ಮೇಷ (Mesha)
ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ ಈ ವಾರ ನಿಮಗೆ ಸಿಗಲಿದೆ, ಮನೆಯಲ್ಲಿ ಸಂತಸದ ವಾತಾವರಣವನ್ನು ಕಾಣಲಿದ್ದೀರಿ, ಮಾನಸಿಕ ನೆಮ್ಮದಿ,ಮನಃಶಾಂತಿ, ನಿಮ್ಮ ಪ್ರಾಮಾಣಿಕತೆ ನಿಮಗೆ ಯಶಸ್ಸಿನ ದಾರಿಯಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತೀರಿ, ವಾರಾಂತ್ಯದಲ್ಲಿ ಹೆಚ್ಚಾಗಿ ಕೋಪ ಬರುವ ಸಂಭವ ಇದೆ ಆದ್ದರಿಂದ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ .
ಪರಿಹಾರ.
ಪ್ರತಿದಿನ “ಓಂ ಲಕ್ಷ್ಮೀ ನಾರಾಯಣಾಯ ನಮಃ” ಮಂತ್ರವನ್ನು ಐವತ್ತ್ನಾಲ್ಕು ಬಾರಿ ಜಪಿಸಿ, ಬಡ ಮಕ್ಕಳಿಗೆ ಕೈಲಾದ ಸೇವೆಯನ್ನು ಮಾಡಿ.
ವೃಷಭ (Vrushabha)
ಈ ವಾರ ವೃಷಭ ರಾಶಿಯ ಮಹಿಳೆಯರಿಗೆ ವಿಶೇಷವಾದ ಲಾಭವಾಗಲಿದೆ, ಅಪರಿಚಿತರಿಂದ ಕಲಹ ಉಂಟಾಗಲಿದೆ, ಆದ್ದರಿಂದ ಎಚ್ಚರವಾಗಿರಿ, ಪ್ರಿಯ ಜನರ ಭೇಟಿಯನ್ನು ಮಾಡಲಿದ್ದೀರಿ, ಹಿರಿಯರಲ್ಲಿ ಗೌರವ ಹೆಚ್ಚಾಗಲಿದೆ, ತೀರ್ಥಯಾತ್ರೆ ದರ್ಶನವನ್ನು ಮಾಡಲಿದ್ದೀರಿ, ಉದ್ಯೋಗದಲ್ಲಿ ನಿಮಗೆ ಬಡ್ತಿಯಾಗಲಿದೆ.
ಪರಿಹಾರ.
ಗೋ ಪೂಜೆಯನ್ನು ಮಾಡಿ ಪ್ರತಿದಿನ ಗೋವಿಗೆ ಬೆಲ್ಲ ಮತ್ತು ಬಾಳೆಹಣ್ಣನ್ನು ಮಿಶ್ರಣ ಮಾಡಿ ತಿನ್ನಿಸಿ ನಮಸ್ಕಾರ ಮಾಡಿ.
ಮಿಥುನ (Mithuna)
ಈ ವಾರ ನಿಮಗೆ ಆಸ್ತಿ ಖರೀದಿಯ ಯೋಗ ಕೂಡಿ ಬರಲಿದೆ , ನೆರೆ ಹೊರೆಯವರ ಕುತಂತ್ರದಿಂದ ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತೀರಿ, ನಿಮ್ಮ ಅಕ್ಕ ಪಕ್ಕದವರೇ ಕುತಂತ್ರಗಳನ್ನು ಮಾಡುವರು , ವಿದೇಶ ಪ್ರಯಾಣವನ್ನು ಮಾಡಲಿಕ್ಕೆ ಬಹಳಷ್ಟು ತಯಾರಿಯನ್ನು ಮಾಡಿಕೊಳ್ಳುತ್ತೀರಿ, ಹಿತ ಶತ್ರುಗಳಿಂದ ತೊಂದರೆಗೆ ಒಳಗಾಗುವಿರಿ, ಮೋಸದ ತಂತ್ರಕ್ಕೆ ಬಲಿಯಾಗುವಿರಿ, ಬೇರೆಯವರ ಷಡ್ಯಂತ್ರಕ್ಕೆ ನೀವು ಒಳಗಾಗುತ್ತಿರಾ, ಮಕ್ಕಳ ಭವಿಷ್ಯದ ಬಗ್ಗೆ ಬಹಳಷ್ಟು ಚಿಂತೆಯನ್ನು ಈ ವಾರ ಮಾಡುತ್ತೀರಾ.
ಪರಿಹಾರ .
“ಓಂ ಗಂ ಗಣಪತಯೇ ನಮಃ” ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ, ಬುಧವಾರ ದೂರ್ವಾರ್ಚನೆ ಅಂದರೆ ಗರಿಕೆಯಿಂದ ಅರ್ಚನೆಯನ್ನು ಮಾಡಿಸಿ, ನಮಸ್ಕಾರ ಮಾಡಿ.
ಕರ್ಕ (Karka)
ಕೃಷಿಯಲ್ಲಿ ಹೆಚ್ಚಿನ ಲಾಭವಾಗಲಿದೆ ಮತ್ತು ಹೆಚ್ಚಿನ ಜವಾಬ್ದಾರಿ ನಿಮ್ಮ ಮೇಲೆ ಈ ವಾರ ಬರಲಿದೆ. ವಾಹನ ಚಲಾವಣೆ ಮಾಡುವವರು ತುಂಬಾ ಎಚ್ಚರವಾಗಿ ವಾಹನ ಚಲಾವಣೆಯನ್ನು ಮಾಡಿ , ಇಲ್ಲದಿದ್ದರೆ ಅಪಘಾತವಾಗುವ ಸಾಧ್ಯತೆಗಳು ಹೆಚ್ಚಾಗಲಿವೆ , ವಿದ್ಯಾಭ್ಯಾಸ ಮಾಡುವವರಿಗೆ ಪ್ರಗತಿ, ಶತ್ರು ಕಾಟ, ಕೃಷಿಯಲ್ಲಿ ಬಹಳಷ್ಟು ಲಾಭವನ್ನು ಗಳಿಸಲಿದ್ದೀರಿ, ಸ್ತ್ರೀಯರಿಗೆ ಧನಲಾಭವಾಗಲಿದೆ, ಅಮೂಲ್ಯವಾದ ವಸ್ತುಗಳ ಖರೀದಿಯನ್ನು ಮಾಡುವಿರಿ, ಪುಣ್ಯಕ್ಷೇತ್ರಗಳ ದರ್ಶನ ಮಾಡುವಿರಿ .
ಪರಿಹಾರ.
ಪ್ರತಿನಿತ್ಯ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡಿ ಬುಧವಾರ ಹೆಸರು ಬೇಳೆ ಮತ್ತು ಕೋಸಂಬರಿಯನ್ನು ವಿಷ್ಣು ದೇವಾಲಯದಲ್ಲಿ ಶ್ರೀಮನ್ನಾರಾಯಣನಿಗೆ ನೈವೇದ್ಯವನ್ನು ಮಾಡಿ, ಪ್ರಸಾದವನ್ನು ವಿನಿಯೋಗಿಸಿ.
ಸಿಂಹ (Simha)
ಈ ವಾರ ಯತ್ನ ಕಾರ್ಯಗಳಲ್ಲಿ ಬಹಳಷ್ಟು ವಿಘ್ನಗಳು ಅಡೆತಡೆಗಳು ಬರಲಿವೆ, ಮಾತಿನ ಚಕಮಕಿಯಿಂದ ಜಗಳ ಉಂಟಾಗುವುದು, ಅಧಿಕವಾದ ಧನವ್ಯಯ, ಅಧಿಕವಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ, ಆದ್ದರಿಂದ ಎಚ್ಚರ ವಹಿಸಿ, ಸ್ಥಳ ಬದಲಾವಣೆಯನ್ನು ಮಾಡಲಿದ್ದೀರಿ , ಆಕಸ್ಮಿಕ ಧನಲಾಭವಾಗಲಿದೆ, ವಾರದ ಮಧ್ಯಭಾಗದಲ್ಲಿ ವಿವಾಹ ಮತ್ತು ಮಂಗಳ ಕಾರ್ಯಗಳಲ್ಲಿ ಭಾಗಿ ಯಾಗುವ ಯೋಗ ಕೂಡಿಬರಲಿದೆ.
ಪರಿಹಾರ.
ಪ್ರತಿದಿನ ಹನುಮಾನ್ ಚಾಲೀಸವನ್ನು ಪಾರಾಯಣ ಮಾಡಿ, ಸೂರ್ಯ ನಮಸ್ಕಾರವನ್ನು ಮಾಡಿ .
ಕನ್ಯಾರಾಶಿ (Kanya)
ದ್ರವ್ಯಗಳಿಂದ ಬಹಳಷ್ಟು ಲಾಭವಾಗಲಿದೆ, ನೀವು ಅಂದುಕೊಂಡ ಇರುವುದಿಲ್ಲ ಆ ರೀತಿಯಲ್ಲಿ ಬಹಳಷ್ಟು ಲಾಭವಾಗಲಿದೆ. ಅಧಿಕ ತಿರುಗಾಟವನ್ನು ಮಾಡುತ್ತೀರಾ, ಆರೋಗ್ಯದಲ್ಲಿ ಚೇತರಿಕೆಯು ಕಂಡುಬರುತ್ತದೆ. ಸುಖ ಭೋಜನ ಪ್ರಾಪ್ತಿಯಾಗುತ್ತದೆ. ಮಾತಿನಲ್ಲಿ ಹಿಡಿತವಿರಲಿ , ಉದ್ಯೋಗದಲ್ಲಿ ಇರುವವರು ಸ್ವಲ್ಪ ತೊಂದರೆಗಳು ಅನುಭವಿಸಬೇಕಾಗುತ್ತದೆ, ಸ್ವಗೃಹಕ್ಕೆ ಬಹಳಷ್ಟು ಓಡಾಟ ಮಾಡುವ ಸಾಧ್ಯತೆಗಳಿವೆ , ಅನ್ಯ ಜನರಲ್ಲಿ ವೈಮನಸ್ಯ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತವೆ.
ಪರಿಹಾರ .
ಪ್ರತಿದಿನ ಅಶ್ವತ್ಥ ವೃಕ್ಷ ಪ್ರದಕ್ಷಿಣೆಯನ್ನು ಹದಿನೆಂಟು ಬಾರಿ ಮಾಡಿ, ಬಿಸಿಲಿನಿಂದ ಬಳಲಿ ಬಂದಿರುವವರಿಗೆ ಕುಡಿಯುವ ನೀರನ್ನು ಕೊಡಿ.
ತುಲಾ (Tula)
ಈ ವಾರ ಮನಸ್ಸಿನ ನೆಮ್ಮದಿ ಹಾಳಾಗಲಿದೆ, ಅಧಿಕವಾದ ಕೋಪವನ್ನು ನೀವು ಮಾಡಿಕೊಳ್ಳುತ್ತೀರಾ, ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ವಾರಾಂತ್ಯದಲ್ಲಿ ಸಿಗಲಿದೆ, ವಾಹನ ಅಪಘಾತ ವಾಗುವ ಸಾಧ್ಯತೆಗಳು ಹೆಚ್ಚಾಗಲಿವೆ, ಆದ್ದರಿಂದ ವಾಹನ ಚಲಾವಣೆಯನ್ನು ಮಾಡುವವರು ತುಂಬಾ ಜಾಗ್ರತೆಯಿಂದ ಎಚ್ಚರವಾಗಿದ್ದು ವಾಹನವನ್ನು ಚಲಾಯಿಸಿ, ತೀರ್ಥಕ್ಷೇತ್ರ ದರ್ಶನವನ್ನು ಮಾಡಲಿದ್ದೀರಿ, ಮಿತ್ರರಲ್ಲಿ ದ್ವೇಷ, ವೈಮನಸ್ಯ ಉಂಟಾಗಲಿದೆ, ದ್ವೇಷದಿಂದ ಯಾವುದೇ ಪ್ರಯೋಜನವಾಗುವುದಿಲ್ಲ.
ಪರಿಹಾರ.
ಪ್ರತಿನಿತ್ಯ “ಓಂ ಸಾಯಿನಾಥಾಯ ನಮಃ” ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ ಗುರುವಾರ ಸಾಧುಗಳಿಗೆ ಅನ್ನದಾನವನ್ನು ಮಾಡಿ.
ವೃಶ್ಚಿಕ (Vrushchika)
ಈ ವಾರ ಬಾಕಿ ಹಣ ನಿಮ್ಮ ಕೈ ಸೇರಲಿದೆ, ಸೇವಕರಿಂದ ತೊಂದರೆಯಾಗಲಿದೆ, ಅಧಿಕ ತಿರುಗಾಟವನ್ನು ಮಾಡಲಿದ್ದೀರಿ, ಕೋರ್ಟ್ ವ್ಯವಹಾರಗಳಲ್ಲಿ ಜಯ ನಿಮಗೆ ದೊರೆಯಲಿದೆ, ವಿವಾಹ ಶುಭ ಕಾರ್ಯಗಳಿಗೆ ಬಹಳಷ್ಟು ಹಣವನ್ನು ಖರ್ಚು ಮಾಡಲಿದ್ದೀರಿ, ನೆಮ್ಮದಿ ಇಲ್ಲದ ಜೀವನ ಈ ವಾರ ನಿಮ್ಮದಾಗಲಿದೆ.
ಪರಿಹಾರ.
“ಓಂ ನಮೋ ಪವಮಾನಾಯ ನಮಃ” ಈ ಯಂತ್ರವನ್ನು ನಲವತ್ತೆಂಟು ಬಾರಿ ಜಪಿಸಿ, ಮಂಗಳವಾರ ನಾಟಿ ತುಳಸಿಯಿಂದ ಅರ್ಚನೆಯನ್ನು ಆಂಜನೇಯ ಸ್ವಾಮಿಗೆ ಮಾಡಿಸಿ, ದೀರ್ಘದಂಡ ನಮಸ್ಕಾರ ಮಾಡಿ .
ಧನು ರಾಶಿ (Dhanu)
ಈ ವಾರ ಶತ್ರುಗಳನ್ನು ಸೆದೆ ಬಡಿಯುವಿರಿ, ಸಾಲದ ಬಾಧೆಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ, ಬಂಧುಗಳಲ್ಲಿ ಪ್ರೀತಿ ವಾತ್ಸಲ್ಯ ಹೆಚ್ಚಾಗಿ ತೋರಿಸುತ್ತೀರಾ, ನೆಮ್ಮದಿ ಇಲ್ಲದ ಜೀವನ ನಿಮ್ಮದಾಗಲಿದೆ, ಮಾತಿನ ಚಕಮಕಿಗೆ ನೀವು ಇಳಿದು ಬಿಡುತ್ತೀರ,ಆದ್ದರಿಂದ ಜಗಳ ಉಂಟಾಗಲಿದೆ , ದುಷ್ಟರಿಂದ ಆದಷ್ಟು ದೂರವಿರುವುದು ಒಳ್ಳೆಯದು, ವಾರಾಂತ್ಯದಲ್ಲಿ ಮನಃಶಾಂತಿ ನಿಮಗೆ ಲಭ್ಯ ವಾಗಲಿದೆ .
ಪರಿಹಾರ.
ಪ್ರತಿನಿತ್ಯ “ಓಂ ಸೂರ್ಯ ನಾರಾಯಣಾಯ ನಮಃ” ಈ ಮಂತ್ರವನ್ನು 54 ಬಾರಿ ಜಪಿಸಿ, ಪ್ರತಿನಿತ್ಯ ಕುಲದೇವರಿಗೆ ತುಪ್ಪದ ದೀಪವನ್ನು ಹಚ್ಚಿ ನಮಸ್ಕಾರ ಮಾಡಿ .
ಮಕರ (Makara)
ಈ ವಾರ ಮಾನಸಿಕ ಒತ್ತಡ ಹೆಚ್ಚಾಗಲಿದೆ, ಪ್ರಯತ್ನ ಮಾಡಿದ ಕಾರ್ಯಗಳಲ್ಲಿ ವಿಳಂಬವಾಗುವುದು, ಸ್ತ್ರೀಯರಿಂದ ಲಾಭವಾಗಲಿದೆ, ವಿದ್ಯಾಭ್ಯಾಸವನ್ನು ಮಾಡುತ್ತಿರುವವರಿಗೆ ವಿದ್ಯ ಅಭಿವೃದ್ಧಿಯಾಗಲಿದೆ, ವಿವಾಹಯೋಗ, ಮಾತಿನಿಂದ ಶುಭ ಆರೋಗ್ಯ, ಸುಖ ಭೋಜನ ಪ್ರಾಪ್ತಿ ,ವಾರಾಂತ್ಯದಲ್ಲಿ ಧನಾಗಮನವಾಗಲಿದೆ, ಧನಲಾಭವಾಗಲಿದೆ .
ಪರಿಹಾರ.
“ಓಂ ಚಂದ್ರಮೌಳೇಶ್ವರಾಯ ನಮಃ” ಈ ಮಂತ್ರವನ್ನು ಪ್ರತಿನಿತ್ಯ 21 ಬಾರಿ ಜಪವನ್ನು ಮಾಡಿ , ಸೋಮವಾರ ಶಿವಾಲಯಕ್ಕೆ ಭೇಟಿ ನೀಡಿ ,ಬಿಲ್ವಾರ್ಚನೆಯನ್ನು ಮಾಡಿ ನಮಸ್ಕಾರ ಮಾಡಿ .
ಕುಂಭರಾಶಿ (Kumbha)
ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ, ಬಂಧುಗಳ ಆಗಮನವಾಗಲಿದೆ, ವಾಹನ ರಿಪೇರಿಗೆ ಬಹಳಷ್ಟು ಹಣವನ್ನು ಖರ್ಚು ಮಾಡಲಿದ್ದೀರಿ, ಶೀಘ್ರದಲ್ಲೇ ಸಂತಸದ ಸುದ್ದಿಯನ್ನು ಕೇಳುವಿರಿ, ಶುಭ ಸಮಾಚಾರವನ್ನು ಕೇಳುವಿರಿ, ಮಹಿಳೆಯರಿಗೆ ವಸ್ತ್ರ ಆಭರಣಗಳು ಪ್ರಾಪ್ತಿಯಾಗುವ ಯೋಗವಿದೆ.
ಪರಿಹಾರ.
“ಓಂ ದತ್ತಾತ್ರೇಯಾಯ ನಮಃ” ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ ಗುರುವಾರ ಔದುಂಬರ ವೃಕ್ಷಕ್ಕೆ ಹದಿನೆಂಟು ಬಾರಿ ಪ್ರದಕ್ಷಿಣೆಯನ್ನು ಮಾಡಿ ನಮಸ್ಕಾರ ಮಾಡಿ.
ಮೀನರಾಶಿ (Meena)
ಈ ವಾರ ಅಧಿಕಾರಿಗಳಿಂದ ಬಹಳಷ್ಟು ಪ್ರಶಂಸೆಯನ್ನು ಗಳಿಸಲಿದ್ದೀರಿ, ಆರೋಗ್ಯದಲ್ಲಿ ಏರುಪೇರಾಗಲಿದೆ , ಆದ್ದರಿಂದ ಗಮನವನ್ನು ಹರಿಸಿ, ಯತ್ನ ಕಾರ್ಯಗಳಲ್ಲಿ ಬಹಳಷ್ಟು ಅನುಕೂಲವಾಗಲಿದೆ , ದೂರ ಪ್ರಯಾಣ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ , ಕಾರ್ಯ ಸಾಧನೆಗಾಗಿ ಬಹಳಷ್ಟು ಅಲೆದಾಟವನ್ನು ಮಾಡಲಿದ್ದೀರಿ, ಇಷ್ಟಾರ್ಥ ಸಿದ್ಧಿಯಾಗಲಿದೆ, ಮನೆಯಲ್ಲಿ ಶುಭ ಕಾರ್ಯಗಳಿಗೋಸ್ಕರ ಬಹಳಷ್ಟು ಓಡಾಟವನ್ನು ಮಾಡುವಿರಿ, ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಈ ವಾರ ನಿಮಗೆ ಲಭ್ಯವಾಗಲಿದೆ.
ಪರಿಹಾರ.
ಪ್ರತಿನಿತ್ಯ ಕನಕಧಾರಾ ಸ್ತೋತ್ರ ಪಾರಾಯಣ ಮಾಡಿ, ಶುಕ್ರವಾರ ಎಂಟು ಜನ ಸುಮಂಗಲಿಯರಿಗೆ ಅರಿಶಿನ, ಕುಂಕುಮ , ಬಳೆಯನ್ನು ಕೊಟ್ಟು ನಮಸ್ಕಾರವನ್ನು ಮಾಡಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
