ನಾಳೆ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ಸೆಕ್ಷನ್ 144 ಜಾರಿ ಆಗಲಿದೆ. ಇನ್ನು ಬೆಂಗಳೂರು ನಗರದಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು ಯಾವುದೇ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದರೂ ಸಂಭ್ರಮಾಚಣೆ ಮಾಡುವಂತಿಲ್ಲ. ಈಗಾಗಲೇ ನಿಗದಿಗೊಂಡಿರುವ ಮದುವೆ ಹಾಗೂ ಶವ ಸಂಸ್ಕಾರಕ್ಕೆ ಮಾತ್ರ 5ಕ್ಕಿಂತ ಹೆಚ್ಚು ಜನರು ಸೇರಲು ಅವಕಾಶ ನೀಡಲಾಗುತ್ತದೆ. ಮೇ 13 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ರ ವರೆಗೂ ಆದೇಶ ಜಾರಿಯಲ್ಲಿರುತ್ತದೆ
ಬೆಂಗಳೂರಿನಾದ್ಯಂತ 5 ಅಥವಾ ಅದಕ್ಕಿಂತ ಹೆಚ್ಚು ಜನರ ಒಟ್ಟಿಗೆ ಓಡಾಡುವುದು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಮದುವೆ ಮತ್ತು ಶವಸಂಸ್ಕಾರವನ್ನ ಹೊರತುಪಡಿಸಿ ಉಳಿದೆಲ್ಲದಕ್ಕೂ ಪ್ರತಿಬಂದಕಾಜ್ಞೆ ಅನ್ವಯ ಆಗಲಿದೆ. ಯಾವುದೇ ಮಾರಾಕಾಸ್ತ್ರಗಳನ್ನ ಒಯ್ಯುವುದು ನಿಷೇಧ ಮಾಡಲಾಗಿದೆ. ಮತ್ತು ಪಟಾಕಿಯಂತಹ ಸ್ಪೋಟಕ ವಸ್ತುಗಳ ಸಾಗಾಟ ,ಪಟಾಕಿ ಹೊಡೆಯುವುದು ನಿಷೇಧ ಮಾಡಲಾಗಿದೆ.
ಪ್ರತಿಕೃತಿ ಪ್ರದರ್ಶನ, ದಹನ, ಬಹಿರಂಗ ಘೋಷಣೆ ಕೂಗುವುದು, ಸಂಗೀತ ನುಡಿಸುವುದು, ಸನ್ನೆ ಮಾಡುವುದು, ಮತ್ತು ಬಿತ್ತಿ ಪತ್ರ ಪ್ರದರ್ಶನ ಕೂಡ ನಿಷೇಧ ಮಾಡಲಾಗಿದೆ. ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
