ನೆನ್ನೆ ನಡೆದ RCB ಮತ್ತು LSK ತಂಡದ ಬಹಳ ರೋಚಕತೆಯಿಂದ ಕೂಡಿತ್ತು. ಹಳೆ ಪಂದ್ಯದ ಸೋಲಿಗೆ RCB ತಂಡ LSG ವಿರುದ್ಧ ಸೇಡನ್ನು ತೀರಿಸಿಕೊಂಡಿದೆ. ಇದಲ್ಲದೆ ಪಂದ್ಯದ ಕೊನೆಯಲ್ಲಿ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಮಾತಿನ ಚಕಾಮಕಿ ನಡೆದಿದೆ. ಇದಕ್ಕೂ ಮುಂಚೆ LSG ತಂಡದ ಆಟಗಾರ ನವೀನ್ ಉಲ್ ಹಖ್ ವಿರಾಟ್ ಅವರನ್ನು ಕೆರಳಿಸಿದರು. ಇದಕ್ಕೆ ವಿರಾಟ್ ತಮ್ಮದೇ ರೀತಿಯಲ್ಲಿ ಉತ್ತರಿಸಿದರು.
#LSGvRCB
Kohli says" that you don't even match my shoes Naveen
The King
King Kohli Revenge #LSGvsRCB #viratkholi #ViratKohli #AnushkaSharma #gautamgambhir #IPL2023 #naveenulhaq KL Rahul Stoinis pic.twitter.com/UnQgkvKpyX— Kamal Malik (@KamalSi0071) May 1, 2023
ಎಲ್ಎಸ್ಜಿ ಬ್ಯಾಟಿಂಗ್ ಇನ್ನಿಂಗ್ಸ್ನ 17ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಖ್ ನಡುವೆ ಜಗಳವಾಗಿದೆ. ಯಾವ ಕಾರಣಕ್ಕಾಗಿ ಜಗಳ ಶುರುವಾಯಿತು ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ, ಇಬ್ಬರೂ ಮುಖಾಮುಖಿಯಾಗಿ ನಿಂತು ಮಾತಿನ ಚಕಮಕಿ ನಡೆಸಿದ್ದಾರೆ. ಇವರಿಬ್ಬರ ಜಗಳ ತಾರಕಕ್ಕೇರುತ್ತೆ ಎಂಬೊತ್ತಿಗೆ ಅಮಿತ್ ಮಿಶ್ರಾ ಬಂದರು. ಅತ್ತ ಅಂಪೈರ್ ಕೂಡ ಓಡಿ ಬಂದು ಕೊಹ್ಲಿಯನ್ನು ತಡೆದರು. ಇದಾದ ಬೆನ್ನಲ್ಲೇ ಕೊಹ್ಲಿ ಅವರು ತಮ್ಮ ಶೂ ಧೂಳನ್ನು ನವೀನ್ ಕಡೆಗೆ ತೋರಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
ಈ ಮೂಲಕ ವಿರಾಟ್ ನವೀನ್ ಉಲ್ ಹಖ್ ಅವರಿಗೆ ನೀನು ನನ್ನ ಪಾದದ ದೂಳಿನ ಸಮ ಎನ್ನುವ ರೀತಿ ಅವರಿಗೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿರಾಟ್ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಪ್ರತಿಕ್ರಯಿಸುತ್ತಿದ್ದಾರೆ. ಇದಲ್ಲದೆ ವಿರಾಟ್ ಅವರನ್ನು ಕೆಣಕಿದ ಮೇಲೆ ನಿಮ್ಮ ಕಥೆ ಅಷ್ಟೇ ಎಂದು ಕೂಡ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
