ಭಾರತದ ಅತ್ಯಂತ ಪ್ರಸಿದ್ಧ ನಗರಗಳಲ್ಲಿ ಬೆಂಗಳೂರು ನಗರ ಕೂಡ ಒಂದು. ಹಲವು ರಾಜ್ಯಗಳಿಂದ ಜನರು ಬೆಂಗಳೂರು ನಗರದತ್ತ ಪ್ರಯಾಣ ಮಾಡುತ್ತಾರೆ. ಇದೀಗ ಬೆಂಗಳೂರು ನಗರದ ಪ್ರಸಿದ್ಧ ರಸ್ತೆಯೊಂದು ಭಾರತದ ಟಾಪ್ 10 ಹೈ ಸ್ಟ್ರೀಟ್ಗಳಲ್ಲಿ no.1 ಸ್ಥಾನ ಅಲಂಕರಿಸಿದೆ.
ಇದೀಗ ಭಾರತದ ಟಾಪ್ 10 ಹೈ ಸ್ಟ್ರೀಟ್ಗಳಲ್ಲಿ ನಾಲ್ಕು ರಸ್ತೆಗಳು ಬೆಂಗಳೂರಿನಲ್ಲೇ ಇವೆ ಎಂದು ಅಧ್ಯಯನವೊಂದು ತಿಳಿಸಿದೆ. ಪ್ರಾಪರ್ಟಿ ಕನ್ಸಲ್ಟೆನ್ಸಿ ನೈಟ್ ಫ್ರಾಂಕ್ ಇಂಡಿಯಾ ಎಂಬ ಸಂಸ್ಥೆಯ ವರದಿ ಈ ಮಾಹಿತಿ ಬಿಡುಗಡೆ ಮಾಡಿದೆ. ಭಾರತದ 30 ಪ್ರಮುಖ ರಸ್ತೆಗಳ ಪಟ್ಟಿಯಲ್ಲಿ ಮಹಾತ್ಮ ಗಾಂಧಿ ರಸ್ತೆ ಮೊದಲ ಸ್ಥಾನ ಅಲಂಕರಿಸಿದೆ.
ಬೆಂಗಳೂರಿನ ಕಮರ್ಷಿಯಲ್ ರಸ್ತೆ 7, ಬ್ರಿಗೇಡ್ ರಸ್ತೆ 9 ಹಾಗೂ ಚರ್ಚ್ ರಸ್ತೆ 10 ನೇ ಸ್ಥಾನದಲ್ಲಿವೆ ಎಂದು ವರದಿ ತಿಳಿಸಿದೆ. ಆಧುನಿಕ ಚಿಲ್ಲರೆ ವ್ಯಾಪಾರದ ಶೇಕಡಾ 67 ರಷ್ಟು ಪಾಲು ಮತ್ತು ಅಂತಾರಾಷ್ಟ್ರೀಯ ಮೂಲದ ಬ್ರಾಂಡ್ಗಳ ಶೇಕಡಾ 34 ರಷ್ಟು ಕೇಂದ್ರೀಕರಣದಿಂದ ಉತ್ತೇಜಿತವಾಗಿರುವ ಭಾರತದ ಉದ್ಯಾನ ನಗರವು ಏಳರಲ್ಲಿ ಗರಿಷ್ಠ ಸಂಖ್ಯೆಯ ಹೈ ಸ್ಟ್ರೀಟ್ಗಳನ್ನು ಹೊಂದಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
