fbpx
ಸಮಾಚಾರ

ಮೇ 15: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಮೇ 15, 2023 ಸೋಮವಾರ
ವರ್ಷ : 1945, ಶೋಭಾಕೃತ
ತಿಂಗಳು : ವೈಶಾಖ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಏಕಾದಶೀ : May 15 02:46 am – May 16 01:03 am; ದ್ವಾದಶೀ : May 16 01:03 am – May 16 11:36 pm
ನಕ್ಷತ್ರ : ಪೂರ್ವಾ ಭಾದ್ರ: May 14 10:16 am – May 15 09:08 am; ಉತ್ತರಾ ಭಾದ್ರ: May 15 09:08 am – May 16 08:15 am
ಯೋಗ : ವಿಷ್ಕಂಭ: May 15 03:56 am – May 16 01:29 am; ಪ್ರೀತಿ: May 16 01:29 am – May 16 11:15 pm
ಕರಣ : ಬಾವ: May 15 02:46 am – May 15 01:53 pm; ಬಾಲವ: May 15 01:53 pm – May 16 01:03 am; ಕುಲವ: May 16 01:03 am – May 16 12:17 pm

Time to be Avoided
ರಾಹುಕಾಲ : 7:32 AM to 9:07 AM
ಯಮಗಂಡ : 10:41 AM to 12:16 PM
ದುರ್ಮುಹುರ್ತ : 12:41 PM to 01:31 PM, 03:12 PM to 04:02 PM
ವಿಷ : 06:23 PM to 07:55 PM
ಗುಳಿಕ : 1:50 PM to 3:25 PM

Good Time to be Used
ಅಮೃತಕಾಲ : 03:37 AM to 05:10 AM
ಅಭಿಜಿತ್ : 11:50 AM to 12:41 PM

Other Data
ಸೂರ್ಯೋದಯ : 5:58 AM
ಸುರ್ಯಾಸ್ತಮಯ : 6:33 PM

 

 

 

 

 

ಮೇಷ (Mesha)

 

ನಿಮ್ಮ ಪ್ರಯತ್ನಗಳನ್ನು ಪ್ರಾಮಾಣಿಕವಾಗಿಯೇ ಮಾಡುತ್ತಿದ್ದೀರಿ. ಆದರೆ ಗ್ರಹಗತಿಗಳು ನಿಮ್ಮ ವಿರುದ್ಧವಾಗಿರುವುದರಿಂದ ಒಂದು ರೀತಿಯ ಸಮಾಧಾನಕರ ಮನೋಭಾವ ಪಡೆದು ಹರ್ಷಿಸಲು ಕಾಲ ಸಾಧ್ಯ ಮಾಡಿಕೊಡುತ್ತಿಲ್ಲ. ಇನ್ನು ಸ್ವಲ್ಪ ದಿನ ಕಾಯದೆ ವಿಧಿ ಇಲ್ಲ.

ವೃಷಭ (Vrushabh)


ಲಾಭಸ್ಥಾನದ ಗುರುವು ನಿಮ್ಮನ್ನು ಹಣಕಾಸಿನ ವಿಷಯದಲ್ಲಿ ಸದೃಢನನ್ನಾಗಿ ಮಾಡುವುದು. ಸಮಾಜದಲ್ಲಿ ಅಧಿಕಾರ ಕೀರ್ತಿ, ಗೌರವವನ್ನು ತಂದು ಕೊಡುವುದು. ಆದರೆ ನಿಮ್ಮ ನಡೆಯನ್ನು ಎಚ್ಚರಿಸುವ ಜನಗಳಿದ್ದಾರೆ. ಎಚ್ಚರಿಕೆಯಿಂದ ಹೆಜ್ಜೆ ಇಡಿ.

ಮಿಥುನ (Mithuna)


ಬಾಳಸಂಗಾತಿಯ ಬಂಧುಗಳಿಂದ ಸುಖವಿಲ್ಲ ಅಥವಾ ಪ್ರಯೋಜನವಿಲ್ಲ ಎಂಬ ನಿಮ್ಮ ಧೋರಣೆಯು ಇಂದು ತಲೆಕೆಳಗಾಗುವುದು. ನಿಮ್ಮ ಸಂಗಾತಿಯ ಸಹೋದರ, ಸಹೋದರಿಯರೇ ನಿಮ್ಮ ಬಗ್ಗೆ ವಿಶೇಷ ಅಭಿಮಾನವನ್ನು ವ್ಯಕ್ತಪಡಿಸುವರು.

ಕರ್ಕ (Karka)


ಯಾವುದೋ ಸಹಜವಾದ ಮಾತು ತಪ್ಪು ಅಭಿಪ್ರಾಯ ಮೂಡಿಸುವ ಸಾಧ್ಯತೆ ಇರುವುದು. ಹಾಗಾಗಿ ಭಗವಂತ ಈ ದಿನ ಆಡುವ ಮಾತು ಪರರನ್ನು ನೋಯಿಸದಿರಲಿ ಎಂದು ಪ್ರಾರ್ಥಿಸಿ. ಸಾಧ್ಯವಾದ ಮಟ್ಟಿಗೆ ಸಾಧಕ-ಬಾಧಕಗಳನ್ನು ಅರಿತು ಮಾತನಾಡಿ.

ಸಿಂಹ (Simha)


ಈ ದಿನ ಅತ್ಯಂತ ಹರ್ಷದ ದಿನ. ನಿಮ್ಮ ಹಾಸ್ಯ ಮನೋಭಾವದಿಂದ ಜನರನ್ನು ಆಕರ್ಷಿಸುವಿರಿ. ಇದರಿಂದ ನಿಮಗೂ ಸಂತಸವಾಗುವುದು. ಹಣಕಾಸು ಒದಗಿ ಬರುವುದು. ಉತ್ತಮ ಆರೋಗ್ಯ ನಿಮ್ಮದಾಗುವುದು.

ಕನ್ಯಾರಾಶಿ (Kanya)


ಮಕ್ಕಳಿಂದ ಹರ್ಷದ ವಾರ್ತೆ ಕೇಳುವಿರಿ. ಅತಿಯಾದ ಆತುರದ ಕುತೂಹಲದಿಂದ ಕೆಲವು ಸಮಸ್ಯೆಗಳನ್ನು ತಂದುಕೊಳ್ಳುವಿರಿ. ವಿಷಯದ ಸತ್ಯಾಸತ್ಯತೆಯನ್ನು ಮೊದಲು ಪರೀಕ್ಷಿಸಿ ನಂತರ ವಿಷಯವನ್ನು ಬಹಿರಂಗಪಡಿಸಿರಿ.

ತುಲಾ (Tula)


ಈ ದಿನ ನಿಮ್ಮ ಮಾತಿನ ವೈಖರಿಯನ್ನು ಗಮನಿಸಿ. ನಿಮ್ಮ ಕಾರ್ಯಯೋಜನೆಗಾಗಿ ಹೆಚ್ಚಾಗಿ ಧನ ಸಹಾಯ ಹರಿದು ಬರುವುದು. ದಿನದಿನಕ್ಕೆ ನಿಮ್ಮ ಜವಾಬ್ದಾರಿಯೂ ಹೆಚ್ಚುತ್ತಾ ಹೋಗುವುದರಿಂದ ನಿಮ್ಮ ಘನತೆಯನ್ನು ಕಾಪಾಡಿಕೊಳ್ಳಿರಿ.

ವೃಶ್ಚಿಕ (Vrushchika)


ಬಂಧು ಬಾಂಧವರ ಜೊತೆಯಲ್ಲಿ ಹಣಕಾಸಿನ ವ್ಯವಹಾರ ಮಾಡುವುದು ಸೂಕ್ತವಲ್ಲ. ಅವರುಗಳು ನಿಮ್ಮನ್ನು ಕೆಲವು ಸಲ ಇಕ್ಕಟ್ಟಿಗೆ ಸಿಲುಕಿಸುವರು. ಇಲ್ಲವೆ ನಿಮ್ಮ ಬಗ್ಗೆ ಋುಣಾತ್ಮಕ ಚಿಂತನೆಗಳನ್ನು ಇತರರಲ್ಲಿ ಬಿತ್ತುವರು. ಈ ಬಗ್ಗೆ ಎಚ್ಚರವಿರಲಿ.

ಧನು ರಾಶಿ (Dhanu)


ವಿವಾಹ ಯೋಗ್ಯ ವಧುವರರಿಗೆ ಸಿಹಿ ಸುದ್ದಿಯೊಂದು ಈ ದಿನ ಬರಲಿದೆ. ಕೆಲವರಿಗೆ ಈ ದಿನ ವಿವಾಹದ ಮಾತುಕತೆಯು ಫಲಪ್ರದವಾಗಲಿದೆ. ಗುರು-ಹಿರಿಯರ ಶ್ರೀರಕ್ಷೆ ಇದ್ದು ವಿವಾಹಕ್ಕೆ ಸಮ್ಮತಿ ನೀಡಿರಿ, ಮಹತ್ವಾಕಾಂಕ್ಷೆಯ ಸಿದ್ಧಿಗಾಗಿ ಈ ದಿನ ತುಂಬ ಶ್ರಮ ಪಡಬೇಕಾಗುವುದು. ಗುರಿ ತಲುಪಲು ಹೊಸ ಅವಕಾಶ ಒದಗಿ ಬರುವುದು. ನೆಚ್ಚಿನ ಸ್ನೇಹಿತರು ಇಂದು ನಿಮಗೆ ಸಹಾಯಕರಾಗಿ ಸೇವೆ ಸಲ್ಲಿಸುವರು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

ಮಕರ (Makara)


ಶ್ರಮಪಟ್ಟು ಗಳಿಸಿದ ಹಣವು ಈ ದಿನ ಕರಗಿ ಹೋಗುವ ಸಾಧ್ಯತೆಯಿದೆ, ನಿಮ್ಮ ಯೋಚನಾ ಲಹರಿ ಸೂಕ್ತವಾದರೂ ಅದನ್ನು ಸರಿಯಾದ ಸಮಯಕ್ಕೆ ಅಭಿವ್ಯಕ್ತಿ ಗೊಳಿಸಲು ಆಗುವುದಿಲ್ಲ. ಆಂಜನೇಯ ಸ್ತೋತ್ರ ಪಠಿಸಿರಿ. ಈ ದಿನ ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ.

ಕುಂಭರಾಶಿ (Kumbha)


ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಹಳೆಯ ಸ್ನೇಹಿತರ ಸಹಕಾರ ದೊರೆಯುವುದು. ಮತ್ತು ಹಳೆ ವಿದ್ಯಾರ್ಥಿಗಳಿಂದ ಸಹಕಾರ ಸಿಗುವುದು. ಗುರುಹಿರಿಯರ ಆಶೀರ್ವಾದದಿಂದ ನಂಬಿಕೊಂಡ ಭಗವಂತನ ಪೂಜೆ ಮಾಡುವುದು ಒಳಿತು, ಶನಿಯ ಕಾಟ ಇನ್ನೂ ಸ್ವಲ್ಪ ದಿನ ಇರುವುದು. ಹಾಗಾಗಿ ಈ ದಿನ ಏನೋ ಮಾಡಲು ಹೋಗಿ ಇನ್ನೇನೋ ಆದೀತು. ಎಚ್ಚರವಿರಲಿ

ಮೀನರಾಶಿ (Meena)


ಬಾಳಸಂಗಾತಿಯ ಕಾರಣದಿಂದ ನಿಮ್ಮ ಘನತೆಗೆ ಹೆಚ್ಚಿನ ತೂಕ ಬರಲಿದೆ. ಎಲ್ಲರೂ ನಿಮ್ಮ ಬುದ್ಧಿಮತ್ತೆಯನ್ನು ಕೊಂಡಾಡುವರು. ಅನ್ಯರಿಂದ ಕೈಗಡ ಪಡೆದದ್ದನ್ನು ವಾಪಸ್ಸು ಮಾಡಲು ಚಿಂತಿಸುವಿರಿ. ವಿವಿಧ ಮೂಲಗಳಿಂದ ಹಣ ಬರುವುದು, ನೀವಾಡುವ ಮಾತು ಈ ದಿನ ನೂತನ ಕಾರ್ಯಭಾರವನ್ನು ಒಪ್ಪಿಕೊಳ್ಳುವಂತೆ ಪ್ರೇರೇಪಿಸುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top