ಜೊತೆ ಜೊತೆಯಲಿ ಧಾರಾವಾಹಿ ಕುರಿತು ಕಳೆದ ಕೆಲವು ತಿಂಗಳುಗಳಿಂದ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗುತ್ತಿದೆ. ಈ ಹಿಂದೆ ಧಾರಾವಾಹಿಯ ನಟ ಅನಿರುದ್ಧ್ ಅವರು ತಂಡದ ಜೊತೆ ಗಲಾಟಿಮಾಡಿಕೊಂಡರು ಎಂಬ ಕಾರಣಕ್ಕಾಗಿ ಇವರನ್ನು ತಂಡದಿಂದ ಕೈಬಿಡಲಾಗಿತ್ತು. ನಂತರ ಧಾರಾವಾಹಿಗೆ ಹರೀಶ್ ರಾಜ್ ಎಂಟ್ರಿ ಆಯಿತು. ಆದರೆ ಇದೀಗ ಈ ಧಾರಾವಾಹಿ ಸಂಪೂರ್ಣವಾಗಿ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದೆ.
ಈ ವಿಷಯದ ಕುರಿತು ಸ್ವತಃ ಸಿನಿಮಾ ತಂಡ ರಿವೀಲ್ ಮಾಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳಿಗೆ ಬಹಳಷ್ಟು ಬೇಸರವಾಗಿದೆ. ಈ ಹಿಂದೆ ಅನಿರುದ್ಧ್ ಅವರು ದಾರಾವಾಹಿಯಿಂದ ಹೊರಗುಳಿದ ಬಳಿಕ ಈ ಧಾರಾವಾಹಿ ಸಂಪೂರ್ಣವಾಗಿ ಮುಗಿಯುತ್ತದೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಕಥೆಯನ್ನು ಬದಲಿಸಿ ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಅವರನ್ನು ಕರೆತಂದು ಇಷ್ಟು ದಿನ ಧಾರಾವಾಹಿಯನ್ನು ಪ್ರಸಾರ ಮಾಡಿದರು. ಆದರೆ ಇದೀಗ ಈ ಧಾರಾವಾಹಿಯನ್ನು ಪೂರ್ಣಗೊಳಿಸಬೇಕೆಂದು ತೀರ್ಮಾನಿಸಿದ್ದಾರೆ.
ಕಾರಣ ಏನು?
‘ಜೊತೆ ಜೊತೆಯಲಿ’ ಧಾರಾವಾಹಿಗೆ ಕಲಾವಿದರ ಡೇಟ್ಸ್ ತೊಂದರೆ ಆಗಿದೆ. ಈ ಕಾರಣಕ್ಕೆ ಆರೂರು ಜಗದೀಶ್ ಅವರು ಧಾರಾವಾಹಿ ಮುಗಿಸುವ ಆಲೋಚನೆಯಲ್ಲಿದ್ದಾರೆ ಎನ್ನುತ್ತಿವೆ ಮೂಲಗಳು. ಸದ್ಯ ಅವರು ಈ ವಿಚಾರದಲ್ಲಿ ವಾಹಿನಿಯವರ ಒಪ್ಪಿಗೆ ಪಡೆಯಬೇಕಿದೆ. ಅಲ್ಲಿ ಗ್ರೀನ್ಸಿಗ್ನಲ್ ಸಿಕ್ಕ ಬಳಿಕ ಅವರು ಧಾರಾವಾಹಿ ಕೊನೆಗೊಳಿಸಲಿದ್ದಾರೆ. ಡೇಟ್ಸ್ ಕೊಟ್ಟು ಶೂಟಿಂಗ್ ಬರದೇ ಇರುವುದು ತಂಡಕ್ಕೆ ಸಮಸ್ಯೆ ಆಗುತ್ತಿದೆ ಎನ್ನಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
