ಮೇಷ ರಾಶಿ
ಪ್ರಿಯ ಜನರ ಭೇಟಿ ,ಋಣ ವಿಮೋಚನೆಯನ್ನು ಮಾಡಿ ಕೊಳ್ಳಲಿದ್ದೀರಿ, ಅನಿರೀಕ್ಷಿತ ಧನ ಲಾಭವಾಗಲಿದೆ, ದ್ರವ್ಯ ಲಾಭ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆಯಾಗಲಿದೆ, ಸ್ತ್ರೀಯರ ವಿಚಾರದಲ್ಲಿ ಆದಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ,ವ್ಯವಹಾರಗಳಲ್ಲಿ ನಿಧಾನವಾಗಿ ಯೋಚಿಸಿ ತೀರ್ಮಾನವನ್ನು ಕೈಗೊಳ್ಳಿ, ಇಲ್ಲವೆಂದರೆ ನಾನಾ ರೀತಿಯ ಸಮಸ್ಯೆಗಳು ಉಂಟಾಗಲಿವೆ.
ಪರಿಹಾರ:ಪ್ರತಿನಿತ್ಯ ಗುರು ರಾಘವೇಂದ್ರ ಸ್ವಾಮಿಯ ಸ್ತೋತ್ರವಾದ “ಪೂಜ್ಯಾಯ ರಾಘವೇಂದ್ರಾಯ, ಸತ್ಯ ಧರ್ಮ ವ್ರತಾಯಚ, ಭಜತಾಂ ಕಲ್ಪ ವೃಕ್ಷಾಯ, ನಮತಾಂ ಕಾಮಧೇನುವೇ” ಈ ಮಂತ್ರವನ್ನು 108 ಬಾರಿ ಜಪಿಸಿ ಗುರುವಾರ ಗುರುಗಳ ಆಲಯಕ್ಕೆ ಹೋಗಿ ದೀರ್ಘದಂಡ ನಮಸ್ಕಾರವನ್ನು ಮಾಡಿ .
ವೃಷಭ ರಾಶಿ
ಯತ್ನ ಕಾರ್ಯಗಳಲ್ಲಿ ಜಯ, ಮಾತೃವಿನಿಂದ ಸಹಾಯವಾಗಲಿದೆ, ಐಶ್ವರ್ಯ ವೃದ್ಧಿಯಾಗಲಿದೆ, ಕ್ರಯ ವಿಕ್ರಯಗಳಲ್ಲಿ ಮೋಸ ಉಂಟಾಗಲಿದೆ , ತೀರ್ಥಯಾತ್ರೆ ದರ್ಶನ ಮಾಡುವ ಶುಭಯೋಗ, ಕುಟುಂಬ ಸೌಖ್ಯ, ಚಂಚಲ ಮನಸ್ಸು.
ಪರಿಹಾರ:ಸೋಮವಾರ ಶಿವಾಲಯಕ್ಕೆ ಭೇಟಿ ನೀಡಿ ಬಿಲ್ವಾರ್ಚನೆಯನ್ನು ಮಾಡಿಸಿ ದೀರ್ಘದಂಡ ನಮಸ್ಕಾರವನ್ನು ಮಾಡಿ.
ಮಿಥುನ ರಾಶಿ
ಪರರಿಂದ ಸಹಾಯವಾಗಲಿದೆ ಗುಪ್ತರೋಗಗಳು ಬಾಧಿಸಲಿದೆ ಪಾಪಬುದ್ಧಿ ಉಂಟಾಗಲಿದೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಉದ್ಯೋಗದಲ್ಲಿ ಸ್ಥಾನಗಳು ಬದಲಾಗಲಿವೆ ಮಕ್ಕಳಿಂದ ನಿಂದನೆಗೆ ಒಳಗಾಗುವಂತಹ ಪರಿಸ್ಥಿತಿಗಳು ಎದುರಾಗಲಿವೆ
ಪರಿಹಾರ:ಪ್ರತಿನಿತ್ಯ ವಿಷ್ಣುಸಹಸ್ರನಾಮವನ್ನು ಪಾರಾಯಣ ಮಾಡಿ, ತಂದೆ ತಾಯಿಗಳಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆಯಿರಿ.
ಕಟಕ ರಾಶಿ
ಧೈರ್ಯದಿಂದ ಎಲ್ಲಾ ಕೆಲಸದಲ್ಲಿ ಮುನ್ನಡೆ, ತೀರ್ಥಯಾತ್ರೆ ದರ್ಶನ ಮಾಡುವ ಶುಭಯೋಗ ,ಅನಗತ್ಯ ವಿಚಾರಗಳಿಂದ ಕಲಹ ಉಂಟಾಗಲಿದೆ, ಸ್ವಲ್ಪ ಮಾತಿನ ಮೇಲೆ ನಿಗವನ್ನು ಇಟ್ಟು ಮಾತನಾಡಿ, ಮಂಗಳ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ, ಅಧಿಕ ಧನ ಲಾಭ ಪ್ರಾಪ್ತಿಯಾಗಲಿದೆ.
ಪರಿಹಾರ:ಪ್ರತಿನಿತ್ಯ ಅಷ್ಟಲಕ್ಷ್ಮಿ ಸ್ತೋತ್ರವನ್ನು ಪಾರಾಯಣ ಮಾಡಿ, ಶುಕ್ರವಾರ 8 ಜನ ಸುಮಂಗಲಿಯರು ಅರಿಶಿನ ಕುಂಕುಮವನ್ನು ಕೊಟ್ಟು ನಮಸ್ಕಾರ ಮಾಡಿ.
ಸಿಂಹ ರಾಶಿ
ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟ ಆಗಲಿದೆ, ಯತ್ನ ಕಾರ್ಯದಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ , ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುತ್ತೀರ, ಸ್ಥಿರಾಸ್ತಿಯನ್ನು ಮಾರಾಟ ಮಾಡಲು ಯೋಚನೆ ಮಾಡುವಿರಿ, ಸಮಾಜದಲ್ಲಿ ಉತ್ತಮ ಗೌರವ ಪ್ರಾಪ್ತಿಯಾಗಲಿದೆ, ಸಾಲಬಾದೆಗಳು ಬಾಧಿಸಲಿದೆ, ಆದ್ದರಿಂದ ಜಾಗ್ರತೆಯನ್ನು ವಹಿಸಿ .
ಪರಿಹಾರ:“ಓಂ ನಮೋ ಮಂಗಳಾಯ ನಮಃ” ಈ ಮಂತ್ರವನ್ನು 108 ಬಾರಿ ಜಪವನ್ನು ಮಾಡಿ ಬ್ರಾಹ್ಮಣರಿಗೆ ಸ್ವಯಂ ಪಾಕವನ್ನು ದಾನ ನೀಡಿ, ನಮಸ್ಕಾರವನ್ನು ಮಾಡಿ.
ಕನ್ಯಾ ರಾಶಿ
ಈ ವಾರ ತಾಳ್ಮೆ ಅತ್ಯಗತ್ಯ, ಪರಿಶ್ರಮಕ್ಕೆ ತಕ್ಕ ಫಲ ಪ್ರಾಪ್ತಿಯಾಗಲಿದೆ, ಹಿರಿಯರ ಮಾತಿಗೆ ಗೌರವವನ್ನು ನೀಡಿ ರಾಜಕಾರಣಿಗಳಿಗೆ ನಿಂದನೆಯಾಗಲಿದೆ, ಅಪವಾದಗಳು ಬರಲಿವೆ, ವೈರಿಗಳಿಂದ ಎಚ್ಚರಿಕೆ ಆದಷ್ಟು ದೂರವಿರಿ , ಆರೋಗ್ಯದಲ್ಲಿಯೂ ಕೂಡ ವ್ಯತ್ಯಾಸಗಳು ಕಂದು ಬರಲಿವೆ.
ಪರಿಹಾರ:ಮಹಾಸುದರ್ಶನ ಮಂತ್ರವನ್ನು ಪಾರಾಯಣ ಮಾಡಿ, ವೃದ್ಧ ದಂಪತಿಗಳಿಗೆ ಪಾದಪೂಜೆಯನ್ನು ಮಾಡಿ, ಸ್ವಯಂ ಪಾಕವನ್ನು ನೀಡಿ ನಮಸ್ಕಾರವನ್ನು ಮಾಡಿ, ಆಶೀರ್ವಾದವನ್ನು ಪಡೆಯಿರಿ.
ತುಲಾ ರಾಶಿ
ಪತಿ-ಪತ್ನಿಯರಲ್ಲಿ ಪ್ರೀತಿ, ವಾತ್ಸಲ್ಯ ದಾಂಪತ್ಯದಲ್ಲಿ ಅನ್ಯೋನ್ಯತೆ ಹೆಚ್ಚಾಗಲಿದೆ , ಭಿನ್ನಾಭಿಪ್ರಾಯ ದೂರವಾಗಿ ಕುಟುಂಬದಲ್ಲಿನ ವೈಮನಸ್ಸು ದೂರವಾಗುವುದು, ಮಾನಸಿಕ ನೆಮ್ಮದಿ ಲಭಿಸುವುದು, ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ಅನುಕೂಲಕರ ವಾತಾವರಣ ಕೂಡಿಬರಲಿದೆ,
ಪರಿಹಾರ:ಪ್ರತಿನಿತ್ಯ ಅಶ್ವತ ವೃಕ್ಷ ಪ್ರದಕ್ಷಿಣೆಯನ್ನು 18 ಬಾರಿ ಮಾಡಿ ದೀರ್ಘದಂಡ ನಮಸ್ಕಾರವನ್ನು ಮಾಡಿ.
ವೃಶ್ಚಿಕ ರಾಶಿ
ಮಾಡುವ ಕೆಲಸ ಕಾರ್ಯಗಳಲ್ಲಿ ಅಡೆತಡೆಯನ್ನು ಅನುಭವಿಸಬೇಕಾಗುತ್ತದೆ, ಬಂದಿದ್ದ ಅಪವಾದಗಳಿಂದ ಮುಕ್ತಿ ಲಭಿಸಲಿದೆ, ಪ್ರತಿಯೊಂದು ಕೆಲಸದಲ್ಲಿ ತಾಳ್ಮೆ ಅತ್ಯಗತ್ಯ, ತಾಳ್ಮೆಯನ್ನು ಇಟ್ಟುಕೊಂಡು ಕೆಲಸ ಮಾಡಿ, ಇಲ್ಲವೆಂದರೆ ನಂಬಿಕೆ ದ್ರೋಹಕ್ಕೆ ಒಳಗಾಗಬೇಕಾಗುತ್ತದೆ, ಜಾಗ್ರತೆಯನ್ನು ವಹಿಸಿ,ಕುಲದೇವರ ಆರಾಧನೆಯನ್ನು ಮಾಡಿ ವಿಘ್ನಗಳು ನಿವಾರಣೆಯಾಗಲಿವೆ.
ಪರಿಹಾರ:ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಿ ಪಕ್ಷಿಗಳಿಗೆ ಧಾನ್ಯವನ್ನು ಹಾಕಿ.
ಧನಸ್ಸು ರಾಶಿ
ಈ ವಾರ ಅಪರಿಚಿತರ ವಿಷಯದಲ್ಲಿ ಜಾಗ್ರತೆಯನ್ನು ವಹಿಸಿ, ಇಲ್ಲವೆಂದರೆ ಮೋಸ ಹೋಗುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತವೆ, ಕೈಗಾರಿಕೋದ್ಯಮಿಗಳಿಗೆ ಯಶಸ್ಸು, ಎಷ್ಟೇ ಒತ್ತಡವಿದ್ದರು ವಿವೇಚನೆಯನ್ನು ಕಳೆದುಕೊಳ್ಳಬೇಡಿ, ವಿವೇಚನೆಯನ್ನು ಕಳೆದುಕೊಂಡರೆ ನಾನಾ ರೀತಿಯ ಸಮಸ್ಯೆಗಳು ಎದುರಾಗುತ್ತವೆ, ಈ ವಾರ ಒಂದು ಉತ್ತಮವಾದ ವರವಾಗಲಿದೆ, ಎಲ್ಲ ಅನುಕೂಲಗಳು ಸಹ ಲಭಿಸಲಿವೆ.
ಪರಿಹಾರ:ಗುರುವಾರ ಸಾಯಿನಾಥರ ದರ್ಶನವನ್ನು ಮಾಡಿ ಬಡಮಕ್ಕಳಿಗೆ ಅನ್ನದಾನವನ್ನು ಮಾಡಿ.
ಮಕರ ರಾಶಿ
ಅತಿಯಾದ ದುಃಖ, ಅನರ್ಥಗಳ ಆಗುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರಲಿದೆ, ವಿಪರೀತ ದುಶ್ಚಟಗಳು, ಮಿತ್ರರಿಂದ ಸಹಾಯ ಒದಗಿ ಬರಲಿದೆ, ಅಲಂಕಾರಿಕ ಸಾಮಗ್ರಿಗಳಿಗೋಸ್ಕರ ಖರ್ಚನ್ನು ಅಧಿಕವಾಗಿ ಮಾಡುತ್ತೀರ, ಶತ್ರುಗಳು ನಾಶವಾಗಲಿದ್ದಾರೆ, ದೂರ ಪ್ರಯಾಣವನ್ನು ಮಾಡುವಿರಿ,ವಾರಾಂತ್ಯದಲ್ಲಿ ಧನ ಲಾಭವಾಗಲಿದೆ .
ಪರಿಹಾರ:ಪ್ರತಿನಿತ್ಯ ಲಲಿತ ಸಹಸ್ರನಾಮವನ್ನು ಪಾರಾಯಣ ಮಾಡಿ ಎಂಟು ಜನ ಸುಮಂಗಲಿಯರಿಗೆ ಶುಕ್ರವಾರದ ದಿನ ಆರಿಷಿನ,ಕುಂಕುಮವನ್ನು ಕೊಟ್ಟು ನಮಸ್ಕಾರ ಮಾಡಿ .
ಕುಂಭ ರಾಶಿ
ಪ್ರೀತಿ ಸಮಾಗಮವಾಗುವ ವಾರ ವಾಗಲಿದೆ, ಪ್ರಿಯ ಜನರ ಭೇಟಿಯನ್ನು ಮಾಡಲಿದ್ದೀರಿ, ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ, ಶತ್ರುಗಳ ಬಾದೆ ಅಧಿಕವಾಗುತ್ತದೆ, ಸುಖ ಭೋಜನ ಪ್ರಾಪ್ತಿ, ಬಂಧುಗಳ ಭೇಟಿಯನ್ನು ಮಾಡಲಿದ್ದೀರಿ, ತೀರ್ಥಯಾತ್ರೆ ದರ್ಶನ ಮಾಡುವ ಶುಭಯೋಗ, ಮಾತಿನ ಚಕಮಕಿಗೆ ಇಳಿದು ಬಿಡುತ್ತೀರ,ಆದಷ್ಟು ಮಾತಿನ ಮೇಲೆ ಹಿಡಿತವನ್ನು ಮಾತನಾಡಿ ಇಟ್ಟು ಮಾತನಾಡಿ.
ಪರಿಹಾರ:ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯಕ್ಕೆ, ಮಂಗಳವಾರ ಭೇಟಿ ನೀಡಿ ಬಸ್ಮಾರ್ಚನೆಯನ್ನು ಮಾಡಿ , ದೀರ್ಘದಂಡ ನಮಸ್ಕಾರವನ್ನು ಮಾಡಿ.
ಮೀನ ರಾಶಿ
ಭೋಗ ವಸ್ತುಗಳು ಪ್ರಾಪ್ತಿಯಾಗಲಿವೆ, ಸ್ತ್ರೀಯರಿಗೆ ಶುಭ, ಧನ ಲಾಭ ,ಆರೋಗ್ಯ ವೃದ್ಧಿ, ಸಂತಾನ ಪ್ರಾಪ್ತಿಯಾಗಲಿದೆ, ಷೇರು ವ್ಯವಹಾರಗಳಲ್ಲಿ ಇರುವವರು ಬಹಳಷ್ಟು ಎಚ್ಚರವನ್ನು ವಹಿಸಿ, ಇಷ್ಟಾರ್ಥ ಸಿದ್ಧಿಯಾಗಲಿದೆ, ವಾಹನ ಖರೀದಿ ಮಾಡುವುದಕ್ಕೆ ಬಹಳಷ್ಟು ಓಡಾಟವನ್ನು ಮಾಡುತ್ತೀರ.
ಪರಿಹಾರ:ಪ್ರತಿನಿತ್ಯ ಕನಕಧಾರ ಸ್ತೋತ್ರವನ್ನು ಪಾರಾಯಣ ಮಾಡಿ ಬಡಮಕ್ಕಳಿಗೆ ನಿರ್ಗತಿಕ ಮಕ್ಕಳಿಗೆ ಕೈಲಾದ ಸೇವೆಯನ್ನು ಮಾಡಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
