ಬಹು ಕುತೂಹಲ ಕೆರಳಿಸಿರುವಂತಹ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಈ ಸಲ ಚುನಾವಣೆಯಲ್ಲಿ ಶತಾಯಗತಾಯ ಗೆದ್ದು ಅಧಿಕಾರದ ಗುದ್ದಿಗೆ ಹಿಡಿಯಲೇಬೇಕು ಎಂದು ಪಣತೊಟ್ಟಿರುವ ರಾಜಕೀಯ ಪಕ್ಷಗಳು ನಾನಾ ಕಸರತ್ತು ನಡೆಸುತ್ತಿವೆ.. ಸಿನಿಮಾರಂಗದ ಖ್ಯಾತನಾಮರೂ ಕೂಡ ಕೆಲ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಅಂತೆಯೇ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರ ಪ್ರಚಾರ ನಡೆಸಿದ್ದಾರೆ.
ಸಿದ್ದು ಪರ ಪ್ರಚಾರ ನಡೆಸುತ್ತಿರುವ ಶಿವರಾಜ್ ಕುಮಾರ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಗರಂ ಆಗಿದ್ದಾರೆ. ಬಿಜೆಪಿ ಅಭ್ಯರ್ಥಿ ಸೋಮಣ್ಣನನ್ನು ಹೊಗಳುವ ಮೂಲಕ ಶಿವಣ್ಣನಿಗೆ ಟಾಂಗ್ ನೀಡಿದ್ದಾರೆ. ದಿವಂಗತ ಪುನೀತ್ ಹೆಸರಿನಲ್ಲಿ ಸಚಿವ ಸೋಮಣ್ಣ ಅವರು ಆಸ್ಪತ್ರೆ ಕಟ್ಟಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಪ್ರತಾಪ್ ಸಿಂಹ ಅವರು ಶಿವರಾಜ್ ಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
“ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನ ಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣನ ಪರವಾಗಿ ಪ್ರಚಾರಕ್ಕೆ ಇಳಿದ ಶಿವಣ್ಣ! ಅವರವರ ಭಾವ ಭಕುತಿಗೆ” ಎಂದು ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿ ಸೋಮಣ್ಣ ಅವರನ್ನು ರಾಘಣ್ಣ ಹೊಗಳಿದ ವಿಡಿಯೋ ಹಾಗೂ ಶಿವಣ್ಣ ಸಿದ್ದರಾಮಯ್ಯ ಪರ ಪ್ರಚಾರ ನಡೆಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
