fbpx
ಸಮಾಚಾರ

ಹೆಣ್ಣು ಸಿಗದ ಯುವಕರಿಗೆ ಮದುವೆ ಮಾಡಿಸುವ ಗ್ಯಾರಂಟಿ ಘೋಷಿಸಿದ ಅಭ್ಯರ್ಥಿ: ಪ್ರಣಾಳಿಕೆ ಫುಲ್ ವೈರಲ್

ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಸಮೀಪದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತದಾರರ ಮನವೋಲಿಕೆಗೆ ಜನರ ಬಳಿ ಸಾಕಷ್ಟು ಭರವಸೆಗಳನ್ನ ನೀಡುತ್ತಿದ್ದಾರೆ.ಈ ಮದ್ಯೆ ಬೆಳಗಾವಿ ಜಿಲ್ಲೆಯ ಪಕ್ಷೇತರ ಅಭ್ಯರ್ಥಿಗಳ ಪ್ರಣಾಳಿಕೆ ಸಾಕಷ್ಟು ಸದ್ದು ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಪ್ರಣಾಳಿಕೆ ಹಲವರ ಹುಬ್ಬೇರಿಸಿದೆ.

ಬೆಳಗಾವಿ ಜಿಲ್ಲೆ ಅರಭಾವಿ ವಿಧಾನಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುರುಪುತ್ರ ಕೆಂಪಣ್ಣ ಕುಳ್ಳೂರ ಹಾಗೂ ಗೋಕಾಕ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪುಂಡಲೀಕ ಕುಳ್ಳೂರ ವಧು-ವರರ ಮದುವೆ ಭಾಗ್ಯವನ್ನು ಘೋಷಣೆ ಮಾಡಿದ್ದಾರೆ.. ಮದುವೆಯಾಗದ ಯುವಕರಿಗೆ ಮದುವೆ ಮಾಡಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ. ಪಕ್ಷೇತರ ಅಭ್ಯರ್ಥಿಗಳ ಈ ಪ್ರಣಾಳಿಕೆ ಸಾಕಷ್ಟು ಸದ್ದು ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಗುರುಪುತ್ರ ಕುಳ್ಳೂರ ಹಾಗೂ ಪುಂಡಲೀಕ ಕುಳ್ಳೂರ ಇಬ್ಬರೂ ಸಹೋದರರಾಗಿದ್ದು, ಎರಡೂ ಮತಕ್ಷೇತ್ರದ ಮದುವೆಯಾಗದ ಯುವಕರಿಗೆ ಮದುವೆ ಮಾಡಿಸುವ ಭರವಸೆಯನ್ನು ಪ್ರಣಾಳಿಕೆಯ ಮೂಲಕ ನೀಡಿದ್ದಾರೆ. ಇದೀಗ ಇವರಿಬ್ಬರ ಪ್ರಣಾಳಿಕೆಯ ಸಾರ್ವಜನಿಕರ ಹುಬ್ಬೇರಿಸಿದೆ. ಅಲ್ಲದೇ ಟ್ರಾಲ್ ಪೇಜ್​ಗಳು ಸಹ ಇದನ್ನು ಇಟ್ಟುಕೊಂಡು ನಾನಾ ರೀತಿಯಲ್ಲಿ ಟ್ರಾಲ್ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top