ಭಾರತದ ಕ್ರಿಕೆಟ್ ದಂತಕಥೆ ಲಿಟ್ಲ್ ಮಾಸ್ಟರ್ ಎಂದೇ ಪ್ರಖ್ಯಾತಿಗಳಿಸಿರುವ ಸುನಿಲ್ ಗವಾಸ್ಕರ್ ಚೆನ್ನೈನ ಚೆಪಾಕ್ ಮೈದಾನದಲ್ಲಿ ಧೋನಿ ಬಳಿ ಹೋಗಿ ತಾವು ಧರಿಸಿದ್ದ ಶರ್ಟ್ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡಿರುವ ವಿಷಯ ನಮಗೆಲ್ಲಾ ಗೊತ್ತು. ಇದೀಗ ಇವರು ಧೋನಿ ಬಳಿ ಆಟೋಗ್ರಾಫ್ ಹಾಕಿಸಿಕೊಂಡ ಕ್ಷಣದ ಬಗ್ಗೆ ಹಾಗೂ ತಮ್ಮ ಕೊನೆಯ ಆಸೆಯ ಬಗ್ಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.
Legend #SunilGavaskar reveals why Thala Dhoni’s autograph will be ♾ treasured.
The Little Master remembers two of #TeamIndia's most iconic moments ft. @msdhoni & @therealkapildev that he will cherish forever! 💯
Tune-in to more heartfelt content at #IPLonStar. #BetterTogether pic.twitter.com/QM2ozYZTJO— Star Sports (@StarSportsIndia) May 16, 2023
ಚೆನ್ನೈನಲ್ಲಿ ಧೋನಿಗೆ ಲ್ಯಾಫ್ ಆಫ್ ಆನರ್ ನೀಡುತ್ತಿರುವ ವಿಚಾರ ತಿಳಿದು, ಈ ಕ್ಷಣವನ್ನು ಮತ್ತಷ್ಟು ಸ್ಮರಣೀಯವಾಗಿಸಿಕೊಳ್ಳಬೇಕು ಎಂದು ತೀರ್ಮಾನಿಸಿದೆ. ಈ ಕಾರಣಕ್ಕಾಗಿಯೇ ನಾನು ಒಡೋಡಿ ಧೋನಿ ಬಳಿ ಹೋಗಿ ಅವರ ಆಟೋಗ್ರಾಫ್ ಪಡೆದುಕೊಂಡೆ. ಇದು ಚೆಪಾಕ್‌ನಲ್ಲಿ ಅವರು ಆಡುವ ಕೊನೆಯ ತವರಿನ ಪಂದ್ಯ. ಒಂದುವೇಳೆ ಚೆನ್ನೈ ಪ್ಲೇ ಆಫ್‌ಗೇರಿದರೆ ಮತ್ತೆ ಇಲ್ಲಿ ಕ್ವಾಲಿಫೈಯರ್ ಆಡುವ ಸಾಧ್ಯತೆಯಿದೆ. ಆದರೆ ನಾನು ಈ ಕ್ಷಣವನ್ನೇ ಸ್ಮರಣೀಯವಾಗಿಸಿಕೊಳ್ಳಬೇಕು ಎಂದು ತೀರ್ಮಾನಿಸಿ ಆಟೋಗ್ರಾಫ್ ಪಡೆದುಕೊಂಡೆ. ಕ್ಯಾಮರಾಮನ್‌ನ ವಿಭಾಗದ ಯಾರೋ ಒಬ್ಬರು ನನಗೆ ಮಾರ್ಕರ್ ಪೆನ್ ನೀಡಿದರು. ಹೀಗಾಗಿ ಆ ವ್ಯಕ್ತಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ನಾನು ಧೋನಿ ಬಳಿ ಹೋಗಿ ನನ್ನ ಶರ್ಟ್ ಮೇಲೆ ಆಟೋಗ್ರಾಫ್ ಹಾಕುವಂತೆ ಕೇಳಿಕೊಂಡೆ. ಅವರ ಜತೆ ಮಾತನಾಡಿದ್ದು ಚೆನ್ನಾಗಿತ್ತು. ನನಗೆ ಅದೊಂದು ಭಾವನಾತ್ಮಕ ಕ್ಷಣವಾಗಿತ್ತು. ಯಾಕೆಂದರೆ ಅವರು ಭಾರತ ಕ್ರಿಕೆಟ್‌ಗೆ ಅಸಾಧಾರಣ ಕೊಡುಗೆ ನೀಡಿದ್ದಾರೆ ಎಂದು ಸುನಿಲ್ ಗವಾಸ್ಕರ್, ಆ ಭಾವನಾತ್ಮಕ ಕ್ಷಣವನ್ನು ಮೆಲುಕು ಹಾಕಿದ್ದಾರೆ.
ಇನ್ನು ತಾವು ಕೊನೆಯುಸಿರೆಳೆಯುವ ಮುನ್ನ ತಮ್ಮ ಕೊನೆಯ ಆಸೆಯನ್ನು ಸುನಿಲ್ ಗವಾಸ್ಕರ್ ಬಿಚ್ಚಿಟ್ಟಿದ್ದಾರೆ. “ನಾನು ಕೊನೆಯುಸಿರೆಳೆಯುವ ಮುನ್ನ 1983ರ ಏಕದಿನ ವಿಶ್ವಕಪ್ ಅನ್ನು ಕಪಿಲ್ ದೇವ್ ಎತ್ತಿ ಹಿಡಿಯುತ್ತಿರುವುದು ಹಾಗೂ ಮಹೇಂದ್ರ ಸಿಂಗ್ ಧೋನಿ 2011ರ ಏಕದಿನ ವಿಶ್ವಕಪ್‌ನ ಫೈನಲ್ ಕೊನೆಯ ಸಿಕ್ಸರ್ ಬಾರಿಸುವುದನ್ನು ನೋಡಿ ತಾವು ಕಣ್ಮುಚ್ಚಬೇಕು ಎಂದು ತಮ್ಮ ಎರಡು ಕೊನೆಯ ಆಸೆಯನ್ನು ಹೊರಹಾಕಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
