ಮೂಲತಃ ಮುಸ್ಲಿಂ ಧರ್ಮಕ್ಕೆ ಸೇರಿದವರಾದ ನಟಿ ಖುಶ್ಬೂ ಅವರು ಮಾಡುವೆ ಮಾಡಿಕೊಳ್ಳಲು ಮತಾಂತರ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅನೇಕ ಸುದ್ದಿಗಳು ವೈರಲ್ ಆಗಿತ್ತು. ಇದೀಗ ಈ ವಿಚಾರಕ್ಕೆ ಸಂಭಂದಿಸಿದಂತೆ ಖುಶಾಬೂ ಅವರೇ ಪ್ರತಿಕ್ರಿಯಿಸಿದ್ದು ಮದುವೆ ಮಾಡಿಕೊಳ್ಳಲು ತಾನು ಧರ್ಮವನ್ನು ಬದಲಾಯಿಸಿಕೊಳ್ಳಲಿಲ್ಲ ಎಂದು ನಟಿ, ರಾಜಕೀಯ ನೇತಾರ ಖುಷ್ಬೂ ಸುಂದರ್ ಇತ್ತೀಚೆಗೆ ಸ್ಪಷ್ಟಪಡಿಸಿದ್ದಾರೆ.
“ನನ್ನ ಮದುವೆಯನ್ನು ಪ್ರಶ್ನಿಸುವವರು ಮತ್ತು ಮದುವೆಗಾಗಿ ಮತಾಂತರಗೊಂಡಿದ್ದಾರೆ ಎಂದು ಆರೋಪಿಸುವವರು ಬುದ್ಧಿವಂತರು ಮತ್ತು ಅರ್ಥಮಾಡಿಕೊಳ್ಳಬೇಕು. ನಮ್ಮ ದೇಶದಲ್ಲಿ ವಿಶೇಷ ವಿವಾಹ ಕಾಯ್ದೆ ಇದೆ ಎಂಬುದೇ ಅವರಿಗೆ ಗೊತ್ತಿಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ. ನಾನು ಮತಾಂತರಗೊಂಡಿಲ್ಲ. ಮತಾಂತರಗೊಳ್ಳುವಂತೆ ಯಾರೂ ನನ್ನ ಮೇಲೆ ಒತ್ತಡ ಹೇರಿಲ್ಲ. ನನ್ನ 23 ವರ್ಷಗಳ ದಾಂಪತ್ಯ ಬಹಳ ಪ್ರಬಲವಾಗಿದೆ. ಪರಸ್ಪರ ನಂಬಿಕೆ, ಗೌರವ, ಸಮಾನತೆ ಮತ್ತು ಪ್ರೀತಿ ಅದರ ಅಡಿಪಾಯ. ಹೀಗಾಗಿ ಈ ವಿಚಾರದಲ್ಲಿ ಅನುಮಾನ ಇರುವವರು ಗಮನಹರಿಸಬೇಕು” ಎಂದು ಖುಷ್ಬೂ ಸಖತ್ ಕೌಂಟರ್ ಕೊಟ್ಟಿದ್ದಾರೆ.
Those who question my marriage, or say I have converted to marry my husband, I say get some sense n education pls. Sad, they have never heard of ‘special marriage act’ which exists in our country. I have neither converted nor have been asked to do so. My marriage of 23 yrs is…
— KhushbuSundar (@khushsundar) May 6, 2023
ಅಂದಹಾಗೆ ತೆಲುಗು, ತಮಿಳು ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದ ಕುಷ್ಬು ಸುಂದರ್ ಈಗ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ಬಿಜೆಪಿಯ ಪ್ರಮುಖ ಸದಸ್ಯೆಯಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿಯೂ ಆಯ್ಕೆಯಾಗಿದ್ದರು. ಇನ್ನು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಮುಂಬೈನ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಖುಷ್ಬು 1991 ರಲ್ಲಿ ‘ಚಿನ್ನ ತಂಬಿ’ ಚಿತ್ರದ ಮೂಲಕ ಕಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆ ನಂತರ ಸ್ಟಾರ್ ಹೀರೋಯಿನ್ ಆದರು ಆದರೆ ಜೀವನದಲ್ಲಿ ಏರಿಳಿತಗಳನ್ನು ಎದುರಿಸಿದರು. ಅಂತಿಮವಾಗಿ ತಮಿಳು ನಿರ್ದೇಶಕ ಸಿ ಸುಂದರ್ (ಸುಂದರ್ ಸಿ) ಅವರನ್ನು ವಿವಾಹವಾದರು. ಆದರೆ ಇತ್ತೀಚೆಗಷ್ಟೇ ಮುಸ್ಲಿಂ ಧರ್ಮದವರಾದ ಖುಷ್ಬು, ಮದುವೆಗಾಗಿ ಧರ್ಮ ಮತಾಂತರಗೊಂಡಿದ್ದಾರೆ ಎಂದು ಅನೇಕರ ಟೀಕೆಗೆ ಪ್ರತಿಕ್ರಿಯಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
