗಿತ್ತು. ಹೀಗಾಗಿ RCB ಗರಿಷ್ಟ ಮೊತ್ತ ಸೇಫ್ ಆಗಿ ಉಳಿಯಿತು. ಇದಾದ ಬಳಿಕ ಟ್ವಿಟ್ಟರ್ ನಲ್ಲಿ ಹಲವಾರು ವಿಷಯಗಳು ಟ್ರೆಂಡಿಂಗ್ ಆಗಲು ಶುರುವಾಯಿತು.
263 is unbreakable, Only RCB can break this! 🥵🔥
Gayle Storm. #PlayBold #ನಮ್ಮRCB #IPL2023 #PBKSvLSG pic.twitter.com/UTqkGpfRtw— Royals Cricket 🇮🇳 (@ImHimanshu_Raj) April 28, 2023
ಇದಲ್ಲದೆ ಬೌಂಡರಿ ಕೌಂಟ್ ಲೆಕ್ಕಾಚಾರದಲ್ಲೂ ಆರ್‌ಸಿಬಿಯ ದಾಖಲೆ ಮುರಿಯಲು ಲಕ್ನೋಗೆ ಸಾಧ್ಯವಾಗಿಲ್ಲ. ಪುಣೆ ವಿರುದ್ಧ ಆರ್‌ಸಿಬಿ, 21 ಬೌಂಡರಿ, 21 ಸಿಕ್ಸರ್‌ನೊಂದಿಗೆ 42 ಬೌಂಡರಿ ಸಾಧನೆ ಮಾಡಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ 27 ಬೌಂಡರಿ, 14 ಸಿಕ್ಸರ್‌ಗಳೊಂದಿಗೆ 41 ಬೌಂಡರಿಗಳೊಂದಿಗೆ 2ನೇ ಸ್ಥಾನದಲ್ಲಿದೆ. ಹೀಗಾಗಿ ಟ್ವಿಟ್ಟರ್ ನಲ್ಲಿ RCB ಅಭಿಮಾನಿಗಳು ‘ಓನ್ಲಿ ಆರ್‌ಸಿಬಿ’ ಎನ್ನುವ ಹ್ಯಾಶ್ ಟ್ಯಾಗ್ ಆರಂಭಿಸಿದ್ದಾರೆ.
‘263 ರನ್ ಬರಿ ದಾಖಲೆಯಲ್ಲ. ಇದನ್ನು ಆರ್‌ಸಿಬಿಯಿಂದ ಮಾತ್ರವೇ ಸಾಧ್ಯ ಹಾಗೂ ಆರ್‌ಸಿಬಿ ಮಾತ್ರವೇ ಬ್ರೇಕ್ ಮಾಡಲು ಸಾಧ್ಯ’ ಎಂದು ಒಬ್ಬರು ಬರೆದಿದ್ದಾರೆ. ‘ದೇವರೆ ತುಂಬಾ ಥ್ಯಾಂಕ್ಸ್. ಆರ್‌ಸಿಬಿಯ 263 ರನ್ ಸೇಫ್. ಈ ದಾಖಲೆಯನ್ನು ಆರ್‌ಸಿಬಿ ಮಾತ್ರವೇ ಬ್ರೇಕ್ ಮಾಡಲು ಸಾಧ್ಯ’ ಎಂದು ಮತ್ತೊಬ್ಬ ವ್ಯಕ್ತಿ ಬರೆದಿದ್ದಾನೆ. ಇದೀಗ ಈ ಟ್ವೀಟ್ ಎಲ್ಲ ಕಡೆ ಸಕತ್ ವೈರಲ್ ಆಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
