ಬಹಳ ದಿನಗಳಿಂದ ಅಭಿಮಾನಿಗಳು ಕಾಯುತ್ತಿದ್ದ IPL ಶುರುವಾಗಿ ಎಲ್ಲ ಕಡೆ ಅಭಿಮಾನಿಗಳನ್ನು ರಂಜಿಸುತ್ತಿದೆ. IPL ಎಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಎಂಬುದು ಎಲ್ಲರಿಗು ಗೊತ್ತು. ಆದರೆ ಈ ಬಾರಿಯ IPL ಇಂಜುರಿ ಪ್ರೀಮಿಯರ್ ಲೀಗ್ ಎಂದು ಪ್ರಖ್ಯಾತವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಬಹಳಷ್ಟು ಆಟಗಾರರು ಗಾಯದ ಸಮಸ್ಯೆಯಿಂದ ತಂಡದಿಂದ ಹೊರನಡೆದಿದ್ದಾರೆ. ಇದೀಗ KKR ತಂಡಕ್ಕೆ ಹೊಸ ಆಟಗಾರನ ಪ್ರವೇಶವಾಗಿದೆ.
IPL ಅಂಕಪಟ್ಟಿಯಲ್ಲಿ KKR ಸದ್ಯ ಎಂಟನೇ ಸ್ಥಾನದಲ್ಲಿದೆ. ಹೀಗಾಗಿ ಈ ತಂಡ ಪ್ಲೇಆಫ್ ಹಂತ ತಲುಪಲು ಬಹಳಷ್ಟು ಕಷ್ಟ ಪಡಬೇಕು. ಈ ನಡುವೆ KKR ತಂಡದ ಆಟಗಾರ ಬಾಂಗ್ಲಾ ಆಟಗಾರ ಲಿಟ್ಟನ್ ದಾಸ್ ತಂಡವನ್ನು ತೊರೆದಿದ್ದಾರೆ. ಹೀಗಾಗಿ ಇವರ ಬದಲು ವೆಸ್ಟ್ ಇಂಡೀಸ್ ತಂಡದ ಆಟಗಾರ ಜಾನ್ಸನ್ ಚಾರ್ಲ್ಸ್ KKR ತಂಡವನ್ನು ಸೇರಿಕೊಂಡಿದ್ದಾರೆ.
ಲಿಟ್ಟನ್ ತನ್ನ ಕುಟುಂಬದಲ್ಲಿ ವೈದ್ಯಕೀಯ ತುರ್ತುಸ್ಥಿತಿಗೆ ಹಾಜರಾಗಲು ಈ ತಿಂಗಳ ಆರಂಭದಲ್ಲಿ ನೈಟ್ ರೈಡರ್ಸ್ ಶಿಬಿರವನ್ನು ತೊರೆದಿದ್ದರು. ಹರಾಜಿನಲ್ಲಿ 50 ಲಕ್ಷಕ್ಕೆ ಖರೀದಿಸಿದ ಅವರು ಐಪಿಎಲ್ 2023 ರಲ್ಲಿ ಕೇವಲ ಒಂದು ಪಂದ್ಯವನ್ನು ಆಡಿದರು. ಇದೀಗ ಚಾರ್ಲ್ಸ್ ಅವರು ಕೂಡಾ 50 ಲಕ್ಷ ರೂ ಗೆ ಕೆಕೆಆರ್ ಪಾಲಾಗಿದ್ದಾರೆ. ಹೀಗಾಗಿ ಇವರು KKR ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವ ಎಲ್ಲಾ ಸಾಧ್ಯತೆಗಳಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
