fbpx
ಸಮಾಚಾರ

ಮೇ 09: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಮೇ 9, 2023 ಮಂಗಳವಾರ
ವರ್ಷ : 1945, ಶೋಭಾಕೃತ
ತಿಂಗಳು : ವೈಶಾಖ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಚತುರ್ಥೀ : May 08 06:19 pm – May 09 04:08 pm; ಪಂಚಮೀ : May 09 04:08 pm – May 10 01:49 pm
ನಕ್ಷತ್ರ : ಮೂಲ: May 08 07:10 pm – May 09 05:45 pm; ಪೂರ್ವಾಷಾಢ: May 09 05:45 pm – May 10 04:12 pm
ಯೋಗ : ಸಿಧ್ಧ: May 09 12:09 am – May 09 09:16 pm; ಸಾಧ್ಯ: May 09 09:16 pm – May 10 06:17 pm
ಕರಣ : ಬಾಲವ: May 09 05:15 am – May 09 04:08 pm; ಕುಲವ: May 09 04:08 pm – May 10 03:00 am; ತೈತುಲ: May 10 03:00 am – May 10 01:49 pm

Time to be Avoided
ರಾಹುಕಾಲ : 3:24 PM to 4:58 PM
ಯಮಗಂಡ : 9:07 AM to 10:42 AM
ದುರ್ಮುಹುರ್ತ : 08:30 AM to 09:20 AM, 11:07 PM to 11:52 PM
ವಿಷ : 02:44 AM to 04:14 AM
ಗುಳಿಕ : 12:16 PM to 1:50 PM

Good Time to be Used
ಅಮೃತಕಾಲ : 11:48 AM to 01:18 PM
ಅಭಿಜಿತ್ : 11:50 AM to 12:41 PM

Other Data
ಸೂರ್ಯೋದಯ : 5:59 AM
ಸುರ್ಯಾಸ್ತಮಯ : 6:32 PM

 

 

 
 

 

ಮೇಷ (Mesha)

 

ಕೆಲವರು ಬೇಕಂತಲೇ ನಿಮ್ಮನ್ನು ಉದ್ರೇಕಿಸುವರು. ಅಂತಹ ಹುನ್ನಾರಗಳ ಬಗ್ಗೆ ಎಚ್ಚರ ಇರಲಿ. ಕಠೋರವಾಗಿ ಮಾತನಾಡುವ ಸಂದರ್ಭ ಬಂದರೆ ಹೆದರಬೇಡಿ. ಕಟುಮಾತುಗಳ ಮೂಲಕವೇ ಕೆಲವರಿಗೆ ಸ್ಪಷ್ಟ ಸಂದೇಶ ರವಾನೆ ಮಾಡುವಿರಿ.

ವೃಷಭ (Vrushabh)


ಕೆಲವು ಸಂಗತಿಗಳು ನಿಮ್ನನ್ನು ಗಾಢವಾಗಿ ಕಾಡುತ್ತಿವೆ. ಅವುಗಳನ್ನು ಈದಿನ ಬಗೆಹರಿಸಿಕೊಳ್ಳಿರಿ. ಅನಿವಾರ್ಯವಾಗಿ ನಿರ್ವಹಿಸುತ್ತಿದ್ದ ಜವಾಬ್ದಾರಿಯಿಂದ ಮುಕ್ತರಾಗುವಿರಿ. ನಿಮ್ಮ ಕೈಯಲ್ಲಿ ಆಗುವ ಕೆಲಸದ ಕಡೆ ಗಮನ ಹರಿಸಿದರೆ ಸಾಕು.

ಮಿಥುನ (Mithuna)


ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ. ಕಚೇರಿಯಲ್ಲೂ ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಸ್ಥಾನಮಾನ ದೊರೆಯುವುದು. ನಿಮ್ಮಲ್ಲಿ ಕಾರ್ಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವಿರಿ. ಹಣಕಾಸು ಕೂಡಾ ಇದಕ್ಕೆ ಪೂರಕವಾಗಿ ಹರಿದು ಬರುವುದು.

ಕರ್ಕ (Karka)


ಮನೆ ಮತ್ತು ಕಚೇರಿ ಎರಡೂ ಕಡೆ ನಡೆಯುವ ಕೆಲ ಬೆಳವಣೆಗೆಗಳು ನಿಮ್ಮನ್ನು ಹೈರಾಣಾಗಿಸಬಹುದು. ಆರೋಗ್ಯದ ಬಗ್ಗೆ ಕೊಂಚ ನಿಗಾ ಇರಲಿ. ವಿಶೇಷವಾಗಿ ಆಹಾರದ ವಿಚಾರದಲ್ಲಿ ಎಚ್ಚರಿಕೆ ಇರಲಿ.

ಸಿಂಹ (Simha)


ಕೋರ್ಟು ಕಚೇರಿಯ ಕೆಲಸಗಳು ತ್ವರಿತಗತಿಯಲ್ಲಿ ಆಗುವುದು. ಸಹೋದರ ಭಿನ್ನಾಭಿಪ್ರಾಯ ಕಳೆದಲ್ಲಿ ವ್ಯವಹಾರದಲ್ಲಿ ಉತ್ತಮ ಸಹಕಾರ ದೊರೆಯುವುದು. ನೀವು ಪಟ್ಟ ಶ್ರಮಕ್ಕೆ ಪ್ರತಿಫಲ ದೊರೆಯುವುದು.

ಕನ್ಯಾರಾಶಿ (Kanya)


ಬದುಕು ಯಾಂತ್ರಿಕವಾಗುವುದರಿಂದ ಮನಸ್ಸಿಗೆ ಬೇಸರ ಮೂಡುವುದು. ನೀವು ನಿಮ್ಮ ಮನಸ್ಸನ್ನು ಸುಸ್ಥಿತಿಗೆ ತರಲು ಪ್ರವಾಸ ಮಾಡುವುದು ಒಳ್ಳೆಯದು. ಇಲ್ಲವೆ ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ವಿಚಾರ ವಿನಿಮಯ ಮಾಡಿಕೊಳ್ಳಿರಿ.

ತುಲಾ (Tula)


ವ್ಯಾಪಾರ-ವ್ಯವಹಾರ, ಲೇವಾದೇವಿಯಲ್ಲಿ ನಷ್ಠ ಉಂಟಾಗುವ ಸಂಭವ. ಆರ್ಥಿಕ ಮುಗ್ಗಟ್ಟು ಉಂಟಾಗುವ ಸಂದರ್ಭ. ನೂತನ ಕಾರ್ಯಭಾರವನ್ನು ಹಮ್ಮಿಕೊಳ್ಳದಿರಿ. ಮತ್ತು ಸ್ನೇಹಿತರ ನಡುವಿನ ಹಣಕಾಸು ವಿಷಯದಲ್ಲಿ ತಲೆಹಾಕದಿರಿ.

ವೃಶ್ಚಿಕ (Vrushchika)


ನಿಮ್ಮ ಮಾತಿನ ವರಸೆಯಿಂದ ಬಹುದಿನದ ಮಿತ್ರರೇ ಅಕಾರಣ ನಿಮ್ಮನ್ನು ವಿರೋಧಿಸುವರು. ಮನೆಯಲ್ಲೂ ಸಹಾ ಅಶಾಂತಿಯ ವಾತಾವರಣ ಉಂಟಾಗುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿರಿ. ಮನಸ್ಸಿಗೆ ಶಾಂತಿ ದೊರೆಯುವುದು.

ಧನು ರಾಶಿ (Dhanu)


ದುಂದುವೆಚ್ಚ ಕಡಿಮೆ ಮಾಡುವುದು ಸೂಕ್ತ. ಹಣದ ವ್ಯವಹಾರ ಗುಪ್ತವಾಗಿರಲಿ. ಅದರಿಂದ ನೀವು ಅಂದುಕೊಂಡ ಎಲ್ಲಾ ಕಾರ್ಯಗಳಲ್ಲೂ ಜಯಶೀಲರಾಗುವಿರಿ. ಮನೆಯಲ್ಲಿನ ಹಿರಿಯರ ಆಶೀರ್ವಾದ ಪಡೆಯಿರಿ. ಆರೋಗ್ಯ ಉತ್ತಮವಾಗಿರುವುದು.

ಮಕರ (Makara)


ಸಂಪಾದನೆಗಿಂತ ವೆಚ್ಚ ಹೆಚ್ಚಾಗುವುದು. ನೆರೆಹೊರೆಯವರ ವ್ಯಾಜ್ಯವನ್ನು ತೀರಿಸಲು ಹೋಗಿ ಅವಮಾನಿತರಾಗುವಿರಿ. ಹಾಗಾಗಿ ಊರ ಉಸಾಬರಿ ನನಗೇಕೆ ಎಂದು ಸುಮ್ಮನಿದ್ದುಬಿಡಿ. ಸಂಜೆಯ ವೇಳೆಗೆ ಮನಸ್ಸು ಪ್ರಶಾಂತತೆಯಿಂದ ಕೂಡಿರುವುದು.

ಕುಂಭರಾಶಿ (Kumbha)


ನಿಮಗೆ ಈ ದಿನ ಬರುವ ಹಣವನ್ನು ಷೇರು ವ್ಯವಹಾರದಲ್ಲಿ ತೊಡಗಿಸದೆ ಬ್ಯಾಂಕಿಗೆ ಜಮಾ ಮಾಡುವುದರಿಂದ ಒಳಿತಾಗುವುದು. ಕೆಲವು ಪ್ರಮುಖ ಕಾರ್ಯಗಳು ಪೂರ್ಣಗೊಳ್ಳಲಿವೆ. ಮಾನಸಿಕ ನಿರಾಳತೆ ಹೊಂದುವಿರಿ, ಮನೆಗೆ ನೂತನ ಸದಸ್ಯರ ಆಗಮನವು ಮನಸ್ಸಿಗೆ ಹರ್ಷವನ್ನುಂಟು ಮಾಡುವುದು. ಬಾಳಸಂಗಾತಿ ಮತ್ತು ಮಕ್ಕಳು ನಿಮಗೆ ಸಂತಸ ನೀಡಲಿದ್ದಾರೆ.

ಮೀನರಾಶಿ (Meena)


ಕುಟುಂಬದಲ್ಲಿ ನೆಮ್ಮದಿಯ ವಾತಾವರಣವನ್ನು ಕಲ್ಪಿಸುವುದು ನಿಮ್ಮ ವಿಚಾರಧಾರೆಯ ಮೇಲೆ ನಿಂತಿರುವುದು. ಎಲ್ಲಾ ಕೆಲಸಗಳನ್ನು ಸಂಶಯ ದಷ್ಠಿಯಿಂದ ನೋಡುವುದನ್ನು ಬಿಡಿ, ಒಳಿತಾಗುವುದು, ದೇಹಾರೋಗ್ಯ ಉತ್ತಮವಾಗಿರುವುದು. ಭೋಜನ ಸುಖ, ಮಿತ್ರರೊಡನೆ ಸೌಹಾರ್ದಯುತ ವಾತಾವರಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top