ಬೆಂಗಳೂರಿನಲ್ಲಿ ಇರುವ ಸಂಸದರ ಕಚೇರಿಗೆ ಸಂಶೋಧಕ ಹುದ್ದೆ ಭರ್ತಿ ಮಾಡುತ್ತಿದ್ದು ಸದರಿ ಹುದ್ದೆಯ ನೇಮಕಾತಿಗೆ ಅರ್ಹ ಆಸಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಆಸಕ್ತ ಅಭ್ಯರ್ಥಿಗಳು 25 -09 -2022ರ ಒಳಗೆ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ:
ಆಸಕ್ತ ಅಭ್ಯರ್ಥಿಗಳು ಕಾನೂನು ಮೂಲಕ ಸ್ಥಾಪಿವಾಗಿರುವ ವಿಶ್ವವಿದ್ಯಾಲಯದಲ್ಲಿ ಯಾವುದೇ ಪದವೀ ಪಡೆದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಯಾವುದಾದರೂ ಕೋರ್ಸ್ ಮುಗಿಸಿರಬೇಕು.
ಇತರೆ ಅರ್ಹತೆಗಳು:
ಅಭ್ಯರ್ಥಿಯು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಬಲವಾದ ಹಿಡಿತ ಹೊಂದಿರಬೇಕು. ಅರ್ಥಶಾಸ್ತ್ರ, ಸಾರ್ವಜನಿಕ ನೀತಿ ಅಧ್ಯಯನಗಳು, ಸಾರ್ವಜನಿಕ ಆರೋಗ್ಯ, ಕಾನೂನು ಸಂಶೋಧನೆ, ರಾಜ್ಯಸಭೆ ಮತ್ತು ಲೋಕಸಭೆ ಅಧಿವೇಶನಗಳಲ್ಲಿ ಮತ್ತು ಮಸೂದೆಗಳಲ್ಲಿ ಜ್ಞಾನ ಹೊಂದಿರಬೇಕು. ಹಾಗು ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿಯೂ ಪತ್ರ ವ್ಯವಹಾರ ನಡೆಸುವುದನ್ನು ಕಲಿತಿರಬೇಕು.
ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ವಹಣೆ ಮಾಡಿರುವ ಅನುಭವವುಳ್ಳ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು
Requirement:
The candidate should have strong hold on English,Kannada and economics, public policy studies, public health,legal research, bills, Should have knowledge on the RS and LS sessions
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹತೇ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಇಚ್ಛಿಸಿದಲ್ಲಿ ಸದರಿ ಹುದ್ದೆಗಳಲ್ಲಿ ಕೆಲಸ ಮಾಡಲು ನಿಮ್ಮ ಅರ್ಹತೆ ಈ ಕೆಲಸಕ್ಕೆ ಸೂಕ್ತ ಎಂದು ಭಾವಿಸಿದರೆ ನಿಮ್ಮ resume ಅನ್ನು 31 -12 -2022ರ ಒಳಗೆ ಈ whatsapp ಸಂಖ್ಯೆಗೆ 70223 40212 ರವಾನಿಸಬೇಕಾಗಿ ಕೋರಲಾಗಿದೆ.
ವಯೋಮಿತಿ:
ಹುದ್ದೆಗಳಿಗೆ ಯಾವುದೇ ವಯೋಮಿತಿ ನಿಗಧಿಪಡಿಸಲಾಗಿಲ್ಲ.
ವೇತನ ಶ್ರೇಣಿ:
ಅರ್ಹತೆಗೆ ಅನುಗುಣವಾಗಿ
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
