ಬಾಲಿವುಡ್ ಸಿನಿಮಾ ರಂಗದ ಹೆಸರಾಂತ ನಟರಲ್ಲಿ ಸಲ್ಮಾನ್ ಖಾನ್ ಕೂಡ ಒಬ್ಬರು. ಜನಪ್ರಿಯ ‘ದಿ ಕಪಿಲ್ ಶರ್ಮಾ’ ಶೋಗೆ ಇತ್ತೀಚಿಗೆ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್ ನಾರಾಯಣ್ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಭಾಗವಹಿಸಿದ್ದರು. ಈ ವೇಳೆ ಅವರು ನಟ ಸಲ್ಮಾನ್ ಖಾನ್ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿದರು.
ಸಿಂಪ್ಲಿಸಿಟಿ ಗೆ ಒಂದು ಹೆಸರು ಎಂದರೆ ಅದು ಸುಧಾ ಮೂರ್ತಿ. ಇತ್ತೀಚಿಗೆ ನಡೆದ ಕಪಿಲ್ ಶರ್ಮ ಕಾರ್ಯಕ್ರಮದಲ್ಲಿ ಇವರು ಸೀರೆ ಧರಿಸಿ ಸಿಂಪಲ್ ಆಗಿ ಬಂದಿದ್ದರು. ಅವರ ಸರಳತೆ ಎಲ್ಲರಿಗೂ ಇಷ್ಟ ಆಗಿದೆ. ಇದಾದ ಬಳಿಕ ಇವರು ಸಲ್ಮಾನ್ ಖಾನ್ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
"The innocence of a child, Only #SalmanKhan can bring it on the Screen, he's fit to do Bajrangi Bhaijaan."#SudhaMurthy Ji on The Kapil Sharma Show. pic.twitter.com/72rbUIp2mh
— Kalpesh (@KalpeshTweets) May 15, 2023
2015ರಲ್ಲಿ ತೆರೆಗೆ ಬಂದ ‘ಬಜರಂಗಿ ಭಾಯಿಜಾನ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಬಜರಂಗಿ ಭಕ್ತನಾಗಿ ಕಾಣಿಸಿಕೊಂಡರೆ ಹರ್ಷಾಲಿ ಮಲ್ಹೋತ್ರಾ ಅವರು ಮುನ್ನಿ ಆಗಿ ಗಮನ ಸೆಳೆದರು. ಈ ಸಿನಿಮಾಗೆ ಸಲ್ಮಾನ್ ಖಾನ್ ಮಾತ್ರ ಸೂಕ್ತ ಎಂದು ಸುಧಾಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಮಗುವಿನ ಮುಗ್ಧತೆಯನ್ನು ಸಲ್ಮಾನ್ ಖಾನ್ ಮಾತ್ರ ತೆರೆಯ ಮೇಲೆ ತರಬಲ್ಲರು. ಅವರು `ಬಜರಂಗಿ ಭಾಯಿಜಾನ್’ ಸಿನಿಮಾ ಮಾಡಲು ಯೋಗ್ಯ ಹೀರೋ ಎಂದಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
