ಮೇ 12, 2023 ಶುಕ್ರವಾರ
ವರ್ಷ : 1945, ಶೋಭಾಕೃತ
ತಿಂಗಳು : ವೈಶಾಖ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ಸಪ್ತಮೀ : May 11 11:27 am – May 12 09:06 am; ಅಷ್ಟಮೀ : May 12 09:06 am – May 13 06:51 am
ನಕ್ಷತ್ರ : ಶ್ರವಣ: May 11 02:37 pm – May 12 01:03 pm; ಧನಿಷ್ಠ: May 12 01:03 pm – May 13 11:35 am
ಯೋಗ : ಶುಕ್ಲ: May 11 03:16 pm – May 12 12:17 pm; ಬ್ರಹ್ಮ: May 12 12:17 pm – May 13 09:22 am
ಕರಣ : ಬಾವ: May 11 10:17 pm – May 12 09:07 am; ಬಾಲವ: May 12 09:07 am – May 12 07:58 pm; ಕುಲವ: May 12 07:58 pm – May 13 06:51 am
Time to be Avoided
ರಾಹುಕಾಲ : 10:41 AM to 12:16 PM
ಯಮಗಂಡ : 3:24 PM to 4:59 PM
ದುರ್ಮುಹುರ್ತ : 08:29 AM to 09:20 AM, 12:41 PM to 01:31 PM
ವಿಷ : 04:48 PM to 06:18 PM
ಗುಳಿಕ : 7:33 AM to 9:07 AM
Good Time to be Used
ಅಮೃತಕಾಲ : 01:49 AM to 03:19 AM
ಅಭಿಜಿತ್ : 11:50 AM to 12:41 PM
Other Data
ಸೂರ್ಯೋದಯ : 5:58 AM
ಸುರ್ಯಾಸ್ತಮಯ : 6:33 PM
ಮೇಷ (Mesha)
ನೀವೇ ಮುಂದಾಗಿ ನಿಂತು ನಡೆಸುವ ಕೆಲಸಕ್ಕೆ ಮನಸ್ಸಿನ ಸಿದ್ಧತೆ ಬೇಕಾಗುವುದು. ಈ ದಿನ ಏಕಾಗ್ರತೆಯಿಂದ ಕೆಲಸವನ್ನು ಆರಂಭಿಸಿರಿ. ಮನೋಕಾಮನೆಗಳು ಪೂರ್ಣಗೊಳ್ಳುವುದು ಆದಷ್ಟು ಈ ದಿನ ತಾಳ್ಮೆಯಿಂದಿರಿ.
ವೃಷಭ (Vrushabh)
ಕೆಲವು ನಾಟಕೀಯ ಘಟನೆಗಳು ನಿಮ್ಮ ಸುತ್ತಮುತ್ತ ನಡೆಯುವ ಸಾಧ್ಯತೆ ಇದ್ದು, ಅದನ್ನೇ ನಿಜವೆನ್ನುವ ಭ್ರಮೆಗೆ ಒಳಗಾಗುವಿರಿ. ಈ ಭ್ರಮಾಲೋಕದಿಂದ ಹೊರಬಂದಲ್ಲಿ ನೈಜ ಜೀವನದ ದರ್ಶನವಾಗುವುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.
ಮಿಥುನ (Mithuna)
ಅಧಿಕ ಶ್ರಮಕ್ಕೆ ತಕ್ಕಷ್ಟು ಆದಾಯವೂ ಬರುವುದರಿಂದ ಈ ದಿನ ಹಣಕಾಸಿನ ತೊಂದರೆಯಿರುವುದಿಲ್ಲ. ಹೊಸದೇನೋ ಒಂದು ನಿಮ್ಮ ಜೀವನವನ್ನು ಪ್ರವೇಶಿಸಲಿದ್ದು, ಇದರಿಂದ ಉತ್ತಮವಾಗುವುದು. ನೆರೆಹೊರೆಯವರೊಂದಿಗೆ ಸ್ನೇಹದಿಂದ ವರ್ತಿಸಿರಿ.
ಕರ್ಕ (Karka)
ನಿಮ್ಮ ಕಾರ್ಯ ಯೋಜನೆಗಳಲ್ಲಿ ಯಶಸ್ಸು ಕಾಣುವಿರಿ. ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭಾಂಶ ತೋರುವುದು. ನೂತನ ವಸ್ತ್ರ ಖರೀದಿಯು. ಮನೋಧೈರ್ಯದಿಂದ ನೂತನ ಕಾರ್ಯಗಳನ್ನು ಹಮ್ಮಿಕೊಳ್ಳುವಿರಿ ಮತ್ತು ಯಶಸ್ಸು ಹೊಂದುವಿರಿ. ಸ್ಥಿರಾಸ್ತಿ ಖರೀದಿಯ ಬಗ್ಗೆ ಮರು ಚಿಂತನೆ ಮಾಡುವಿರಿ.
ಸಿಂಹ (Simha)
ಕೆಲಸಗಳ ಬದಲಾವಣೆಯೇ ವಿಶ್ರಾಂತಿ ಎನ್ನುವಂತೆ ಮಾಡುವ ಕೆಲಸದಲ್ಲಿ ಏಕತಾನತೆಯಿಂದ ಹೊರಬರಲು ಬೇರೊಂದು ಕೆಲಸವನ್ನು ಆರಂಭ ಮಾಡುವಿರಿ. ಮನೆಯ ಅಲಂಕಾರಿಕ ವಸ್ತುಗಳ ಖರೀದಿಗಾಗಿ ಹಣ ಖರ್ಚು ಮಾಡಬೇಕಾಗುವುದು. ಆರೋಗ್ಯದ ಕಡೆ ಗಮನ ನೀಡಿರಿ.
ಕನ್ಯಾರಾಶಿ (Kanya)
ಗ್ರಹಗಳು ಈ ದಿನ ನಿಮ್ಮ ವಿರುದ್ಧವಾಗಿದ್ದು ಮಹತ್ತರ ಕಾರ್ಯಗಳನ್ನು ಹಮ್ಮಿಕೊಳ್ಳದಿರುವುದು ಕ್ಷೇಮಕರ. ಆದಷ್ಟು ತಾಳ್ಮೆಯಿಂದ ಇರಿ. ನಿಧಾನಗತಿಯಿಂದ ಕೆಲಸ ಕಾರ್ಯಗಳು ಆಗುವವು. ಹಿರಿಯರ ಆಶೀರ್ವಾದ ಪಡೆಯಿರಿ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಅಗತ್ಯ.
ತುಲಾ (Tula)
ನಿಮ್ಮ ಯೋಜನೆಗಳು ಮುಂದಕ್ಕೆ ಹೋಗಲಿವೆ. ಆದಾಗ್ಯೂ ಈ ದಿನ ಕೆಲವು ವಿಷಯದಲ್ಲಿ ಯಶಸ್ಸು ಪಡೆಯುವಿರಿ. ಮಧ್ಯಾಹ್ನದ ನಂತರ ಕಾರ್ಯಗಳು ಸಿದ್ಧಿಸುವುದು. ಸ್ನೇಹಿತರಿಗೆ ಹಣದ ಸಹಾಯ ಮಾಡಬೇಕಾಗಿ ಬರುವುದು. ಉಷ್ಣಸಂಬಂಧಿ ವ್ಯಾಧಿಗೆ ಸೂಕ್ತ ಔಷಧ ಸೇವಿಸಿರಿ.
ವೃಶ್ಚಿಕ (Vrushchika)
ಧನಾತ್ಮಕ ಚಿಂತನೆಯಿಂದಾಗಿ ಇಷ್ಟಕಾರ್ಯ ಸಿದ್ಧಿಯು. ದೇಹದಲ್ಲಿ ಉತ್ತಮ ಆರೋಗ್ಯ. ಮನಸ್ಸು ಲವಲವಿಕೆಯಿಂದ ಕೂಡಿದ್ದು ನೂತನ ಸ್ನೇಹಿತರನ್ನು ಮಾಡಿಕೊಳ್ಳುವಿರಿ. ಬಂದು ಮಿತ್ರರೊಡನೆ ಭೋಜನ ಕೂಟದಲ್ಲಿ ಭಾಗವಹಿಸುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಧನು ರಾಶಿ (Dhanu)
ಈ ದಿನ ನಿಮ್ಮ ಕಾರ್ಯಗಳು ಶೀಘ್ರಗತಿಯಲ್ಲಿ ಸಾಗುವುದು. ವಿವಾಹ ಯೋಗ್ಯರಿಗೆ ಕಂಕಣಭಾಗ್ಯ ಒದಗಿ ಬರುವುದು. ಕೆಲವರಿಗೆ ವಿದೇಶ ಪ್ರವಾಸದ ಆಮಂತ್ರಣ ಬರುವ ಸಾಧ್ಯತೆ. ಗುರು-ಹಿರಿಯರ ಹಿತವಚನವನ್ನು ಪಾಲಿಸಿರಿ.
ಮಕರ (Makara)
ಬಂಧು ಬಾಂಧವರಿಂದ ಕಷ್ಟ ಕಾಲದಲ್ಲಿ ಹಣಕಾಸಿನ ಸಹಾಯ ದೊರೆಯುವುದು. ಸ್ನೇಹಿತರ ಜತೆಗಿನ ಲೇವಾದೇವಿ ವ್ಯವಹಾರದ ಪತ್ರಗಳಿಗೆ ಸಹಿ ಹಾಕುವ ಮುನ್ನ ಎರಡು ಬಾರಿ ಚಿಂತಿಸಿ. ವ್ಯವಹಾರದಲ್ಲಿ ಮೋಸ ಹೋಗುವ ಸಂದರ್ಭವಿದೆ.
ಕುಂಭರಾಶಿ (Kumbha)
ಹೊಸ ಹೊಸ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳುವ ಮುನ್ನ ಬಹು ಎಚ್ಚರಿಕೆ ಅಗತ್ಯ. ಹಣಕಾಸಿನ ವ್ಯವಹಾರಗಳಲ್ಲಿ ಮೋಸ ಹೋಗುವ ಸಂದರ್ಭವಿರುತ್ತದೆ. ದೀನದಲಿತರಿಗೆ ಆಹಾರ ನೀಡಿರಿ.ಸಂಗೀತ ಕ್ಷೇತ್ರ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಿರಿ
ಮೀನರಾಶಿ (Meena)
ದೈನಂದಿನ ವಿಷಯಕ್ಕೆ ಹೆಚ್ಚಿನ ಸಮಯ ವ್ಯಯಿಸುತ್ತೀರಿ. ಸಾಮಾನ್ಯ ಗೃಹ ಬಳಕೆ ವಸ್ತುಗಳ ಬಗ್ಗೆ ಗಮನ ಹರಿಸುವಿರಿ. ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡುವುದು ಒಳ್ಳೆಯದು. ಆರ್ಥಿಕ ಸಂಕಷ್ಟ ಎದುರಾಗುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
